ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕ ಯಾರು?

ಹಾಡುಗಳು ಭಾರತೀಯ ಸಿನಿಮಾಗಳ ಜೀವಾಳ. ಆಗೊಮ್ಮೆ ಈಗೊಮ್ಮೆ ಹಾಡುಗಳಿಲ್ಲದೇ ಸಿನಿಮಾ ಮಾಡುವುದು ಇದೆ. ಸಿನಿಮಾ ಗೆಲ್ಲಿಸಲು ಹಾಡುಗಳನ್ನೇ ನೆಚ್ಚಿಕೊಂಡವರು ಇದ್ದಾರೆ. ನಾಲ್ಕೈದು ವಿಭಿನ್ನ ಟ್ಯೂನ್‌ಗಳನ್ನು ಹಾಕಿಸಿ, ಸೂಕ್ತ ಗಾಯಕರಿಂದ ಹಾಡಿಸಿ ಸಿನಿಮಾ ಬಿಡುಗಡೆಗೂ ಮುನ್ನ ಆಲ್ಬಮ್‌ ಹಿಟ್ ಆಗುವಂತೆ ನೋಡಿಕೊಳ್ಳಲಾಗುತ್ತದೆ.

ರಂಗಭೂಮಿಯಿಂದ ಮುಂದುವರೆದ ಭಾಗ ಎನ್ನುವಂತೆ ಸಿನಿಮಾ ರೂಪ ತಳೆಯಿತು. ಭಾರತದಲ್ಲಿ ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಹೆಚ್ಚು ಪ್ರದರ್ಶಿಸಲಾಗುತ್ತಿತ್ತು. ಹಾಗಾಗಿ ಸಿನಿಮಾ ಆರಂಭವಾದಾಗ ನಾಟಕದ ರೀತಿಯೇ ಅಲ್ಲಲ್ಲಿ ಕಂದಪದ್ಯ, ಹಾಡುಗಳನ್ನು ಹಾಡಲು ಸೇರಿಸುವ ಪ್ರಯತ್ನ ನಡೀತು. ಇದು ಮುಂದೆ ದೊಡ್ಡಮಟ್ಟದಲ್ಲಿ ಸಿನಿಮಾಗಳನ್ನು ಆವರಿಸಿಕೊಂಡುಬಿಟ್ಟಿತು. ಒಂದು ಹಾಡು ಹಾಡಲು ಲಕ್ಷ ಲಕ್ಷ ಸಂಭಾವನೆ ಪಡೆಯುವ ಗಾಯಕರು ನಮ್ಮ ಮುಂದೆ ಇದ್ದಾರೆ.

From Shreya Ghoshal to Sonu nigam Top 10 Highest-Paid Singers In India

ಶಾಸ್ತ್ರೀಯವಾಗಿ ಸಂಗೀತ ಕಲಿತವರು ಮೊದಲಿಗೆ ಸಿನಿಮಾಗಳಿಗೆ ಹಾಡುತ್ತಿದ್ದರು. ಯಾವುದೇ ಸಂಗೀತದ ಹಿನ್ನೆಲೆ ಇಲ್ಲದೇ ಹಾಡಿ ಗೆದ್ದ ಪ್ರತಿಭೆಗಳು ಸಾಕಷ್ಟು ಜನ ಇದ್ದಾರೆ. ಆದರೆ ಸಂಗೀತವನ್ನೇ ಉಸಿರಾಗಿಸಿಕೊಂಡವರು ಬಹಳ ದಿನ ಉಳಿದುಕೊಳ್ಳುತ್ತಾರೆ. ಕೆಲವರ ಕಂಠದಲ್ಲಿ ಮಾಂತ್ರಿಕ ಶಕ್ತಿ ಇರುತ್ತದೆ. ಅವರ ಹಾಡು ಕೇಳುತ್ತಿದ್ದಂತೆ ಕೇಳುಗರು ಕಳೆದು ಹೋಗುತ್ತಾರೆ. ಮೊದಲೆಲ್ಲಾ ಹಾಡು ಹಾಡಿದ್ದಾರೆ ಎಂದು ನೋಡಿ ಜನ ಕ್ಯಾಸೆಟ್ ಖರೀದಿಸುತ್ತಿದ್ದರು. ಇವತ್ತಿಗೂ ಗಾಯಕರು ಯಾರು ಎನ್ನುವ ವಿಚಾರ ಆಡಿಯೋ ರೈಟ್ಸ್ ಮಾರಾಟದ ವೇಳೆ ಚರ್ಚೆಗೆ ಬರುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರು ಯಾರು ಗೊತ್ತಾ? ಅಂತ ಟಾಪ್ 10 ಗಾಯಕರ ಲಿಸ್ಟ್ ಮುಂದೆ ಇದೆ ಓದಿ.

