'ಚಮಕ್' ಚಿತ್ರದ ಖುಷಿಯಾದ ಈ ಹಾಡಿನ ವಿಡಿಯೋ ನೋಡಿ
ಗಣೇಶ್ ಅಭಿನಯ 'ಚಮಕ್' ಸಿನಿಮಾ ಈಗಾಗಲೇ ಟೀಸರ್ ಮೂಲಕ ದೊಡ್ಡ ಸುದ್ದಿ ಮಾಡಿದೆ. ಈಗ ಈ ಚಿತ್ರದ ವಿಡಿಯೋ ಹಾಡೊಂದು ಇದೀಗ ಬಿಡುಗಡೆಯಾಗಿದೆ.
'ಖುಷ್ ಖುಷ್...' ಎಂಬ ಈ ಹಾಡನ್ನು ವಿಶ್ವ ವಿಜೇತ್ ಎಂಬುವವರು ಬರೆದಿದ್ದಾರೆ. ಜೂರ ಸ್ಯಾಂಡಿ ಮ್ಯೂಸಿಕ್ ನೀಡಿದ್ದು, 'ಸರಿಗಮಪ' ಖ್ಯಾತಿಯ ಸಂಚಿತ್ ಹೆಗ್ಡೆ ಈ ಹಾಡನ್ನು ಹಾಡಿದ್ದಾರೆ. ಸಿನಿಮಾ ಹಾಡು ಕೇಳುವುದಕ್ಕೆ ಸಖತ್ ಫ್ರೆಶ್ ಆಗಿದೆ. ಹಾಡಿನಲ್ಲಿ ಗಣೇಶ್ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದು, ರಶ್ಮಿಕಾ ಮಂದಣ್ಣ ಹೋಮ್ಲಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿದೇಶದ ಅನೇಕ ಸುಂದರ ತಾಣದಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಹಾಡಿನಲ್ಲಿ ಕ್ಯಾಮರಾ ವರ್ಕ್ ಇಷ್ಟ ಆಗುವಂತಿದೆ.

'ಚಮಕ್' ಆಡಿಯೋ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್ 4 ರಂದು ನಡೆದಿದ್ದು, ವಿಡಿಯೋ ಹಾಡನ್ನು ಇಂದು ರಿಲೀಸ್ ಮಾಡಲಾಗಿದೆ. ಅಂದಹಾಗೆ, ಸದ್ಯ ಟೀಸರ್ ಮತ್ತು ಹಾಡಿಗಳ ಮೂಲಕ ಗಮನ ಸೆಳೆದ ಈ ಚಿತ್ರಕ್ಕಾಗಿ ಎಲ್ಲರು ಕಾಯುತ್ತಿದ್ದಾರೆ. ಇನ್ನು 'ಚಮಕ್' ಸಿನಿಮಾ ಇದೇ ತಿಂಗಳು 29ಕ್ಕೆ ಬಿಡುಗಡೆಯಾಗಲಿದೆ.
More from Filmibeat
English summary
Actor Goldan Star Ganesh and Rashmika Mandanna starrer kannada movie 'Chamak' video song released. The movie will be released on December29th.


Click it and Unblock the Notifications











