ದರ್ಶನ್ ಸಾಂಗ್ ಹಿಂದಿಕ್ಕಿ ಗಣೇಶ್ ಸಾಂಗ್ ದರ್ಬಾರ್; ಆದರೂ..
ಸ್ಟಾರ್ ನಟರ ನಡುವೆ ಯಾವುದೇ ಪೈಪೋಟಿ ಇಲ್ಲದೇ ಇದ್ದರೂ ಅಭಿಮಾನಿಗಳ ನಡುವೆ ನಮ್ಮ ನೆಚ್ಚಿನ ನಟನೇ ಗ್ರೇಟ್, ಅವ್ರ ಸಿನಿಮಾ ಗ್ರೇಟ್ ಎನ್ನುವ ಅಭಿಮಾನ ಇರುತ್ತದೆ. ಇದೇ ಕಾರಣಕ್ಕೆ ಪದೇ ಪದೆ ಫ್ಯಾನ್ಸ್ ವಾರ್ ನಡೆಯುತ್ತಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಸರ್ವೇ ಸಾಮಾನ್ಯ ಎನ್ನುವಂತಾಗಿದೆ.
ನಟ ದರ್ಶನ್ ಹಾಗೂ ನಟ ಗಣೇಶ್ ಆತ್ಮೀಯ ಸ್ನೇಹಿತರು. ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದು ಗೆದ್ದವರು. ಕಿರುತೆರೆಯಲ್ಲಿ ಇದ್ದಾಗಲೂ ಸ್ನೇಹಿತರಾಗಿದ್ದರು. ಇವತ್ತಿಗೂ ಅದು ಮುಂದುವರೆದಿದೆ. 'ಕೃಷ್ಣಂ ಪ್ರಣಯ ಸಖಿ' ಚಿತ್ರದಿಂದ ಭರ್ಜರಿ ಕಂಬ್ಯಾಕ್ ಮಾಡಿದ್ದ ಗಣಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಯುವರ್ಸ್ ಸಿನ್ಸಿಯರ್ಲಿ ರಾಮ್' ಸಿನಿಮಾ ಜೊತೆಗೆ 'ಪಿನಾಕ' ಎಂಬ ಮತ್ತೊಂದು ಚಿತ್ರದಲ್ಲಿ ಗಣಿ ನಟಿಸುತ್ತಿದ್ದಾರೆ.

'ಕಾಟೇರ' ಸಕ್ಸಸ್ ಬಳಿಕ ನಟ ದರ್ಶನ್ 'ಡೆವಿಲ್' ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ಮಿಲನಾ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ದಸರಾ ವೇಳೆಗೆ ಸಿನಿಮಾ ತೆರೆಗೆ ತರುವ ಪ್ರಯತ್ನಗಳು ನಡೀತಿದೆ. ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದ್ದು ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಗುತ್ತಿದೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಗಣೇಶ್ ಸಿನಿಮಾ ಹಾಡುಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ಸದ್ಯ ಗಣೇಶ್ ಸಿನಿಮಾ ಸಾಂಗ್ ಕೈ ಮೇಲಾಗಿದೆ. ತಮ್ಮ ನೆಚ್ಚಿನ ನಟರ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್, ಟೀಸರ್, ಸಾಂಗ್, ಟ್ರೈಲರ್ ವೀವ್ಸ್, ಲೈಕ್ಸ್ ವಿಚಾರವನ್ನು ಕೂಡ ಅಭಿಮಾನಿಗಳು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಾರೆ. ಯಾವ ಸಿನಿಮಾ ದಾಖಲೆ ಯಾವ ಸಿನಿಮಾ ಮುರಿಯಿತು ಎಂದು ಲೆಕ್ಕ ಹಾಕುತ್ತಿರುತ್ತಾರೆ. ಸದ್ಯ ಯೂಟ್ಯೂಬ್‌ನಲ್ಲಿ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ 'ಶೇಕ್ ಇಟ್ ಪುಷ್ಪವತಿ' ಲಿರಿಕಲ್ ವೀಡಿಯೋ ಸಾಂಗ್ ಅನ್ನು ಗಣೇಶ್ ಅವರ 'ಕೃಷ್ಣಂ ಪ್ರಣಯ ಸಖಿ' ಚಿತ್ರದ 'ದ್ವಾಪರ' ಲಿರಿಕಲ್ ಸಾಂಗ್ ಹಿಂದಿಕ್ಕಿದೆ.

