»   » ಜರ್ಮನ್ ಯುವಕನ ಕನ್ನಡ ಪ್ರೇಮಕ್ಕೆ ತಲೆ ಬಾಗಿದ ಅಣ್ಣಾವ್ರ ಮಗ ಪುನೀತ್

ಜರ್ಮನ್ ಯುವಕನ ಕನ್ನಡ ಪ್ರೇಮಕ್ಕೆ ತಲೆ ಬಾಗಿದ ಅಣ್ಣಾವ್ರ ಮಗ ಪುನೀತ್

Posted By:
Subscribe to Filmibeat Kannada

ವಿದೇಶಿಯ ಯುವತಿಯೊಬ್ಬಳು 'ಐ ಆಲ್ಸೋ ವಾಂಟ್ ಟು ಲರ್ನ್ ಕನ್ನಡ' (ನಾನು ಕೂಡ ಕನ್ನಡ ಕಲಿಯಬೇಕು) ಅಂತ ಕೇಳಿಕೊಂಡಾಗ ''ನಿನಗೆ ಇರುವ ಹತ್ತು ಪರ್ಸೆಂಟ್ ಇಂಟ್ರೆಸ್ಟ್ ಪಕ್ಕದ ಊರಿನಿಂದ ಬಂದು ನಮ್ಮೂರಲ್ಲಿ ಇರೋರಿಗೆ ಇದ್ದಿದ್ರೆ, ಕನ್ನಡ ನವೆಂಬರ್ 1 ರಲ್ಲಿ ಅಲ್ಲ ನಂಬರ್ 1 ರಲ್ಲಿ ಇರ್ತಾಯಿತ್ತು'' ಅಂತ 'ಕನ್ನಡ ಮೀಡಿಯಂ ರಾಜು' ಹೇಳ್ತಾನೆ. ಈ ಮಾತನ್ನ ಎಲ್ಲಾ ಕನ್ನಡಿಗರೂ ಒಪ್ತಾರೆ.

ಗುರುನಂದನ್ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರದ ಈ ಡೈಲಾಗ್ ನ ನಾವೀಗ ನೆನಪಿಸಿಕೊಳ್ಳಲು ಕಾರಣ ಜರ್ಮನಿ ದೇಶದ ಓರ್ವ ಪ್ರಜೆ.

ದೂರದ ಜರ್ಮನಿಯಿಂದ ಬಂದಿರುವ ಜೂಲಿಯನ್ ಎಂಬಾತನ ಕನ್ನಡ ಪ್ರೇಮ ನೋಡಿದ್ರೆ, ನೀವು ಬೆಕ್ಕಸ ಬೆರಗಾಗುತ್ತೀರಾ. ಅಸಲಿಗೆ, ಜೂಲಿಯನ್ ಅವರ ಕನ್ನಡ ಪ್ರೇಮ ಕಂಡು ಅಣ್ಣಾವ್ರ ಮಗ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಕ್ಲೀನ್ ಬೌಲ್ಡ್ ಆಗಿದ್ದಾರೆ ಗೊತ್ತಾ.?!

German guy sings Puneeth Rajkumar starrer Dodmane Huduga song

ಟಿಬೆಟ್ಟಿಯನ್ನರ ಬಾಯಲ್ಲಿ ರವಿಚಂದ್ರನ್ ಹಾಡು! ನೋಡಿದ್ರೆ ಬೆಕ್ಕಸ ಬೆರಗಾಗ್ತೀರಾ!

ಜರ್ಮನಿಯ ಜೂಲಿಯನ್ ಕನ್ನಡ ಭಾಷೆಯನ್ನ ಮಾತನಾಡಬಲ್ಲರು. ಸಾಲದಕ್ಕೆ ಕನ್ನಡ ಹಾಡನ್ನೂ ಹಾಡಬಲ್ಲರು. ಇದನ್ನೆಲ್ಲ ನೋಡಿ ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ಒಂದು ವಿಡಿಯೋ ಮಾಡಿದ್ದಾರೆ.

ವಿಡಿಯೋದಲ್ಲಿ, ''ಹಾಯ್ ನಮಸ್ಕಾರ, ನನ್ನ ಹೆಸರು ಜೂಲಿಯನ್. ನಾನು ಜರ್ಮನಿಯಿಂದ ಬಂದಿದ್ದೇನೆ'' ಎಂದು ಜೂಲಿಯನ್ ಹೇಳಿದ್ರೆ, ಅದಕ್ಕೆ ''ನನಗೋಸ್ಕರ ಇವರು 'ದೊಡ್ಮನೆ ಹುಡುಗ' ಹಾಡು ಹಾಡ್ತಾರೆ... ಹಾಡ್ತೀರಾ'' ಅಂತ ಪುನೀತ್ ರಾಜ್ ಕುಮಾರ್ ಕೇಳುತ್ತಾರೆ. ಆಗ... 'ಯಾಕ್ಲ ಹುಡುಗ ಮೈಯಾಗ ಹೆಂಗ್ ಐತಿ...' ಹಾಡನ್ನ ಹಾಡುತ್ತಾರೆ ಜೂಲಿಯನ್.

ಹಾಡನ್ನ ಕೇಳಿದ್ಮೇಲೆ, ''ತುಂಬಾ ಖುಷಿ ಆಯ್ತು. ನೀವು ಕನ್ನಡ ಮಾತನಾಡಿದ್ದು ಇನ್ನೂ ಖುಷಿ ಆಯ್ತು'' ಅಂತಾರೆ ಪುನೀತ್ ರಾಜ್ ಕುಮಾರ್. ''ನಿಮ್ಮನ್ನು ಭೇಟಿ ಆಗಿದ್ದಕ್ಕೆ ನನಗೂ ಖುಷಿ ಆಯ್ತು'' ಎನ್ನುತ್ತಾರೆ ಜೂಲಿಯನ್.

ಈ ವಿಡಿಯೋನ ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಜರ್ಮನಿಯ ಜೂಲಿಯನ್ ಕನ್ನಡ ಪ್ರೇಮ ಸಾರುವ ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

English summary
German guy sings Puneeth Rajkumar starrer Dodmane Huduga song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada