For Quick Alerts
  ALLOW NOTIFICATIONS  
  For Daily Alerts

  ಕುರಿ ಕಾಯುವ ಪಾಲಕ್ಕಾಡಿನ ಹೆಣ್ಣುಮಗಳಿಗೆ ರಾಷ್ಟ್ರಪ್ರಶಸ್ತಿ!

  |

  ಪ್ರತಿಭೆ ಎಲ್ಲಿ, ಯಾರಲ್ಲಿ ಅಡಗಿರುತ್ತದೆಯೋ ಬಲ್ಲವರ್ಯಾರು? ಕೆಲವರ ಪ್ರತಿಭೆಗಷ್ಟೆ ಮಾನ್ಯತೆ, ಜನಪ್ರಿಯತೆ ಧಕ್ಕುತ್ತದೆ, ಕೆಲವರ ಪ್ರತಿಭೆಗಳು ಜಗತ್ತಿಗೆ ಪರಿಚಯವೇ ಆಗದೆ ಮಣ್ಣಾಗಿಬಿಡುತ್ತವೆ.

  ಹೀಗೆಯೇ ಕೆರಳದ ಪಾಲಕ್ಕಾಡಿನ ಅಟ್ಟಪಾಡಿಯ ಕಾಡುಗಳಲ್ಲಿ ಪ್ರತಿಭೆಯೊಂದು ಜಗತ್ತಿನಿಂದ ಮರೆಯಾಗಿತ್ತು. ಆ ಪ್ರತಿಭೆ 2020ರಲ್ಲಿ ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕರೊಬ್ಬರಿಂದ ಬೆಳಕು ಕಂಡಿತು. ಆ ಪ್ರತಿಭಾನ್ವಿತೆಯ ಹೆಸರೇ ಗಾಯಕಿ ನಂಜಿಯಮ್ಮ.

  Breaking: 68ನೇ ರಾಷ್ಟ್ರ ಪ್ರಶಸ್ತಿ ಪ್ರಕಟ: ಯಾರಿಗೆ ಯಾವ್ಯಾವ ಪ್ರಶಸ್ತಿ? ಇಲ್ಲಿದೆ ಪಟ್ಟಿ!Breaking: 68ನೇ ರಾಷ್ಟ್ರ ಪ್ರಶಸ್ತಿ ಪ್ರಕಟ: ಯಾರಿಗೆ ಯಾವ್ಯಾವ ಪ್ರಶಸ್ತಿ? ಇಲ್ಲಿದೆ ಪಟ್ಟಿ!

  ನಂಜಿಯಮ್ಮ ಇಂದು ಮಲಯಾಳಂನ ಜನಪ್ರಿಯ ಗಾಯಕಿಯರಲ್ಲೊಬ್ಬರು. ಆದರೆ 2020 ರಲ್ಲಿ ಅವರು ಅಟ್ಟಪ್ಪಾಡಿಯ ಕಾಡುಗಳಲ್ಲಿ ಕುರಿ ಕಾಯುವ, ದನ ಕಾಯುವ ವೃತ್ತಿ ಮಾಡುತ್ತಿದ್ದರು. ಆ ನಂತರವೂ ಅವರದ್ದು ಅದೇ ವೃತ್ತಿಯೇ. ಇವರಿಗೆ ಇಂದು ರಾಷ್ಟ್ರಪ್ರಶಸ್ತಿ ಲಭಿಸಿದೆ.

  ಅತ್ಯುತ್ತಮ ಜನಪದ ಗಾಯಕಿ ಆಗಿರುವ ನಂಜಿಯಮ್ಮ, ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದಲ್ಲಿ 'ಕಲಕಾತ್ತ' ಹಾಡನ್ನು ಹಾಡಿದ್ದಾರೆ. ಈ ಹಾಡಿಗೆ ಇಂದು ರಾಷ್ಟ್ರಪ್ರಶಸ್ತಿ ಘೋಷಣೆಯಾಗಿದೆ. ಹಲವು ಖ್ಯಾತ ನಾಮ ಗಾಯಕಿಯರನ್ನು ಹಿಂದಿಕ್ಕಿ, ಯಾವುದೇ ಸಾಂಪ್ರದಾಯಿಕ ಸಂಗೀತ ಬಾರದ ಹಳ್ಳಿ ಹೆಣ್ಣುಮಗಳು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

  ಅಟ್ಟಪ್ಪಾಡಿಯ ಕಾಡಿನ ಹೆಣ್ಣು ಮಗಳು ನಂಜಿಯಮ್ಮ

  ಅಟ್ಟಪ್ಪಾಡಿಯ ಕಾಡಿನ ಹೆಣ್ಣು ಮಗಳು ನಂಜಿಯಮ್ಮ

  ಅಟ್ಟಪ್ಪಾಡಿಯ ಕಾಡಿನ ಹಾಡಿಗಳಲ್ಲಿ ವಾಸಿಸುವ ನಂಜಿಯಮ್ಮ ಇರುಲ್ ಭಾಷೆಯಲ್ಲಿ ಜನಪದ ಹಾಡುಗಳನ್ನು ಹಾಡಿಕೊಳ್ಳುತ್ತಾರೆ. ಗುಡ್ಡ ಗಾಡುಗಳನ್ನು ಏರಿ ಕುರಿ-ದನ ಕಾಯುವಾಗ ತಮ್ಮ ಸಂತೋಶಕ್ಕೆ ಹಾಡುಗಳನ್ನು ಹಾಡಿಕೊಳ್ಳುತ್ತಿದ್ದರು. ತಮ್ಮ ಸಮುದಾಯದಲ್ಲಿಯೂ ಉತ್ತಮ ಪದಗಾರ್ತಿಯಾಗಿ ನಂಜಿಯಮ್ಮ ಖ್ಯಾತಿ ಪಡೆದಿದ್ದರು. ಅದೇ ಭಾಗದ ಜನಪದ ಕಲಾವಿದ ಪಳನಿ ಸ್ವಾಮಿ, ನಂಜಿಯಮ್ಮನ ಕಲೆ ಗುರುತಿಸಿ ತಮ್ಮ ಜನಪದ ಕಲಾತಂಡದಲ್ಲಿ ನಂಜಿಯಮ್ಮ ಕೈಲಿ ಹಾಡಿಸುತ್ತಾರೆ.

  ಆಜಾದಿ ಕಲಾ ಸಮಿತಿಯಲ್ಲಿ ಹಾಡುತ್ತಿದ್ದ ನಂಜಿಯಮ್ಮ

  ಆಜಾದಿ ಕಲಾ ಸಮಿತಿಯಲ್ಲಿ ಹಾಡುತ್ತಿದ್ದ ನಂಜಿಯಮ್ಮ

  ಜನಪದ ಕಲಾವಿದರ 'ಆಜಾದಿ ಕಲಾ ಸಮಿತಿ'ಯಲ್ಲಿ ಹಾಡಿದ ನಂಜಿಯಮ್ಮನ ಗಾಯನ ಕಂಡ ಸಂಗೀತ ನಿರ್ದೇಶಕ ಜೇಕ್ಸ್ ಬಿಜಾಯ್ ತಮ್ಮ ಸಿನಿಮಾದಲ್ಲಿ ಹಾಡುವ ಅವಕಾಶ ನೀಡುತ್ತಾರೆ. ಇರುಲ್ ಸಮುದಾಯದ ಜನಪದ ತಂಡವನ್ನೇ ಕರೆತಂದು ನಂಜಿಯಮ್ಮನ ಕೈಲಿ ಹಾಡಿಸುತ್ತಾರೆ ಬಿಜಾಯ್. 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾಕ್ಕೆ ಬರೋಬ್ಬರಿ ಮೂರು ಹಾಡುಗಳನ್ನು ನಂಜಿಯಮ್ಮ ಹಾಡಿದ್ದಾರೆ. ಅದರಲ್ಲಿ ಸೋಲೋ ಆಗಿ 'ಕಲಕಾತ್ತ' ಹಾಡು ಹಾಡಿದ್ದಾರೆ. ಸಿನಿಮಾ ಬಿಡುಗಡೆ ಆದಾಗ ಈ ಹಾಡು ದೊಡ್ಡ ಹಿಟ್ ಆಯಿತು.

  ಹಲವು ಅವಕಾಶಗಳು ನಂಜಿಯಮ್ಮನನ್ನು ಅರಸಿ ಬಂದಿವೆ

  ಹಲವು ಅವಕಾಶಗಳು ನಂಜಿಯಮ್ಮನನ್ನು ಅರಸಿ ಬಂದಿವೆ

  'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ 'ಕಲಕತ್ತ' ಹಾಡು ಸೂಪರ್ ಹಿಟ್ ಆದ ಬಳಿಕ ಹಲವು ಅವಕಾಶಗಳು ನಂಜಿಯಮ್ಮನನ್ನು ಅರಸಿ ಬಂದವು. ಕೆಲವು ಡಾಕ್ಯುಮೆಂಟರಿಗಳಲ್ಲಿ ನಂಜಿಯಮ್ಮ ಹಾಡಿದರು. ಟಿವಿ ಶೋಗಳಲ್ಲಿ ಪಾಲ್ಗೊಂಡರು, ಸಿನಿಮಾಗಳಲ್ಲಿ ಹಾಡಿದರು. ಗಾಯನ ಮಾತ್ರವಲ್ಲ ನಟನೆಯ ಅವಕಾಶವೂ ನಂಜಿಯಮ್ಮಗೆ ದೊರಕುತ್ತಿವೆ. ತಾವು ಮೊದಲಿಗೆ ಹಾಡಿದ್ದ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದಲ್ಲಿಯೂ ಸಣ್ಣ ಪಾತ್ರವೊಂದರಲ್ಲಿ ನಂಜಿಯಮ್ಮ ಕಾಣಿಸಿಕೊಂಡಿದ್ದರು.

  ರಾಷ್ಟ್ರಪ್ರಶಸ್ತಿಗೆ ಭಾಜನರಾದ ನಂಜಿಯಮ್ಮ

  ರಾಷ್ಟ್ರಪ್ರಶಸ್ತಿಗೆ ಭಾಜನರಾದ ನಂಜಿಯಮ್ಮ

  2020 ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಇಂದು ಘೋಷಣೆ ಆಗಿದ್ದು, ಅತ್ಯುತ್ತಮ ಗಾಯಕಿ ಪ್ರಶಸ್ತಿ ನಂಜಿಯಮ್ಮಗೆ ದೊರಕಿದೆ. 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ 'ಕಲಕತ್ತ' ಹಾಡು ಹಾಡಿದ್ದಕ್ಕೆ ನಂಜಿಯಮ್ಮ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಮಾತ್ರವೇ ಅಲ್ಲದೆ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸ್ಟಂಟ್ ಕೊರಿಯೋಗ್ರಫಿ ವಿಭಾಗಗಳಲ್ಲಿಯೂ 'ಅಯ್ಯಪ್ಪನುಂ ಕೋಶಿಯುಂ' ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದೆ.

  English summary
  Folk singer Nanjiyamma gets best female singer National award for Ayyappanum Koshiyum Malyalam movie song Kalakkata.
  Saturday, July 23, 2022, 9:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X