ಅಮರ ಗಾಯಕ ರಫಿಗೆ ಗೂಗಲ್ ಡೂಡಲ್ ನಮನ

By ಜೇಮ್ಸ್ ಮಾರ್ಟಿನ್

ಯುಗಳ ಗೀತೆ, ಪ್ರೇಮ, ಶೋಕ, ಭಕ್ತಿ, ವಿಷಾದ, ತುಂಟತನ ಹೀಗೆ ವೈವಿಧ್ಯಮಯ ಹಾಡುಗಳ ಮೂಲಕ ಕೇಳುಗರ ಹೃಣ್ಮನ ತಣಿಸಿ ಹಿನ್ನಲೆಯ ಗಾಯಕ ಲೋಕದ ಅನಭಿಶಕ್ತ ದೊರೆಯಾಗಿರುವ ಮೊಹಮ್ಮದ್ ರಫಿ ಅವರ ಜನ್ಮದಿನವನ್ನು ಇಂದು ಎಲ್ಲೆಡೆ ಆಚರಿಸಲಾಗುತ್ತಿದೆ.

ಸರ್ಚ್ ಇಂಜಿನ್ ದೈತ್ಯ ಗೂಗಲ್ ಕೂಡಾ ಡೂಡಲ್ ಮೂಲಕ ಗಾನ ಲೋಕದ ದೈತ್ಯ ಪ್ರತಿಭೆ ರಫಿ ಅವರಿಗೆ ನಮಿಸಿದೆ. ಮುಂಬೈ ಮೂಲದ ಕಲೆಗಾರ ಸಾಜಿದ್ ಶೇಖ್ ಅವರು ವಿನ್ಯಾಸಗೊಳಿಸಿರುವ ಡೂಡಲ್ ನಲ್ಲಿ ಬಾಲಿವುಡ್ ನ ಹಿನ್ನಲೆ ಗಾಯನದ ಕಿಂಗ್ ಎಂದು ರಫಿ ಅವರನ್ನು ಬಿಂಬಿಸಲಾಗಿದೆ. 1942ರಿಂದ 1980ರ ದಶಕದ ತನಕ ರಫಿ ಅವರು ಆ ಕಾಲದ ಪ್ರತಿ ಹೀರೋ, ನಟ, ಹಾಸ್ಯ ನಟನ ದನಿಯಾಗಿದ್ದರು.

Google Celebrates Singing Legend Mohammed Rafi's 93rd Birthday With A Doodle

ಹಿಂದಿ ಸಿನಿಮಾ ಗಾಯಕ ಮೊಹಮ್ಮದ್‌ ರಫಿ ಅವರನ್ನು ಇಷ್ಟಪಡದವರಾರು? 'ಯೇ ಮೇರಾ ಪ್ರೇಮ್‌ ಪತ್ರ್‌ ಪಡ್‌ಕರ್‌', 'ಆಜ ಆಜಾ ಮೇಹೂ ಪ್ಯಾರ್‌ ತೇರಾ', '...ತಾರೀಫ್‌ ಕರೂ ಕ್ಯಾ ಉಸ್‌ಕೀ ಜಿಸ್‌ನೇ ತುಮ್ಹೆ ಬನಾಯಾ', 'ಕರ್‌ ಚಲೇ ಹಮ್‌ ಫಿದಾ ಜಾನ್‌ ವತನ್‌ ಸಾಥಿಯಾ'- ಹೀಗೆ ಗುನುಗಿದಷ್ಟೂ ರಫಿ ಗೀತೆಗಳು ನೆನಪಾಗುತ್ತಲೇ ಹೋಗುತ್ತವೆ. ಕೆಲವು ಕಣ್ಣಲ್ಲಿ ನೀರು ತುಂಬಿಸುವಷ್ಟು ಶಕ್ತ.

ಸಚಿನ್ ದೇವ್ ಬರ್ಮನ್ ಅವರ ಸಂಗೀತದಲ್ಲಿ ಅತಿ ಹೆಚ್ಚು ಜನಪ್ರಿಯ ಹಾಡುಗಳನ್ನು ಹಾಡಿದ ರಫಿ ಅವರು ಶಂಕರ್ ಜೈಕಿಶನ್, ಮದನ್ ಮೋಹನ್ ಹಾಗೂ ಓಪಿ ನಯ್ಯರ್ ಸಂಯೋಜನೆಯ ಹಲವು ಮನಮಿಡಿಯುವ ಗೀತೆಗಳನ್ನು ನೀಡಿದ ರಫಿ ಅವರಿಗೆ ಗುರುದತ್ ಅವರ 'ಚೌದ್ವಿ ಕಾ ಚಾಂದ್' ಚಿತ್ರದ ಶೀರ್ಷಿಕೆ ಗೀತೆ ಮೊದಲ ಫಿಲಂಫೇರ್ ಪ್ರಶಸ್ತಿ ತಂದುಕೊಟ್ಟಿತು.

'ಕ್ಯಾ ಹುವಾ ತೇರಾ ವಾದಾ' ಹಾಡು 1977ರಲ್ಲಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತು. ಇದಕ್ಕೂ ಮುನ್ನ ಭಾರತ ಸರ್ಕಾರದಿಂದ 1967ರಲ್ಲಿ ಪದ್ಮಶ್ರೀ ಬಂದಿತು. ಆದರೆ, ಭಾರತ ರತ್ನ ಗೌರವಕ್ಕೆ ಅರ್ಹರಾದ ರಫಿ ಅವರಿಗೆ ಸರ್ಕಾರದಿಂದ ಸರಿಯಾದ ಮನ್ನಣೆ ಸಿಗಲಿಲ್ಲ ಎಂಬ ಕೊರಗು ಇನ್ನೂ ಅಭಿಮಾನಿಗಳಲ್ಲಿದೆ.

More from Filmibeat

English summary
Google Celebrates Singing Legend Mohammed Rafi's 93rd Birthday With A Doodle. Between 1942 and 1980, Rafi Sahab became the voice of almost every hero, supporting actor, character actor in Hindi cinema.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X