Gagana Nee Lyrical Song : 'ಕೆಜಿಎಫ್ 2' ಹಾಡು ಬಿಡುಗಡೆ: ರಾಕಿ ಭಾಯ್‌ಗೆ ತಾಯಿಯ ಹಾರೈಕೆ

'ಕೆಜಿಎಫ್ 2' ಸಿನಿಮಾದ ಎರಡನೇ ಹಾಡು ಇಂದು ಬಿಡುಗಡೆ ಆಗಿದೆ. ಮೊದಲಿಗೆ 'ತೂಫಾನ್' ಹೆಸರಿನ ಅಬ್ಬರದ ಹಾಡು ಬಿಡುಗಡೆ ಆಗಿತ್ತು, ಈಗ ತಾಯಿ ಸೆಂಟಿಮೆಂಟ್‌ನ ಗೀತೆಯೊಂದು ಬಿಡುಗಡೆ ಆಗಿದೆ.

'ಗಗನ ನೀ' ಹೆಸರಿನ ಹಾಡು ಇಂದು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದೆ.

ರಾಕಿ ಭಾಯ್‌ ತಾಯಿ ತನ್ನ ಮಗನಿಗಾಗಿ ಹಾಡುವ ಹಾಡು ಇದಾಗಿದ್ದು. ನನ್ನ ಮಗ ಹೇಗೆ ಬೆಳೆಯಬೇಕು, ನನ್ನ ಮಗ ಹೇಗಿರಬೇಕು ಎಂದು ಮಹಾತ್ವಾಕಾಂಕ್ಷಿ ತಾಯಿಯೊಬ್ಬಳು ಹೇಳುವ ಹಾಡು ಇದಾಗಿದೆ.

Gagana Nee Lyrical Video Song from KGF Chapter 2 Released

ಪ್ರಾಸದ ಕಡೆ ಹೆಚ್ಚು ಗಮನಹರಿಸದೆ ಕೇವಲ ಮೌಲ್ವಿಕ ಶಬ್ದಗಳನ್ನು ಜೋಡಿಸಿ ಸುಂದರವಾಗಿ ಹಾಡು ಕಟ್ಟಲಾಗಿದೆ. ಅದಕ್ಕೆ ರವಿ ಬಸ್ರೂರು ರಾಗದ ಮಟ್ಟುಗಳನ್ನು ಹೆಣೆದಿದ್ದಾರೆ. ಮಂದ್ರವಾಗಿ ನಡುವೊಮ್ಮೆ ರೌದ್ರವಾಗಿ ಒಟ್ಟಾರೆ ಹಾಡು ಚೆನ್ನಾಗಿದೆ. ಅಲ್ಲಲ್ಲಿ 'ಕೆಜಿಎಫ್: ಚಾಪ್ಟರ್ 1'ನ 'ಗರ್ಭಧಿ ನನ್ನಿರಿಸಿ' ಹಾಡು ನೆನಪಿಗೆ ಬರುತ್ತದೆ.

'ಗಗನ ನೀ' ಹಾಡಿಗೆ ಸಾಹಿತ್ಯವನ್ನು ಕಿನ್ನಲ ರಾಜ ಬರೆದಿದ್ದಾರೆ. ಈ ಹಿಂದೆ 'ಕೆಜಿಎಫ್: ಚಾಪ್ಟರ್ 1' ಸಿನಿಮಾದ ಸೆಂಟಿಮೆಂಟ್ ಹಾಡಿಗೂ ಇವರೇ ಸಾಹಿತ್ಯ ಬರೆದಿದ್ದರು.

ಕನ್ನಡದ 'ಗಗನ ನೀ' ಹಾಡು ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ 2.75 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಹಾಡೂ ಸಹ ಯೂಟ್ಯೂಬ್‌ನಲ್ಲಿ ದಾಖಲೆಗಳನ್ನು ನಿರ್ಮಸುವುದರಲ್ಲಿ ಅನುಮಾನವೇ ಇಲ್ಲ. ಕನ್ನಡ ಭಾಷೆಯ ಹಾಡು ಮಾತ್ರವೆ ಅಲ್ಲದೆ ಇತರ ಭಾಷೆಗಳಲ್ಲಿ ಬಿಡುಗಡೆ ಆಗಿರುವ ಹಾಡು ಸಹ ದೊಡ್ಡ ಮಟ್ಟದಲ್ಲಿ ವೀವ್ಸ್ ಪಡೆದುಕೊಳ್ಳುತ್ತಿವೆ.

'ಕೆಜಿಎಫ್ 2' ನ 'ತೂಫಾನ್' ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿ ಯೂಟ್ಯೂಬ್‌ನಲ್ಲಿ ರೆಕಾರ್ಡ್‌ಗಳನ್ನು ಬರೆದಿತ್ತು. ಮಾಸ್ ಹಾಡಾಗಿದ್ದ 'ತೂಫಾನ್' ರಾಕಿ ಭಾಯ್‌ ಅಭಿಮಾನಿಗಳನ್ನು ಸೆಳೆದಿತ್ತು. ಈಗ ಸೆಂಟಿಮೆಂಟ್ ಹಾಡು ಸಹ ಮೆಚ್ಚುಗೆ ಗಳಿಸುತ್ತಿದೆ.

'ಕೆಜಿಎಫ್ 2' ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್ ಇನ್ನೂ ಹಲವರು ನಟಿಸಿದ್ದಾರೆ. ಭಾರತದ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಗಳಿಕೆಯಲ್ಲಿ ಬಹುದೊಡ್ಡ ದಾಖಲೆಯನ್ನು ಈ ಸಿನಿಮಾ ಮಾಡುವ ನಿರೀಕ್ಷೆ ಇದೆ.

More from Filmibeat

English summary
Gagana Nee lyrical video song from KGF chapter 2 released. KGF 2 movie's Toofaan song released few days back and it became viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X