'ಗಾಳಿಪಟ' ಚಿತ್ರಕ್ಕಾಗಿ ಮಾಡಿದ ಹಾಡು ಪುನೀತ್ ಸಿನಿಮಾ ಪಾಲಾಯ್ತು; ಇಂಟ್ರೆಸ್ಟಿಂಗ್ ಕಥೆ ಹೇಳಿದ ಗಣಿ

ಯಾವುದೋ ಚಿತ್ರಕ್ಕೆ ಮಾಡಿದ ಹಾಡು ಮತ್ಯಾವುದೋ ಚಿತ್ರಕ್ಕೆ ಬಳಕೆ ಆಗುತ್ತದೆ. ಸಂಗೀತ ನಿರ್ದೇಶಕರು ಹಾಕಿದ ಟ್ಯೂನ್‌ಗಳೆಲ್ಲಾ ಓಕೆ ಆಗಲ್ಲ. ಹಾಗೆ ಬೇಡ ಎಂದು ರಿಜೆಕ್ಟ್ ಮಾಡಿದ ಟ್ಯೂನ್ ಮತ್ತೊಬ್ಬರು ಕೇಳಿ ಇಷ್ಟಪಟ್ಟು ಬಳಸಿಕೊಂಡು ಹಿಟ್ ಆಗಿರುವ ಉದಾಹರಣೆಗಳಿವೆ.

'ಅಣ್ಣಾಬಾಂಡ್' ಚಿತ್ರಕ್ಕಾಗಿ ಮಾಡಿದ್ದ ಟ್ಯೂನ್ ಬಳಿಕ 'ಮಿ. ಅಂಡ್ ಮಿ. ರಾಮಾಚಾರಿ' ಚಿತ್ರಕ್ಕೆ ಬಳಕೆ ಆಗಿದ್ದು ಹೇಗೆ ಎಂದು ಇತ್ತೀಚೆಗೆ ಯೋಗರಾಜ್ ಭಟ್ ಹೇಳಿದ್ದರು. ಹಲವು ವರ್ಷಗಳ ಬಳಿಕ ಈ ಇಂಟ್ರೆಸ್ಟಿಂಗ್ ಸಂಗತಿಯನ್ನು ಭಟ್ರು ರಿವೀಲ್ ಮಾಡಿದ್ದರು. ಇದನ್ನು ಕೇಳಿ ಕೆಲವರು ಹುಬ್ಬೇರಿಸಿದ್ದರು. ಇದೀಗ ನಟ ಗಣೇಶ್ ಇಂತದ್ದೇ ಕಹಾನಿ ಬಿಚ್ಚಿಟ್ಟಿದ್ದಾರೆ.

Ganesh reveals why Gaalipata song used in Puneeth Rajkumar s film

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯಸಖಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಹಾಡುಗಳು ಒಂದೊಂದಾಗಿ ರಿಲೀಸ್ ಆಗಿ ಕೇಳುಗರ ಗಮನ ಸೆಳೆದಿದೆ. ಇತ್ತೀಚೆಗೆ 'ಮಿರ್ಚಿ ಕನ್ನಡ' ಯೂಟ್ಯೂಬ್ ಸಂದರ್ಶನದಲ್ಲಿ ಗಣೇಶ್ ಭಾಗಿ ಆಗಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

'ಗಾಳಿಪಟ' ಚಿತ್ರದ ಆಲ್ಬಮ್ ಹಿಟ್ ಆಗಿತ್ತು. ಎಲ್ಲಾ ಹಾಡು ಒಂದಕ್ಕಿಂತ ಒಂದು ಸೂಪರ್ ಎನ್ನುವಂತಿತ್ತು. ಅದರಲ್ಲೂ ರೊಮ್ಯಾಂಟಿಕ್ ನಂಬರ್ 'ಮಿಂಚಾಗಿ ನೀನು ಬರಲು' ಹಲವರ ಫೇವರಿಟ್. ಆದರೆ ಈ ಸಾಂಗ್ ಆಯ್ಕೆ ಮಾಡಿಕೊಳ್ಳುವ ಮುನ್ನ ಮತ್ತೊಂದು ಆಪ್ಷನ್ ಇತ್ತು. ಎರಡು ಹಾಡುಗಳಲ್ಲಿ ಇದನ್ನು ಫೈನಲ್ ಮಾಡಿದೆವು ಎಂದು ಗಣೇಶ್ ವಿವರಿಸಿದ್ದಾರೆ.

