ಕನ್ನಡಕ್ಕಾಗಿ ಹೋರಾಡಿದ ಕಲಿಗಳಿಗೆ ಹಾಡು ಅರ್ಪಿಸಿದ ಗಣೇಶ್
Recommended Video
ಕನ್ನಡ ಕನ್ನಡ ಕನ್ನಡವೆ ಸತ್ಯ...ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದ ಹಾಡಿನ ಸಾಲುಗಳಿವು. ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಗೀತಾ ಚಿತ್ರದ ಕನ್ನಡದ ಹಾಡು ರಿಲೀಸ್ ಆಗಿದೆ. ಈ ಹಾಡು ಕೇಳಿದ ಮೇಲೆ, ಅಭಿಮಾನಿಗಳಲ್ಲಿ ಚಿತ್ರದ ಮೇಲಿದ್ದ ನಿರೀಕ್ಷೆ ಮಟ್ಟ ಮತ್ತಷ್ಟು ಹೆಚ್ಚಾಗಿದೆ.
ಯಾಕಂದ್ರೆ ಈ ಹಾಡು ಪ್ರತಿಯೊಬ್ಬ ಕನ್ನಡಿಗನ ಮೈ ನವಿರೇಳಿಸುವಂತಿದೆ. ಪವರ್ ಸ್ಟಾರ್ ಪವರ್ ಫುಲ್ ಧ್ವನಿಯಲ್ಲಿ ಕನ್ನಡದ ಹಾಡು ಮೂಡಿ ಬಂದಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ರಚಿಸಿದ್ದಾರೆ. ಅನೂಪ್ ರೂಬಿನ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡದ ಬಗ್ಗೆ ಇರುವ ಈ ಅದ್ಭುತ ಹಾಡು ರಿಲೀಸ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
'ಗೀತಾ' ಶಂಕರ್ ನಾಗ್ ಅಭಿನಯದ ಸೂಪರ್ ಹಿಟ್ ಸಿನಿಮಾ. 1981ರಲ್ಲಿ ರಿಲೀಸ್ ಆಗಿದ್ದ ಇದೆ ಸಿನಿಮಾದ ಹೆಸರನ್ನು ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಸಿನಿಮಾಗೆ ಮರು ಬಳಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಚಿತ್ರ ಹೇಗಿರಲಿದೆ ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿ ಮನೆ ಮಾಡಿದೆ. ಈ ಚಿತ್ರಕ್ಕೆ ಯುವ ನಿರ್ದೇಶಕ ವಿಜಯ್ ನಾಗಂದ್ರ ಆಕ್ಷನ್ ಕಟ್ ಹೇಳಿದ್ದಾರೆ. ಗಣೇಶ್ ಪತ್ನಿ ಶಿಲ್ಪ ಗಣೇಶ್ ಮತ್ತು ಸೈಯದ್ ಸಲೀಂ ಬಂಡವಾಳ ಹೂಡಿದ್ದಾರೆ.

ಗಣೇಶ್ ಹೆಚ್ಚಾಗಿ ರೋಮ್ಯಾಂಟಿಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಮೊದಲ ಬಾರಿಗೆ ಕನ್ನಡ ಪರ ಹೋರಾಟಗಾರನಾಗಿ ಬಣ್ಣ ಹಚ್ಚಿದ್ದಾರೆ. ತಾಯಿ ಋಣ, ಭಾಷೆ ಋಣ ಒಂದೆ ಎಂದು ಸಾರುತ್ತ ಕೆಚ್ಚೆದೆಯ ಕನ್ನಡಿಗನ ಪಾತ್ರದಲ್ಲಿ ಮಿಂಚಿರುವುದನ್ನು ನೋಡಲು ಚಿತ್ರಾಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಅಂದ್ಹಾಗೆ ಈ ಹಾಡನ್ನು ಗಣಿ ಕೆಚ್ಚೆದೆಯ ಕನ್ನಡಿಗರಿಕೆ ಅರ್ಪಿಸಿದ್ದಾರೆ.
"ಕನ್ನಡ ಕನ್ನಡ ಕನ್ನಡವೇ ಸತ್ಯ...ಕನ್ನಡ ಕನ್ನಡ ಕನ್ನಡವೇ ನಿತ್ಯ...ಕನ್ನಡದ ಗರಿಮೆ, ಹಿರಿಮೆ ಸಾರುತ್ತ, ಮೈ ನವಿರೇಳಿಸುವ ಈ ಹಾಡು ನಮ್ಮೆಲ್ಲಾ ಕೆಚ್ಚೆದೆಯ ಕನ್ನಡ ಹೋರಾಟಗಾರರಿಗೆ, ಗೋಕಾಕ್ ಹೋರಾಟದಲ್ಲಿ ಹೋರಾಡಿದ ಕಲಿಗಳಿಗೆ, ಸ್ವಾಭಿಮಾನಿ ಕನ್ನಡಿಗ ಬಂಧುಗಳಿಗೆ ಅರ್ಪಣೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