ಮಿಕಾ ಸಿಂಗ್

ಪಶ್ಚಿಮ ಬಂಗಾಳ ಮೂಲದ ಗಾಯಕ ಮಿಕಾ ಸಿಂಗ್ ಹಲವು ಸೂಪರ್ ಹಿಟ್ ಗೀತೆಗಳಿಗೆ ದನಿಯಾಗಿದ್ದಾರೆ. 2006ರಲ್ಲಿ 'ಅಪ್ನಾ ಸಪ್ನಾ ಮನಿ ಮನಿ' ಎಂಬ ಹಾಡು ಹಾಡುವ ಮೂಲಕ ಅವರು ಲೈಮ್‌ಲೈಟ್‌ಗೆ ಬಂದಿದ್ದರು. ಬಳಿಕ ಬಾಲಿವುಡ್ ಸಿನಿಮಾಗಳಿಗಾಗಿ ನೂರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡದ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಚಿತ್ರದ 'ನಿದ್ದೆ ಬಂದಿಲ್ಲ' ಹಾಡಿಗೆ ಕೂಡ ದನಿಯಾಗಿದ್ದರು. ಒಂದು ಹಾಡು ಹಾಡಲು ಮಿಕಾ ಸಿಂಗ್ 10 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗ್ತಿದೆ.

From Shreya Ghoshal to Sonu nigam Top 10 Highest-Paid Singers In India

ನೇಹಾ ಕಕ್ಕರ್

ಇತ್ತೀಚಿನ ವರ್ಷಗಳಲ್ಲಿ ತಮ್ಮ ಗಾಯನದಿಂದ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿರುವ ಗಾಯಕಿ ನೇಹಾ ಕಕ್ಕರ್. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಚೆಲುವೆ ಜಾಹೀರಾತುಗಳ ಮೂಲಕವೂ ಹಣ ಸಂಪಾದಿಸುತ್ತಿದ್ದಾರೆ. 'ಯಾರಿಯಾನ್' ಚಿತ್ರದ 'ಸನ್ನಿ ಸನ್ನಿ', 'ಸತ್ಯಮೇವ್ ಜಯತೆ' ಚಿತ್ರದ 'ದಿಲ್‌ಬರ್' ಹಾಗೂ 'ಬಾರ್ ಬಾರ್ ದೇಕೊ' ಚಿತ್ರದ 'ಕಲಾ ಚಶ್ಮಾ' ರೀತಿ ಹಿಟ್ ಗೀತೆಗಳಿಗೆ ನೇಹಾ ದನಿಯಾಗಿದ್ದಾರೆ. ಒಂದು ಹಾಡು ಹಾಡಲು ಆಕೆ 10 ಲಕ್ಷ ರೂ. ಕೇಳುತ್ತಾರೆ ಎಂದು ವರದಿಯಾಗಿದೆ.

