twitter
    For Quick Alerts
    ALLOW NOTIFICATIONS  
    For Daily Alerts

    'ತಾರ್ ಮಾರ್ ಟಕ್ಕರ್ ಮಾರ್' ಎಂದು ಕುಣಿದ ಚಿರು- ಸಲ್ಲು: ಶ್ರೇಯಾ ಘೋಷಾಲ್‌ಗೆ ಜೈಕಾರ!

    |

    'ಗಾಡ್‌ ಫಾದರ್' ಚಿತ್ರದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಾಂಗ್ ರಿಲೀಸ್ ಆಗಿದೆ. ತಾಂತ್ರಿಕ ಕಾರಣಗಳಿಂದ ಸಾಂಗ್ ರಿಲೀಸ್ ತಡವಾಗಿತ್ತು. ಕಂಪ್ಲೀಟ್ ವಿಡಿಯೋ ಸಾಂಗ್ ಬಿಟ್ಟಿಲ್ಲ. ಆದರೆ ಲಿರಿಕಲ್ ವಿಡಿಯೋ ಸಾಂಗ್‌ನಲ್ಲಿ ಚಿರು- ಸಲ್ಲು ಡ್ಯಾನ್ಸ್ ಝಲಕ್ ಮಿಕ್ಸ್ ಮಾಡಿದ್ದಾರೆ. 'ತಾರ್ ಮಾರ್ ಟಕ್ಕರ್ ಮಾರ್' ಎಂದು ಮೆಗಾ ಸ್ಟಾರ್ಸ್ ಇಬ್ಬರೂ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಆದರೆ ಸಾಂಗ್‌ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

    ಮಲಯಾಳಂನ 'ಲೂಸಿಫರ್' ರಿಮೇಕ್ 'ಗಾಡ್‌ ಫಾದರ್' ಚಿತ್ರಕ್ಕೆ ತಮಿಳಿನ ಮೋಹನ್ ರಾಜ ಆಕ್ಷನ್ ಕಟ್ ಹೇಳಿದ್ದಾರೆ. ಮೋಹನ್ ಲಾಲ್ ಮಾಡಿದ್ದ ಪಾತ್ರದಲ್ಲಿ ಚಿರು ಅಬ್ಬರಿಸಿದ್ದರೆ ಪೃಥ್ವಿರಾಜ್ ಸುಕುಮಾರ್ ಮಾಡಿದ್ದ ಪಾತ್ರಕ್ಕೆ ಸಲ್ಮಾನ್ ಖಾನ್ ಬಣ್ಣ ಹಚ್ಚಿದ್ದಾರೆ. ಚಿರು- ಸಲ್ಲು ಆತ್ಮೀಯ ಸ್ನೇಹಿತರು. ಆ ಆತ್ಮೀಯ ಅನುಬಂಧದಿಂದಲೇ ತೆಲುಗು ಚಿತ್ರದಲ್ಲಿ ಮೊದಲ ಬಾರಿಗೆ ಬಾಲಿವುಡ್ ಭಾಯಿಜಾನ್‌ ನಟಿಸಿದ್ದಾರೆ. ಸಿನಿಮಾ ಹಿಂದಿಗೂ ಡಬ್ ಆಗಿ ರಿಲೀಸ್ ಆಗ್ತಿದೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 5ಕ್ಕೆ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗ್ತಿದೆ.

    ಹೇಳಿದ್ದ ದಿನಕ್ಕಿಂತ ಒಂದು ವಾರ ತಡವಾಗಿ ಚಿರು-ಸಲ್ಲು ಹಾಡು ಬಿಡುಗಡೆ; ನಂಬಿಕೆ ಇಲ್ಲ ಎಂದ ಫ್ಯಾನ್ಸ್!ಹೇಳಿದ್ದ ದಿನಕ್ಕಿಂತ ಒಂದು ವಾರ ತಡವಾಗಿ ಚಿರು-ಸಲ್ಲು ಹಾಡು ಬಿಡುಗಡೆ; ನಂಬಿಕೆ ಇಲ್ಲ ಎಂದ ಫ್ಯಾನ್ಸ್!

