For Quick Alerts
  ALLOW NOTIFICATIONS  
  For Daily Alerts

  'ಭಾರತ ರತ್ನ' ಸಂಗೀತ ಲೋಕ ದಂತ ಕಥೆ ಭೂಪೇನ್ ಹಝಾರಿಕಾಗೆ ಗೂಗಲ್ ಡೂಡಲ್ ಗೌರವ!

  |

  ಭಾರತೀಯ ಚಿತ್ರರಂಗ ಕಂಡ ಅದ್ಭುತ ಸಂಗೀತಕಾರ ಭೂಪೇನ್ ಹಝಾರಿಕಾಗೆ ಗೂಗಲ್ ಡೂಡಲ್ ಗೌರವ ಸೂಚಿಸಿದೆ. ಇಂದು ( ಸೆಪ್ಟೆಂಬರ್ 08) ಭೂಪೇನ್ ಹಝಾರಿಕಾ ಅವರ 96ನೇ ಜನ್ಮ ದಿನೋತ್ಸವ. ಗಾಯಕ, ಸಂಗೀತ ನಿರ್ದೇಶಕ, ಸಾಹಿತಿ, ನಟ, ಪತ್ರಕರ್ತ,ಲೇಖಕ ಹಾಗೂ ಫಿಲ್ಮ್ ಮೇಕರ್ ಆಗಿ ಭೂಪೇನ್ ಹಝಾರಿಕಾ ಜನಪ್ರಿಯತೆ ಗಳಿಸಿದ್ದರು.

  ಅಸ್ಸಾಮ್‌ನ ಟಿನ್ಸುಕಿಯಾ ಜಿಲ್ಲೆಯಲ್ಲಿ ಸೆಪ್ಟೆಂಬರ್ 8,1926 ರಲ್ಲಿ ಭೂಪೇನ್ ಹಝಾರಿಕಾ ಜನಿಸಿದ್ದರು. ಭಾರತದ ಸಿನಿಮಾರಂಗಕ್ಕೆ ಭೂಪೇನ್ ಹಝಾರಿಕಾ ಎಂದೂ ಮರೆಯಲದ ಹಲವು ಅದ್ಭುತ ಹಾಡುಗಳನ್ನು ನೀಡಿದ್ದಾರೆ. ಇವರು ಮುಂಬೈನಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು.

  ಖ್ಯಾತ ಗಾಯಕ ಬಕಿಯಾ ನಿಧನ: ರೆಹಮಾನ್ ಸೇರಿ ಹಲವರ ಸಂತಾಪಖ್ಯಾತ ಗಾಯಕ ಬಕಿಯಾ ನಿಧನ: ರೆಹಮಾನ್ ಸೇರಿ ಹಲವರ ಸಂತಾಪ

  ಆಸ್ಸಾಮಿ ಗಾಯಕನ ಪ್ರತಿಭೆಯನ್ನು ಅವರಿಗೆ 10 ವರ್ಷವಿರುವಾಗಲೇ ಗುರುತಿಸಲಾಗಿತ್ತು. ಅಸ್ಸಾಮಿನ ಸಾಹಿತಿ ಜ್ಯೋತಿ ಪ್ರಸಾದ್ ಅಗರ್ವಾಲ ಹಾಗೂ ಫಿಲ್ಮ್ ಮೇಕರ್ ಬಿಶ್ನು ಪ್ರಸಾದ್ ರಭಾ ಇವರು ಮೊದಲ ಹಾಡನ್ನು ರೆಕಾರ್ಡ ಮಾಡಲು ನೆರವಾಗಿದ್ದರು. ಬಳಿಕ 12ನೇ ವಯಸ್ಸಿನಲ್ಲಿ ಭೂಪೇನ್ ಹಝಾರಿಕಾ ಎರಡು ಸಿನಿಮಾಗಳಿಗೆ ಮ್ಯೂಸಿಲ್ ಕಂಪೋಸ್ ಮಾಡಿದ್ದಲ್ಲದೆ. ಸಾಹಿತ್ಯವನ್ನೂ ರಚಿಸಿದ್ದರು.

  ಭೂಪೇನ್ ಹಝಾರಿಕಾ ವಾರಾಣಾಸಿಯ ಬನಾರಾಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಾಗೇ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸಂವಹನ ಮಾಧ್ಯಮದಲ್ಲಿ ಪಿಹೆಚ್‌ಡಿಯನ್ನು ಪಡೆದಿದ್ದಾರೆ. ಈ ವೇಳೆ ಭೂಪೇನ್ ಹಝಾರಿಕಾ ಪೌಲ್ ರೋಬೆಸನ್ ಅವರ ಪ್ರೇರಣೆಗೆ ಓಳಗಾಗಿದ್ದರು. ಪೌಲ್ ಅಮೆರಿಕಾದಲ್ಲಿ ನಾಗರೀಕ ಹಕ್ಕುಗಳ ಬಗ್ಗೆ ಹೋರಾಟ ಮಾಡುತ್ತಿದ್ದರು.