ಹನಿ ಸಿಂಗ್

ಯೋ ಯೋ ಹನಿಸಿಂಗ್. ಈ ಗೊತ್ತಿಲ್ಲದಿದ್ದರೂ ಈತನ ಹಾಡುಗಳನ್ನು ಬಹುತೇಕರು ಗುನುಗಿರುತ್ತಾರೆ. ತನ್ನ 'ಹಿಪ್‌ ಹಾಪ್' ಶೈಲಿಯ ಗಾಯನದಿಂದ ಹನಿಸಿಂಗ್ ಗಮನ ಸೆಳೆದವರು. ಸಾಕಷ್ಟು ಆಲ್ಬಮ್ ಸಾಂಗ್‌ಗಳಿಗೆ ಕೂಡ ದನಿಯಾಗಿದ್ದಾರೆ. 'ಲುಂಗಿ ಡ್ಯಾನ್ಸ್'(ಚೆನ್ನೈ ಎಕ್ಸ್‌ಪ್ರೆಸ್), 'ಪಾರ್ಟಿ ಆಲ್‌ ನೈಟ್'(ಬಾಸ್), 'ಪಾರ್ಟಿ ವಿತ್ ಬೂತ್‌ನಾಥ್'(ಬೂತ್‌ನಾಥ್ ರಿಟರ್ನ್ಸ್) ರೀತಿಯ ಹಿಟ್ ಸಾಂಗ್ಸ್ ಅವರ ಲಿಸ್ಟ್‌ನಲ್ಲಿದೆ. ಹನಿ ಸಿಂಗ್ ಒಂದು ಹಾಡು ಹಾಡಲು 10ರಿಂದ 12 ಲಕ್ಷ ರೂ. ಜೇಬಿಗಳಿಸುತ್ತಾರೆ.

ದಿಲ್ಜಿತ್ ದೋಸಾಂಜ್

ನಟ, ಗಾಯಕ ದಿಲ್ಜಿತ್ ದೋಸಾಂಜ್ ಕೂಡ ಬಹುಬೇಡಿಕೆ ಗಾಯಕರಾಗಿ ಗುರ್ತಿಸಿಕೊಂಡಿದ್ದಾರೆ. ಹಿಂದಿ ಹಾಗೂ ಪಂಜಾಬಿ ಭಾಷೆಯ ಹಾಡುಗಳನ್ನ ಹಾಡಿ ಅವರು ಜನಪ್ರಿಯತೆ ಗಳಿಸಿದ್ದಾರೆ. ಸೋಲೊ ಆಲ್ಬಮ್‌ಗಳಿಂದ ದಿಲ್ಜಿತ್ ಹೆಚ್ಚು ಸಂಗೀತ ಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ. ಅವರೊಟ್ಟಿಗೆ ಆಲ್ಬಮ್ ಸಾಂಗ್ಸ್ ಹಾಡಿಸಲು ಆಡಿಯೋ ಸಂಸ್ಥೆಗಳ ಮುಗಿಬೀಳುತ್ತಿವೆ. ಕೆಲವೊಮ್ಮೆ 10 ರಿಂದ 50 ಲಕ್ಷದವರೆಗೂ ಆಲ್ಬಮ್‌ಗಳಿಗೆ ಅವರು ಚಾರ್ಜ್ ಮಾಡಿರುವ ಉದಾಹರಣೆಯಿದೆ.

ಬಾದ್‌ಶಾ

ಲೇಟೆಸ್ಟ್ ರ್ಯಾಪ್ ಸೆನ್ಸೇಷನ್ ಅಂದರೆ ಅದು ಬಾದ್‌ಶಾ. ದೆಹಲಿಯ ಆದಿತ್ಯ ಪ್ರತೀಕ್ ಸಿಂಗ್ ಸಂಗೀತ ಪ್ರೇಮಿಗಳಿಗೆ ಬಾದ್‌ಶಾ ಎಂದೇ ಚಿರಪರಿಚಿತ. 'ಫರಾಟ್ಟಾ'(ಜವಾನ್), 'ಮುನ್ನಾ ಬದ್ನಾಮ್ ಹುವಾ'(ದಬಾಂಗ್-3) ಸೇರಿದಂತೆ ಹಲವು ಹಿಟ್ ಗೀತೆಗಳನ್ನು ಅವರು ಹಾಡಿದ್ದಾರೆ. ಅಂದಹಾಗೆ ಒಂದು ಹಾಡು ಹಾಡಲು 18ರಿಂದ 20 ಲಕ್ಷ ರೂ. ಡಿಮ್ಯಾಂಡ್ ಮಾಡುತ್ತಾರೆ ಎನ್ನಲಾಗ್ತಿದೆ.