    ರಾಮ್‌ಚರಣ್, ಆರ್‌. ಬಿ ಚೌಧರಿ, ಎನ್‌.ವಿ ಪ್ರಸಾದ್ ನಿರ್ಮಾಣದ 'ಗಾಡ್‌ ಫಾದರ್' ಚಿತ್ರಕ್ಕೆ ಎಸ್‌. ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್‌ಗಳು ಕೂಡ ರಿಲೀಸ್ ಆಗಿದ್ದು, ಸಿನಿಮಾ ರಿಲೀಸ್ ಡೇಟ್ ಹತ್ತಿರವಾದಂತೆ ಚಿತ್ರತಂಡ ಪ್ರಮೋಷನ್ ಸ್ಪೀಡ್ ಹೆಚ್ಚಿಸ್ತಿದೆ.

    ಒಂದೇ ಫ್ರೇಮ್‌ನಲ್ಲಿ ಇಬ್ಬರು ಮೆಗಾ ಸ್ಟಾರ್ಸ್

    ಒಂದೇ ಫ್ರೇಮ್‌ನಲ್ಲಿ ಇಬ್ಬರು ಮೆಗಾ ಸ್ಟಾರ್ಸ್

    ಟಾಲಿವುಡ್‌ಗೆ ಚಿರು ಮೆಗಾಸ್ಟಾರ್ ಆದ್ರೆ, ಬಾಲಿವುಡ್‌ಗೆ ಸಲ್ಲ. ಇಬ್ಬರು ಮೆಗಾಸ್ಟಾರ್ಸ್ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ಒಂದೇ ಹಾಡಿನಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಇಬ್ಬರನ್ನೂ ಒಂದೇ ಫ್ರೇಮ್‌ನಲ್ಲಿ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ತಮನ್ ಹಾಕಿರೋ ಪೆಪ್ಪಿ ಟ್ಯೂನ್‌ಗೆ ಅನಂತ್ ಶ್ರೀರಾಮ್ ಸಾಹಿತ್ಯ ಬರೆದಿದ್ದಾರೆ. ಆದರೆ ಲಿರಿಕಲ್ ಸಾಂಗ್‌ನಲ್ಲಿ ಎಲ್ಲೂ ಚಿರು- ಸಲ್ಲು ಡ್ಯಾನ್ಸ್ ಮೂವ್ಸ್ ಕಾಣಿಸುವುದಿಲ್ಲ.

    'ಗಾಡ್‌ ಫಾದರ್' ಸಾಂಗ್‌ಗೆ ಮಿಶ್ರ ಪ್ರತಿಕ್ರಿಯೆ

    'ಗಾಡ್‌ ಫಾದರ್' ಸಾಂಗ್‌ಗೆ ಮಿಶ್ರ ಪ್ರತಿಕ್ರಿಯೆ

    ಚಿರು- ಸಲ್ಲು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಅನ್ನುವುದು ಬಿಟ್ಟರೆ ಸಾಂಗ್‌ನಲ್ಲಿ ಧಮ್ ಇಲ್ಲ. ಇಬ್ಬರು ಸ್ಟೈಲಿಶ್ ಆಗಿ ನಡೆದುಕೊಂಡು ಬರೋದು ಚೆನ್ನಾಗಿದೆ. ಆದರೆ ಅಲ್ಲಿಂದ ಮುಂದೆ ಬರೀ ಪ್ರಭುದೇವಾ ಹಾಗೂ ಡ್ಯಾನ್ಸರ್ಸ್ ಸ್ಟೆಪ್ಸ್ ಹೈಲೆಟ್ ಅನ್ನಿಸಿಕೊಂಡಿದೆ. ಮೆಗಾ ಸ್ಟಾರ್ಸ್ ಇಬ್ಬರು ಕೈ ಆಡಿಸೋದ್ರಲ್ಲಿ ಸಾಂಗ್ ಮುಗಿದು ಹೋಗುತ್ತದೆ. ಇಬ್ಬರು ಡ್ಯಾನ್ಸ್ ಮಾಡೋದು ಕಾಣಿಸುವುದಿಲ್ಲ. ಸಲ್ಲು ಪ್ರಾಕ್ಟೀಸ್ ಮಾಡೋದನ್ನು ನೋಡಬಹುದು. ಆದರೆ ಚಿರು ಸ್ಟೆಪ್ಸ್ ಕಣ್ಣಿಗೆ ಬೀಳೋದಿಲ್ಲ. ಮೆಗಾಸ್ಟಾರ್ ಡ್ಯಾನ್ಸ್ ಬಗ್ಗೆ ಹೊಸದಾಗಿ ಹೇಳೋದು ಬೇಕಾಗಿಲ್ಲ. ಪ್ರೇಕ್ಷಕರು ಥಿಯೇಟರ್‌ನಲ್ಲೇ ನೋಡಲಿ ಅನ್ನುವ ಕಾರಣಕ್ಕೋ ಏನೋ ಟೀಂ ಈ ರೀತಿ ಮಾಡಿದಂತಿದೆ.