  'ಸ್ಪೂಕಿ ಕಾಲೇಜ್‌'ನಲ್ಲಿ ಮೆಲ್ಲುಸಿರೆ ಸವಿಗಾನ ಅಂತ ಹೆಜ್ಜೆ ಹಾಕಿದ 'ಏಕ್ ಲವ್‌ ಯಾ' ಬೆಡಗಿ!'ಸ್ಪೂಕಿ ಕಾಲೇಜ್‌'ನಲ್ಲಿ ಮೆಲ್ಲುಸಿರೆ ಸವಿಗಾನ ಅಂತ ಹೆಜ್ಜೆ ಹಾಕಿದ 'ಏಕ್ ಲವ್‌ ಯಾ' ಬೆಡಗಿ!

  ಪೌಲ್ ರೊಬೆಸನ್‌ ಅವರ 'ಓಲ್ ಮ್ಯಾನ್ ನದಿ' ಥೀಮ್‌ನಲ್ಲಿಯೇ ಭೂಪೇನ್ ಹಝಾರಿಕಾ 'ಗಂಗಾ ಬೆಹತಿ ಹೋ ಕ್ಯೂ' ಅನ್ನೋ ಹಾಡನ್ನು ಕಂಪೋಸ್ ಮಾಡಿದ್ದರು. ಈ ಮೂಲಕ ಟ್ರೈಬಲ್ ಹಾಗೂ ನಾಗರೀಕರ ಹಕ್ಕುಗಳ ಪರವಾಗಿ ಹಾಡುಗಳನ್ನು ಕಪೋಸ್ ಮಾಡಿದ್ದರು. ಭೂಪೇನ್ ಹಜಾರಿಕಾ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಮರಳಿದ ಬಳಿಕ ಹಾಡುಗಳು ಹಾಗೂ ಸಿನಿಮಾಗಳಲ್ಲಿ ಅಸ್ಸಾಮಿನ ಸಂಸ್ಕೃತಿಯನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದರು.

  Google Doodle Pays Tribute to Legendary Indian Singer Bhupen Hazarika

  ಭೂಪೇನ್ ಹಝಾರಿಕಾ ಸುಮಾರು 6 ದಶಕಗಳ ಕಾಲ ಸಂಗೀತ ಕ್ಷೇತ್ರಕ್ಕಾಗಿ ದುಡಿದಿದ್ದಾರೆ. ಇವರ ಹಾಡುಗಳಲ್ಲಿ ಜನರ ಕತೆಯನ್ನು, ನೋವು, ನಲಿವುಗಳನ್ನು ಸಾರಿ ಹೇಳುತ್ತಿದ್ದರು. ಜನರ ಧೈರ್ಯ, ರೊಮ್ಯಾನ್ಸ್, ಒಂಟಿತನಗಳೇ ಪ್ರಮುಖವಾಗಿರುತ್ತಿದ್ದವು. ಭುಪೇನ್ ಹಝಾರಿಯಾ ಕೆಲಸ ಮಾಡಿದ ಹಲವು ಸಿನಿಮಾಗಳಿಗೆ ಪ್ರಶಸ್ತಿಗಳು ಕೂಡ ಬಂದಿವೆ. 'ಶಾಕುಂತಲಾ ಸುರ್', 'ಪ್ರತಿಧ್ವನಿ', ಭೂಪೇನ್ ಹಝಾರಿಕ ನಿರ್ದೇಶಿಸಿದ 'ಲಾಠಿ-ಘಾಟಿ', 'ಚಿಕ್ ಮಿಕ್ ಬಿಜುಲಿ' ' ಫಾರ್ ಹೂಮ್‌ ದಿ ಸನ್ ಶೈನ್ಸ್', 'ಮೇರಾ ಧರಂ ಮೇರಿ ಮಾ', ಅಂತ ಸಿನಿಮಾಗಳಿಗೆ ಪ್ರಶಸ್ತಿ ಸಿಕ್ಕಿವೆ.

  ಆರು ದಶಕಗಳ ಕಲಾ ಸೇವೆಗೆ 2019ರಲ್ಲಿ ಭೂಪೇನ್ ಹಝಾರಿಕಾ ಅವರಿಗೆ ಮರಣೋತ್ತರ ಅತ್ಯುನ್ನತ ಪ್ರಶಸ್ತಿ 'ಭಾರತ ರತ್ನ' ನೀಡಲಾಯಿತು. ಇಷ್ಟೇ ಅಲ್ಲದೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಅವಾರ್ಡ್, ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

  English summary
  Google Doodle Pays Tribute to Legendary Indian Singer Bhupen Hazarika, Know More.
  Thursday, September 8, 2022, 14:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X