ಸೋನು ನಿಗಮ್

ಕನ್ನಡ ಸಿನಿರಸಿಕರಿಗೆ ಕೂಡ ಸೋನು ನಿಗಮ್ ಇಷ್ಟದ ಗಾಯಕ. ಅವರು ಹಾಡಿರು ಬಹುತೇಕ ಕನ್ನಡ ಹಾಡುಗಳು ಸೂಪರ್ ಹಿಟ್ ಆಗಿದೆ. ಇನ್ನು ಗಾಯನಕ್ಕಾಗಿ ಅವರು ಪಡೆದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಬಾಲನಟರಾಗಿಯೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಹಿಂದಿ ಬಿಟ್ಟರೆ ಕನ್ನಡದಲ್ಲೇ ಸೋನು ನಿಗಮ್ ಕ್ರೇಜ್ ಹೆಚ್ಚಿದೆ. ಈವೆರೆಗೆ ಒಟ್ಟು 6000ಕ್ಕೂ ಅಧಿಕ ಗೀತೆಗಳನ್ನು ಹಾಡಿ ಸೈ ಎನಿಸಿಕೊಂಡಿದ್ದಾರೆ.

90ರ ದಶಕದ ಆರಂಭದಲ್ಲೇ ಸೋನು ನಿಗಮ್ ಹಾಡುಗಳನ್ನು ಹಾಡಲು ಆರಂಭಿಸಿದರು. 'ಮುಂಗಾರುಮಳೆ' ಚಿತ್ರದ 'ಅನಿಸುತ್ತಿದೆ ಯಾಕೊ ಇಂದು' ಹಾಡು ಕನ್ನಡದಲ್ಲಿ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. 1996ರಲ್ಲಿ ಬಂದ 'ಜೀವನದಿ' ಚಿತ್ರದಿಂದ ಕನ್ನಡದಲ್ಲಿ ಅವರು ಆರಂಭಿಸಿದ್ದರು. 10 ವರ್ಷಗಳ ಬಳಿಕ ದೊಡ್ಡ ಬ್ರೇಕ್ ಸಿಕ್ಕಿತ್ತು. ಸೋನು ನಿಗಮ್ ಕೂಡ ಒಂದು ಹಾಡು ಹಾಡಲು 15ರಿಂದ 20 ಲಕ್ಷ ರೂ. ಸಂಭಾವನೆ ಕೇಳುತ್ತಾರೆ.

ಅರ್ಜಿತ್ ಸಿಂಗ್

ಮೆಲೋಡಿ ಹಾಡುಗಳನ್ನು ಹಾಡಿ ಇತ್ತೀಚೆಗೆ ಭಾರೀ ಸದ್ದು ಮಾಡಿದವರು ಅರ್ಜಿತ್ ಸಿಂಗ್. ಪುನೀತ್ ರಾಜ್‌ಕುಮಾರ್ ನಟನೆಯ 'ನಿನ್ನಿಂದಲೇ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ತಮಿಳು, ತೆಲುಗು, ಮಲಯಾಳಂ ಗೀತೆಗಳಿಗೂ ದನಿಯಾಗಿದ್ದಾರೆ. ಅರ್ಜಿತ್ ಸಿಂಗ್ ಒಂದು ಹಾಡಿಗೆ 18ರಿಂದ 20 ಲಕ್ಷ ರೂ. ಚಾರ್ಜ್ ಮಾಡುತ್ತಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸುನಿಧಿ ಚೌಹಾಣ್