Ganesh reveals why Gaalipata song used in Puneeth Rajkumar s film

"ಎಲ್ಲೂ ಹೇಳದ ಇಂಟ್ರೆಸ್ಟಿಂಗ್ ಸಂಗತಿ ಒಂದು ಹೇಳ್ತೀನಿ. 'ಮಿಂಚಾಗಿ ನೀನು ಬರಲು' ಸಾಂಗ್ ಓಕೆ ಆಗುವುದಕ್ಕೆ ಮುಂಚೆ ಎರಡು ಸಾಂಗ್ ಬಂತು. 'ಮಿಂಚಾಗಿ' ಸಾಂಗ್ ಬಳಸಿಕೊಂಡ್ವಿ. ಇನ್ನೊಂದು 'ರಾಜ್‌ ದಿ ಶೋಮ್ಯಾನ್' ಚಿತ್ರಕ್ಕೆ ಹೋಯಿತು. ಕಣ್ಣಲೆ ಹನಿ ಗವನ ಸುಮ್ಮನೆ ಬರೆದರೆ ನೀ, ನನ್ನೆಯ ಕಥೆಯೇನು? ಪೋಲಿ ನಾನು ಎಂದು ಆ ಹಾಡಿತ್ತು"

"ಇದು ಸ್ವಲ್ಪ ಫಾಸ್ಟ್ ಆಯ್ತು ಅಂತ ಅದೇ ಸಾಲನ್ನು 'ಹೇಳಿ ಕೇಳಿ ಮೊದಲೇ ಚೂರು ಪೋಲಿ ನಾನು' ಎಂದು ಬಳಸಿಕೊಂಡ್ವಿ. ಎಷ್ಟೋ ಜನಕ್ಕೆ ಇದು ಗೊತ್ತಿಲ್ಲ. ಎರಡು ದಿನ ಇದೇ ಹಾಡು ಕೇಳಿ ಕೇಳಿದ್ದೆವು. ಕೊನೆಗೆ 'ಮಿಂಚಾಗಿ ನೀನು ಬರಲು' ಆಯ್ಕೆ ಆಗಿತ್ತು" ಎಂದು ಗಣೇಶ್ ಹೇಳಿದ್ದಾರೆ.

ಅಂದಹಾಗೆ 'ಮಿಂಚಾಗಿ ನೀನು ಬರಲು' ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರು. 'ಪೊಲೀ ಇವನು' ಎನ್ನುವನ್ನು ಸೇರಿಸಿಕೊಂಡು 'ರಾಜ್- ದಿ ಶೋಮ್ಯಾನ್' ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್ ಸಾಲುಗಳನ್ನು ಪೋಣಿಸಿದ್ದರು. ಎರಡೂ ಹಾಡುಗಳು ಹಿಟ್ ಆಗಿತ್ತು. ಎರಡಕ್ಕೂ ಹರಿಕೃಷ್ಣ ಟ್ಯೂನ್ ಹಾಕಿದ್ದರು.

'ಗಾಳಿಪಟ' ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನವಿತ್ತು. ಗಣೇಶ್ ಜೊತೆ ರಾಜೇಶ್ ಕೃಷ್ಣನ್ ಹಾಗೂ ದಿಗಂತ್ ನಟಿಸಿದ್ದರು. ಅವತ್ತಿನ ಕಾಲಕ್ಕೆ ಬಹಳ ದುಬಾರಿ ಸಿನಿಮಾ ಎನಿಸಿಕೊಂಡಿತ್ತು. ಈ ಚಿತ್ರಕ್ಕಾಗಿ ಗಣೇಶ್‌ಗೆ 1 ಕೋಟಿ ರೂ. ಸಂಭಾವನೆ ಸಿಕ್ಕಿತ್ತು ಎಂದು ಸುದ್ದಿಯಾಗಿತ್ತು. ಇತ್ತೀಚೆಗೆ ಅದನ್ನು ಪರೋಕ್ಷವಾಗಿ ಸ್ವತಃ ಗೋಲ್ಡನ್ ಸ್ಟಾರ್ ಒಪ್ಪಿಕೊಂಡಿದ್ದರು.

ಇನ್ನು ಜೋಗಿ ಪ್ರೇಮ್ ನಿರ್ದೇಶನದ 'ರಾಜ್‌- ದಿ ಶೋಮ್ಯಾನ್' ಒಂದು ಮಟ್ಟಕ್ಕೆ ಗೆದ್ದಿತ್ತು. ಚಿತ್ರದಲ್ಲಿ ಜ್ಯೂ. ಆರ್ಟಿಸ್ಟ್ ಕಥೆಯನ್ನು ಪ್ರೇಮ್ ಹೇಳಿದ್ದರು. ಪುನೀತ್ ರಾಜ್‌ಕುಮಾರ್ ನಟನೆಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತ್ತು.

More from Filmibeat

English summary
Ganesh says interesting story behind Minchagi Neenu song from gaalipata.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X