ಮುಂಬೈನಲ್ಲಿ ಹನಿ ಸಿಂಗ್ ಅಬ್ಬರ, ಹರಿದು ಬಂದ ಜನಸಾಗರ ; ಭದ್ರತಾ ಕೋಟೆ ಭೇದಿಸಿ ಗೇಟ್ ಏರಿ ಮಹಿಳಾ ಅಭಿಮಾನಿಯ ಹೈಡ್ರಾಮಾ
ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಮೇಲೆ ಅಭಿಮಾನ ಇರಬೇಕು. ಆದರೆ ಅತಿಯಾಗಿರಬಾರದು. ಯಾಕೆಂದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ. ಅಭಿಮಾನ ಮೀತಿ ಮೀರಿದರೆ ವಿನಾಶಕಾರಿ ಬೆಳವಣಿಗೆಗೆ ಕಾರಣವಾಗುತ್ತೆ. ಆದರೂ ಕೂಡ ಈ ವಿಚಾರವನ್ನು ಅರಿಯದ ಅನೇಕರು ತಾರೆಯರನ್ನು ಹುಚ್ಚರಂತೆ ಇಷ್ಟಪಡುತ್ತಾರೆ.
ಅವರ ನಡೆ ನುಡಿಯನ್ನೆಲ್ಲ ಅನುಸರಿಸುತ್ತಾರೆ. ತಮ್ಮ ನೆಚ್ಚಿನ ತಾರೆಯರಿಗೋಸ್ಕರ ಏನು ಬೇಕಾದರೂ ಮಾಡಲು ಕೂಡ ಮುಂದಾಗುತ್ತಾರೆ. ಇದಕ್ಕೆ ಹನಿ ಸಿಂಗ್ ಸಂಗೀತ ಸಂಜೆಯಲ್ಲಿ ನಡೆದ ಘಟನೆ ಸದ್ಯದ ಮತ್ತೊಂದು ಉದಾಹರಣೆ.

ಹೌದು, ಯೋ ಯೋ ಹನಿ ಸಿಂಗ್.. ಭಾರತದ ಪ್ರಖ್ಯಾತ ರ್ಯಾಪರ್. ''ಬ್ಲೂ ಐಸ್''.. ''ಬ್ರೌನ್ ರಂಗ್.. ''ಡೋಪ್ ಶೋಪ್''.. ''ಲವ್ ಡೋಸ್''.. ''ಚಾರ್ ಬಾಟಲ್ ವಡ್ಕಾ''.. ಹೀಗೆ ಒಂದಾದ ಮೇಲೊಂದರಂತೆ ಹಾಡುಗಳ ಮೂಲಕ ಯುವ ಸಮೂಹವನ್ನು ಹುಚ್ಚೆಬ್ಬಿಸಿದ್ದ ಹನಿ ಸಿಂಗ್ ಆ ನಂತರ 2014ರಲ್ಲಿ ಏಕಾಏಕಿ ನಾಪತ್ತೆಯಾದರು.
2018ರಲ್ಲಿ ''ಸೋನು ಕೆ ಟಿಟು ಕಿ ಸ್ವೀಟಿ'' ಚಿತ್ರದ ಮೂಲಕ ಮತ್ತೆ ಮರಳಿದರಾದರೂ ಇವರ ಕಂಠದಲ್ಲಿ ಆ ಮೊದಲಿದ್ದ ಛಾರ್ಮ್ ನಾಪತ್ತೆಯಾಗಿತ್ತು. ಕಾಲ ಮಿಂಚಿ ಹೋಗಿತ್ತು. ಅಷ್ಟರಲ್ಲಿ ಆಗಲೇ ಬಾದ್‌ಷಾ ಬಂದು ಹನಿ ಸಿಂಗ್ ಜಾಗ ಆಕ್ರಮಿಸಿಕೊಂಡಿದ್ದರು. ಇದರ ನಡುವೆ ಹನಿ ಸಿಂಗ್ ವ್ಯೆಯಕ್ತಿಕ ಜೀವನದಲ್ಲಿ ಬೇರೆ ಅಲ್ಲೋಲ ಕಲ್ಲೋಲವಾಗಿತ್ತು.
ಇಂಥಾ ಹನಿ ಸಿಂಗ್ ಸದ್ಯ ಮರಳಿ ಪ್ರಯತ್ನವನ್ನು ಮಾಡುತ್ತಿದ್ದಾರೆ. "ಮೈ ಸ್ಟೋರಿ - ಇಂಡಿಯಾ ಚಾಪ್ಟರ್" ಹೆಸರಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ಧಾರೆ. ಸಂಗೀತ ಸಂಜೆಯಲ್ಲಿ ಹಾಡುತ್ತಾ ಪ್ರೇಕ್ಷಕರ ಹೃದಯ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
ಸದ್ಯ ತಮ್ಮ ಇದೇ ಸಂಗೀತ ಕಾರ್ಯಕ್ರಮದ ಭಾಗವಾಗಿ ಮುಂಬೈನ ಬಾಂದ್ರಾದಲ್ಲಿರುವ ಎಂಎಂಆರ್‌ಡಿಎ (MMRDA) ಮೈದಾನಕ್ಕೆ ಹನಿ ಸಿಂಗ್ ಬಂದಿದ್ದರು. ವೇದಿಕೆ ಮೇಲೆ ಹಾಡು ಹಾಡಿದರು. ನೇರೆದ ಜನಸ್ತೋಮವನ್ನು ಹುಚ್ಚೆದ್ದು ಕುಣಿಯುವಂತೆ ಕೂಡ ಮಾಡಿದರು.

