ಡಾಲಿಯ ಕೋಟಿ ಕೋಟೆಯಿಂದ ಹೊರ ಬಂತು ಮೊದಲ ಹಾಡು

ಕೋಟಿ.. ಡಾಲಿ ಧನಂಜಯ್ ಮಾಡಿರುವ ಹೊಸ ಮಹಾಯಜ್ಞ. ಕಳೆದ ತಿಂಗಳು ಸರಿಯಾಗಿ ಇದೇ ಸಮಯಕ್ಕೆ ಟೀಸರ್ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದ ಈ ಕೋಟಿಯ ಕೋಟೆಯಿಂದ ಸದ್ಯಕ್ಕೆ ಹಾಡೊಂದು ಬಿಡುಗಡೆಯಾಗಿದೆ.

ಮಾತು ಸೋತು ಎಂಬ ಸಾಲುಗಳಿಂದ ಆರಂಭವಾಗುವ ಹಾಡನ್ನ, ಯೋಗರಾಜ್ ಭಟ್ ಬರೆದಿದ್ದಾರೆ. ಇನ್ನೂ ಸಂಗೀತ ವಾಸುಕಿ ವೈಭವ ಅವರದ್ದಾದರೆ ಬಾಲಿವುಡ್‌ನ ಸಿಂಗರ್ ಅರ್ಮಾನ್ ಮಲ್ಲಿಕ್ ಹಾಡನ್ನ ಅಷ್ಟೇ ಸೊಗಸಾಗಿ ಹಾಡಿದ್ದಾರೆ. ಇನ್ನೂ ಅರ್ಮಾನ್ ಮಲ್ಲಿಕ್ ಇದೇ ಮೊದಲ ಬಾರಿ ವಾಸುಕಿ ವೈಭವ್ ಸಂಗೀತ ನಿರ್ದೇಶನದ ಚಿತ್ರಕ್ಕೆ ತಮ್ಮ ಕಂಠವನ್ನ ಕುಣಿಸಿರುವುದು ವಿಶೇಷ.

First song of Daali Dhananjaya s Kotee Maathu Sothu Has Been Released

ಬದಲಾದ ಕಾಲಘಟ್ಟದಲ್ಲಿ, ಒಂದ್ಕಾಲದಲ್ಲಿ ಕಿರುತೆರೆಯ ಕನಸುಗಾರ ಎಂದೇ ಕರೆಯಲ್ಪಟ್ಟ ಪರಮೇಶ್ವರ್ ಗುಂಡ್ಕಲ್ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಈ ಕಾರಣಕ್ಕೆ ಬಹುಕಾಲದ ಕನಸೊಂದು ನನಸಾಗುತ್ತಿರುವ ಸಂಭ್ರಮದಲ್ಲಿರುವ ಪರಮ್ ಅವರಿಗೆ ಈ ಹಾಡು ಕನ್ನಡದ ಕಿವಿ ಮತ್ತು ಮನಸುಗಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ

ಮಿಕ್ಕಂತೆ ಈ ಸಿನಿಮಾಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆದು ಸ್ವತಃ ಪರಮ್‌ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ ಈ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಡಾಲಿ ಧನಂಜಯ ಮತ್ತು ಮೋಕ್ಷಾ ಕುಶಾಲ್‌ ಅವರ ಜೊತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮುಂತಾದವರು ಚಿತ್ರದಲ್ಲಿದ್ದಾರೆ.

first-song-of-daali-dhananjayas-kotee-maathu-sothu-has-been-released

ಇನ್ನೂ ಸಂಗೀತ ನಿರ್ದೇಶನದ ಜವಾಬ್ಧಾರಿ ವಾಸುಕಿ ವೈಭವ್ ವಹಿಸಿಕೊಂಡಿದ್ದರೆ, ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೋಟಿ ಚಿತ್ರದ ಈ ಹಾಡು ಸದ್ದು ಮಾಡುತ್ತಿದೆ. ಎಲ್ಲರ ಗಮನವನ್ನೂ ಸೆಳೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೇವಲ 24 ಘಂಟೆಯಲ್ಲಿ ಹಾಡು ಹೆಚ್ಚು ಕಡಿಮೆ ಒಂದು ಮಿಲಿಯನ್ ವೀಕ್ಷಣೆಯನ್ನ ಗಳಿಸಿದೆ. ಇನ್ನು ಹಾಡಿಗೆ ವ್ಯಕ್ತವಾದ ಅಭಿಪ್ರಾಯಗಳು ಕೂಡ ಚಿತ್ರತಂಡದ ಧೈರ್ಯ ಮತ್ತು ನಂಬಿಕೆ ಹೆಚ್ಚಿಸುವಂತೆ ಇವೆ. ಕೋಟಿ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
The first song from Daali Dhananjaya's upcoming movie Kotee, titled 'Maathu Sothu has been released. The track is composed by Vasuki Vaibhav, penned by Yogaraj Bhat, and voiced by Armaan Malik
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X