'ಕ್ರಾಂತಿ' ಚಿತ್ರದ ಡ್ಯಾನ್ಸಿಂಗ್ ನಂಬರ್ 'ಶೇಕ್ ಇಟ್ ಪುಷ್ಪವತಿ' ಕ್ರೇಜ್ ಎಂಥದ್ದು ಎನ್ನುವುದು ಗೊತ್ತೇಯಿದೆ. ವಿ. ಹರಿಕೃಷ್ಣ ಸಂಗೀತದಲ್ಲಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದ ಹಾಡು ಹರಿಕೃಷ್ಣ ಹಾಗೂ ಐಶ್ವರ್ಯ ರಂಗರಾಜನ್ ವಾಯ್ಸ್‌ನಲ್ಲಿ ಸಖತ್ ಸೌಂಡ್ ಮಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ನಿಮಿಕಾ ರತ್ನಾಕರ್ ಜೊತೆ ದರ್ಶನ್ ಬಿಂದಾಸ್ ಸ್ಟೆಪ್ ಹಾಕಿ ರಂಗೇರಿಸಿದ್ದರು. ಈ ಸಾಂಗ್ ಲಿರಿಕಲ್ ವೀಡಿಯೋ ಹಾಗೂ ವೀಡಿಯೋ ಸಾಂಗ್ ಎರಡೂ ದಾಖಲೆಯ ವೀವ್ಸ್, ಲೈಕ್ಸ್ ಗಿಟ್ಟಿಸಿದೆ.
'ಕೃಷ್ಣಂ ಪ್ರಣಯ ಸಖಿ' ಚಿತ್ರದ 'ದ್ವಾಪರ' ಸಾಂಗ್ ಕೂಡ ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು. ಇಡೀ ಚಿತ್ರಕ್ಕೆ ದೊಡ್ಡ ಬಲವಾಗಿತ್ತು. ಅರ್ಜುನ್ ಜನ್ಯಾ ಸಂಗೀತದ ಹಾಡಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದರು. ಜಸ್ಕರನ್ ಸಿಂಗ್ ಗಾಯನದ ಹಾಡಿಗೆ ಶೇಖರ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದರು. ಸೋಶಿಯಲ್ ಮೀಡಿಯಾ ರೀಲ್ಸ್‌ನಲ್ಲಿ ಸಾಂಗ್ ಹೊಸ ಸಂಚಲನ ಸೃಷ್ಟಿಸಿದ್ದು ಗೊತ್ತೇಯಿದೆ.
'ದ್ವಾಪರ' ದಾಖಲೆ
ಸದ್ಯ ಯೂಟ್ಯೂಬ್‌ನಲ್ಲಿ 'ದ್ವಾಪರ' ಲಿರಿಕಲ್ ಸಾಂಗ್ 10 ಕೋಟಿ ವೀವ್ಸ್ ಜೊತೆಗೆ 7 ಲಕ್ಷದ 21 ಸಾವಿರ ಲೈಕ್ಸ್ ಗಿಟ್ಟಿಸಿ ಸದ್ದು ಮಾಡ್ತಿದೆ. ಆ ಮೂಲಕ 'ಶೇಕ್ ಇಟ್ ಪುಷ್ಪವತಿ' ಲಿರಿಕಲ್ ವೀಡಿಯೋವನ್ನು ಹಿಂದಿಕ್ಕಿದೆ. ಅದೇ ರೀತಿ ವೀಡಿಯೋ ಸಾಂಗ್ 1 ಕೋಟಿ 80 ಲಕ್ಷ ವೀವ್ಸ್ ಜೊತೆಗೆ 85 ಸಾವಿರ ಲೈಕ್ಸ್ ಗಿಟ್ಟಿಸಿದೆ.
'ಪುಷ್ಪವತಿ' ಕಮಾಲ್
ಇನ್ನು 'ಕ್ರಾಂತಿ' ಚಿತ್ರದ 'ಶೇಕ್ ಇಟ್ ಪುಷ್ಪವತಿ' ಲಿರಿಕಲ್ ವೀಡಿಯೋ ಸಾಂಗ್ 9 ಕೋಟಿ 80 ಲಕ್ಷ ವೀವ್ಸ್ ಹಾಗೂ 7 ಲಕ್ಷದ 19 ಸಾವಿರ ಲೈಕ್ಸ್ ಗಿಟ್ಟಿಸಿ 3ನೇ ಸ್ಥಾನಕ್ಕೆ ಕುಸಿದಿದೆ. ಇದು ಗಣೇಶ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಇನ್ನು ವೀಡಿಯೋ ಸಾಂಗ್ 4 ಕೋಟಿ 80 ಲಕ್ಷ ವೀವ್ಸ್ ಹಾಗೂ 2 ಲಕ್ಷ ಲೈಕ್ಸ್ ಪಡೆದುಕೊಂಡಿದೆ.
ಮೊದಲ ಸ್ಥಾನದಲ್ಲಿ 'ವಾರಾಹರೂಪಂ'
'ಶೇಕ್ ಇಟ್ ಪುಷ್ಪವತಿ' ಲಿರಿಕಲ್ ವೀಡಿಯೋವನ್ನು 'ದ್ವಾಪರ' ಸಾಂಗ್ ಮೀರಿಸಿದ್ದರೂ ಮೊದಲ ಸ್ಥಾನದಲ್ಲಿ 'ಕಾಂತಾರ' ಚಿತ್ರದ 'ವಾರಾಹ ರೂಪಂ' ಸಾಂಗ್ ಇದೆ. 24.5 ಕೋಟಿ ವೀವ್ಸ್ ಸಾಧಿಸಿರುವ ಈ ಹಾಡಿಗೆ 1 ಕೋಟಿ 2 ಲಕ್ಷ ಲೈಕ್ಸ್ ಸಿಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಇದೇ ಅತಿದೊಡ್ಡ ದಾಖಲೆ ಎನಿಸಿಕೊಂಡಿದೆ. 'ತೂಫಾನ್' ಸಾಂಗ್ 6 ಲಕ್ಷದ 91 ಸಾವಿರ ಲೈಕ್ಸ್ ಹಾಗೂ 'ರಾರಾ ರಕ್ಕಮ್ಮ' 6 ಲಕ್ಷದ 36 ಸಾವಿರ ಲೈಕ್ಸ್ ಪಡೆದು 3 ಮತ್ತು 4ನೇ ಸ್ಥಾನದಲ್ಲಿವೆ.


Click it and Unblock the Notifications