ಆದರೆ ಇದೇ ಸಮಯದಲ್ಲಿ ಹನಿ ಸಿಂಗ್ ಅವರ ಮೇಲೆ ಹುಚ್ಚು ಅಭಿಮಾನವನ್ನು ಹೊಂದಿರುವ ಮಹಿಳಾ ಅಭಿಮಾನಿಯೊಬ್ಬರು ಭದ್ರತಾ ಕೋಟೆಯನ್ನು ಭೇದಿಸುವ ಪ್ರಯತ್ನ ಮಾಡಿದ್ದಾರೆ. ಲಾಕ್ ಆಗಿದ್ದ ಗೇಟ್ ಏರಿ ಒಳ ನುಗ್ಗುವ ಪ್ರಯತ್ನ ಮಾಡಿದ್ದಾರೆ.
ಅಲ್ಲಿದ್ದ ಭದ್ರತಾ ಸಿಬ್ಬಂದಿ ತಡೆಯುವ ಪ್ರಯತ್ನ ಮಾಡಿದರು ಕೂಡ ಕೇಳದ ಮಹಿಳಾ ಅಭಿಮಾನಿ, ಸಿಬ್ಬಂದಿ ಜೊತೆ ವಾಗ್ಯುದ್ದ ಮಾಡಿದ್ದಾರೆ. ಶತಾಯು ಗತಾಯು ಒಳ ನುಸುಳಲು ಪ್ರಯತ್ನವನ್ನು ಮಾಡಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ಕಾರ್ಯಕ್ರಮದ ಆಯೋಜಕರಿಗೆ ತಪರಾಕಿ ಹಾಕುತ್ತಿದ್ಧಾರೆ. ಸಂಗೀತ ಸಂಜೆ ಸಂಪೂರ್ಣ ಅಸ್ತವ್ಯಸ್ತವಾಗಿತ್ತು ಪಾಸ್ ಇಲ್ಲದವರು ಕೂಡ ಒಳ ನುಗ್ಗಿದ ಪರಿಣಾಮ ಜನಸಂದಣಿ ಹೆಚ್ಚಿತ್ತು ಎಂದು ಹೇಳುತ್ತಿದ್ಧಾರೆ. ಉಸಿರುಗಟ್ಟಿದ ವಾತಾವರಣದಲ್ಲಿ ಸಂಗೀತ ಸಂಜೆ ನಡೆಯಿತು ಎಂದು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಆದರೆ ಹನಿ ಸಿಂಗ್‌ಗೆ ಮಾತ್ರ ತಮ್ಮ ಈ ಅಭಿಮಾನಿಯ ಈ ಅಭಿಮಾನಕ್ಕೆ ಬೆರಗಾಗಿದ್ಧಾರೆ.ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ವೈರಲ್ ಆದ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಹನಿ ಸಿಂಗ್ ಇವರು ನನ್ನ ಸಿಂಹಿಣಿ ಅಭಿಮಾನಿ ಎಂದು ಬರೆದುಕೊಂಡಿದ್ದಾರೆ. ಹನಿ ಸಿಂಗ್ ಅವರ ಈ ನಡೆಯಿಂದ ಈ ಚರ್ಚೆ ಇನ್ನೂ ಹೆಚ್ಚಾಗಿದೆ.
ಇನ್ನುಳಿದಂತೆ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಹನಿ ಸಿಂಗ್ ಹಾಡಿನ ಬದಲು ಸೆ*ಕ್ಸ್ ಬಗ್ಗೆ ಮಾತನಾಡಲು ಶುರು ಮಾಡಿದ್ದರು. ದೆಹಲಿಯಲ್ಲಿ ತುಂಬಾ ಚಳಿ ಇದೆ. ಈ ಚಳಿಯಲ್ಲಿ ನೀವು ನಿಮ್ಮ ಕಾರಿನಲ್ಲಿ ಸೆ*ಕ್ಸ್ ಮಾಡಿ ಎಂದು ಹೇಳಿದ್ದರು.ತಮ್ಮ ಈ ಹೇಳಿಕೆಯಿಂದ ವಿವಾದಕ್ಕೀಡಾಗಿದ್ದ ಹನಿ ಸಿಂಗ್ ಜನಾಕ್ರೋಶ ಭುಗಿಲೆದ್ದ ಮೇಲೆ ಕ್ಷಮೆಯನ್ನು ಕೂಡ ಕೇಳಿದ್ದರು.


Click it and Unblock the Notifications