    ಶ್ರೇಯಾ ಘೋಷಾಲ್ ವಾಯ್ಸ್‌ಗೆ ಮೆಚ್ಚುಗೆ

    ಶ್ರೇಯಾ ಘೋಷಾಲ್ ವಾಯ್ಸ್‌ಗೆ ಮೆಚ್ಚುಗೆ

    ಈ ಬಿಂದಾಸ್ ಡ್ಯಾನ್ಸಿಂಗ್ ನಂಬರ್‌ನ ಹಾಡಿರೋದು ಶ್ರೇಯಾ ಘೋಷಾಲ್. ಆಕೆಯ ಸ್ವೀಟ್ ವಾಯ್ಸ್‌ನಲ್ಲಿ ಸಾಂಗ್ ಕೇಳಿದವರು ಖುಷಿಯಾಗಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ಆಕೆನೇ ಹಾಡಿರೋದಾ ಎಂದು ಅಚ್ಚರಿಯಾಗುವ ಮಟ್ಟಿಗೆ ವಾಯ್ಸ್ ಕಿಕ್ ಕೊಡ್ತಿದೆ. ಇನ್ನು ಹಿಂದಿಯಲ್ಲಿ ಹೇಳಿವುದೇ ಬೇಡ. ಒಟ್ನಲ್ಲಿ 'ತಾರ್ ಮಾರ್ ಟಕ್ಕರ್ ಮಾರ್' ಮೂವರು ಸೂಪರ್ ಸ್ಟಾರ್ಸ್ ಇದ್ದಾರೆ. ಆದರೆ ಹೆಚ್ಚು ಅಂಕ ಗಟ್ಟಿಸಿಕೊಂಡಿರೋದು ಮಾತ್ರ ಶ್ರೇಯಾ ಘೋಷಾಲ್ ಅಂತಲೇ ಹೇಳಬೇಕು.

    ಇದು ಬರೀ ಪ್ರಮೋಷನ್ ಸಾಂಗ್ ?

    ಇದು ಬರೀ ಪ್ರಮೋಷನ್ ಸಾಂಗ್ ?

    'ಲೂಸಿಫರ್' ಚಿತ್ರ ತೆಲುಗಿಗೂ ಡಬ್ ಆಗಿ ಓಟಿಟಿಯಲ್ಲಿ ಬಂದಿತ್ತು. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು.ಈ ಚಿತ್ರವನ್ನು ಮತ್ತೆ ಯಾಕೆ ಚಿರು ರೀಮೆಕ್ ಮಾಡ್ತಿದ್ದಾರೆ ಎಂದು ಅಚ್ಚರಿಗೊಂಡಿದ್ದರು. ಇನ್ನು ಪ್ರತಿ ಹಂತದಲ್ಲೂ ಮೂಲ ಚಿತ್ರಕ್ಕೆ ಹೋಲಿಸಿ ನೋಡುತ್ತಿದ್ದಾರೆ. 'ಲೂಸಿಫರ್' ಚಿತ್ರದಲ್ಲಿ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್‌ಗೆ ಸಾಂಗ್ ಇಲ್ಲ. ಈ ಚಿತ್ರದಲ್ಲಿ ಹೇಗೆ ಬಂತು ಎಂದು ಕೆಲವರು ಕೇಳುತ್ತಿದ್ದಾರೆ. ಆದರೆ ಇದು ಬರೀ ಪ್ರಮೋಷನಲ್ ಸಾಂಗ್, ಸಿನಿಮಾದಲ್ಲಿ ಇರುವುದಿಲ್ಲ ಎನ್ನಲಾಗ್ತಿದೆ.

    English summary
    God Father most anticipated song Thaar Maar Thakkar Maar released. Know More.
    Wednesday, September 21, 2022, 19:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X