ಚುಕುಬುಕು ರೈಲು(ಜೋಗಿ), ಗಂಡಸು ಹೊರಗಡೆ ಹೋದಾಗ(ಅಣ್ಣ-ತಂಗಿ), ಕುಣಿದು ಕುಣದು(ಮುಂಗಾರುಮಳೆ), ರಾರಾ ರಕ್ಕಮ್ಮ(ವಿಕ್ರಾಂತ್ ರೋಣ) ಸೇರಿ ಕನ್ನಡದಲ್ಲಿ ಹಲವು ಹಿಟ್ ಗೀತೆಗಳಿಗೆ ಸುನಿಧಿ ಚೌಹಾಣ್ ದನಿಯಾಗಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಕೂಡ ಹಲವು ಹಿಟ್ ಗೀತೆಗಳನ್ನು ಹಾಡಿದ್ದಾರೆ. ಈಕೆ ಒಂದು ಹಾಡು ಹಾಡಿಗೆ 20 ಲಕ್ಷ ರೂ.ವರೆಗೆ ಸಂಭಾವನೆ ಕೇಳುತ್ತಾರೆ ಎನ್ನುವ ಮಾತಿದೆ.

ಶ್ರೇಯಾ ಘೋಷಾಲ್

ಮೆಲೋಡಿ ಸಾಂಗ್ ಆಗಿರಲಿ ಐಟಂ ಸಾಂಗ್ ಇರಲಿ ಶ್ರೇಯಾ ಘೋಷಾಲ್ ಹಾಡಿದರೆ ಅದಕ್ಕೆ ಹೊಸ ಶಕ್ತಿಯೇ ಬಂದುಬಿಡುತ್ತದೆ. ತನ್ನ ಅದ್ಭುತ ಗಾಯನದಿಂದ ದೇಶ ವಿದೇಶಗಳಲ್ಲಿ ಮೋಡಿ ಮಾಡಿದವರು ಶ್ರೇಯಾ ಘೋಷಾಲ್. ಸಾಕಷ್ಟು ಲೈವ್ ಕಾನ್ಸರ್ಟ್‌ಗಳಲ್ಲಿ ಕೂಡ ಹಾಡಿ ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ಶ್ರೇಯಾ ದನಿಯಲ್ಲೇ ಒಂದು ಜಾದೂ ಇದೆ. ಒಂದು ಹಾಡು ಹಾಡಲು 25 ಲಕ್ಷ ರೂ. ಕೇಳುತ್ತಾರೆ ಎನ್ನಲಾಗುತ್ತಿದೆ. ದಕ್ಷಿಣದ ಭಾಷೆಗಳಲ್ಲಿ ಹಾಡಲು ಸಂಭಾವನೆ ಕಮ್ಮಿ ಮಾಡಿಕೊಳ್ಳುತ್ತಾರೆ.

ಎ. ಆರ್ ರಹಮಾನ್

ಸಂಗೀತ ನಿರ್ದೇಶಕ ಎ. ಆರ್ ರಹಮಾನ್ ತಮ್ಮ ಗಾಯನದಿಂದಲೂ ಕಮಾಲ್ ಮಾಡಿದ್ದಾರೆ. 'ಮಾ ತುಜೆ ಸಲಾಮ್' ರೀತಿಯ ಅದ್ಭುತ ಹಾಡುಗಳನ್ನು ಹಾಡಿ ಮ್ಯಾಜಿಕ್ ಮಾಡಿದ್ದಾರೆ. ಒಂದು ಹಾಡು ಹಾಡಲು 3 ಕೋಟಿ ರೂ.ವರೆಗೆ ರಹಮಾನ್ ಚಾರ್ಜ್ ಮಾಡುತ್ತಾರೆ ಎನ್ನುವ ಅಂದಾಜಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕ ಎನಿಸಿಕೊಂಡಿದ್ದಾರೆ.

More from Filmibeat

English summary
Sonu nigam, Sunidhi Chauhan, Arijit Singh, Shreya Ghoshal; meet India's top 10 highest-paid singers
Read more about: a r rahman
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X