Grammys 2022 Winners : ಗ್ರ್ಯಾಮಿ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ!
64ನೇ ಗ್ರ್ಯಾಮಿ ಪ್ರಶಸ್ತಿ ಪ್ರಕಟ ಆಗಿದೆ. ಏಪ್ರಿಲ್ 3, 2022 ರಂದು ಲಾಸ್ ವೇಗಾಸ್‌ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆದಿದೆ. ಅಮೇರಿಕನ್ ಸಂಗೀತದ ಅತಿ ದೊಡ್ಡ ಸೆಲೆಬ್ರೇಷನ್ ಇದಾಗಿತ್ತು. ಪ್ರತಿ ಬಾರಿ ಗ್ರ್ಯಾಮಿ ಪ್ರಶಸ್ತಿಗೆ ಭಾರಿ ಪೈಪೋಟಿ ನಡೆಯುತ್ತದೆ. ಈ ಬಾರಿ ಬಿಲ್ಲಿ ಎಲಿಶ್, ಲಿಲ್ ನಾಸ್ ಎಕ್ಸ್, ಜಾನ್ ಬ್ಯಾಟಿಸ್ಟ್, ಒಲಿವಿಯಾ ರೊಡ್ರಿಗೋ ಮತ್ತು ಸಿಲ್ಕ್ ಸೋನಿಕ್ ರಂತಹ ಹಲವು ತಾರೆಯರು ಪ್ರಶಸ್ತಿ ಗೆದ್ದು ಬೀಗಿದ್ದಾರೆ.
ಈ ವರ್ಷ ಯುಎಸ್ ಕಲಾವಿದರು ಮಾತ್ರವೇ ಅಲ್ಲದೆ, ದಕ್ಷಿಣ ಕೊರಿಯಾದ ಕಲಾವಿದರೂ ಕೂಡ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು. ಅರ್ಜೆಂಟೀನಾದ ನ್ಯಾಥಿ ಪೆಲುಸೊ ಮತ್ತು ಸ್ಪೇನ್‌ನ ಸಿ ಟಂಗಾನಾ ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಕಲಾವಿದರನ್ನು ಸಹ ಒಳಗೊಂಡಿತ್ತು.
ಈ ಬಾರಿ ಪ್ರಶಸ್ತಿ ಪಡೆದ ಬಾಚಿಕೊಂಡವರು ಯಾರು ಮತ್ತು ಯಾವ ವಿಭಾಗ ಎನ್ನುವ ಬಗ್ಗೆ ಸಂಪೂರ್ಣ ಪಟ್ಟಿ ಇಲ್ಲಿದೆ.

ಈ ವರ್ಷದ ಅತ್ಯುತ್ತಮ ರೆಕಾರ್ಡಿಂಗ್ ವಿಭಾಗದಲ್ಲಿ "ಲೀವ್ ದಿ ಡೋರ್ ಓಪನ್: ಸಿಲ್ಕ ಸೋನಿಕ್" ಪ್ರಶಸ್ತಿ ಗೆದ್ದಿದೆ. ಈ ವರ್ಷದ ಅತ್ಯುತ್ತಮ ಆಲ್ಬಂ "ವೀ ಆರ್: ಜಾನ್ ಬ್ಯಾಟಿಸ್ಟ್" ಪ್ರಶಸ್ತಿ ಪಡೆದುಕೊಂಡಿದೆ. ವರ್ಷದ ಹಾಡು ವಿಭಾಗದಲ್ಲಿ 'ಲೀವ್ ದಿ ಡೋರ್ ಓಪನ್' ಹಾಡು ವಿಜಯ ಗಳಿದೆ. ಉತ್ತಮ ಹೊಸ ಕಲಾವಿದ ವಿಭಾಗದಲ್ಲಿ ಒಲಿವಿಯಾ ರೋಡ್ರಿಗೋ ಜಯಗಳಿಸಿದ್ದಾರೆ. ಉತ್ತಮ ಪಾಪ್ ಏಕವ್ಯಕ್ತಿ ಪ್ರದರ್ಶನದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದು 'ಡ್ರೈವರ್ಸ್ ಲೈಸೆನ್ಸ್' ಹಾಡಿಗಾಗಿ ಒಲಿವಿಯಾ ರೋಡ್ರಿಗೋ. ಇನ್ನು ಬೆಸ್ಟ್ ಪಾಪ್ ಗ್ರೂಪ್ ಪ್ರದರ್ಶನದ ಅಡಿಯಲ್ಲಿ ಪ್ರಶಸ್ತಿ ಪಡೆದಿದ್ದು 'ಕಿಸ್ ಮಿ ಮೋರ್' ಹಾಡಿಗಾಗಿ ದೋಜಾ ಕ್ಯಾಟ್ ತಂಡ.
ಉತ್ತಮ ಸಾಂಪ್ರದಾಯಿಕ ಪಾಪ್ ವೋಕಲ್ ಆಲ್ಬಂ ವಿಭಾಗದಲ್ಲಿ 'ಲವ್ ಫಾರ್ ಸೇಲ್'ಗಾಗಿ ಟೊನಿ ಬೆನ್ನೆಟ್ ಮತ್ತು ಲೇಡಿ ಗಾಗಾ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಉತ್ತಮ ಪಾಪ್ ಆಲ್ಬಂ ಆಗಿ ಹೊರ ಹೊಮ್ಮಿದೆ ಒಲಿವಿಯಾ ರೋಡ್ರಿಗೋ ಅವರ 'ಸೋರ್'. ಉತ್ತಮ rap ಹಾಡು ಆಗಿ ಪ್ರಶಸ್ತಿ ಬಾಚಿದೆ 'ಜೈಲ್' ಹಾಡು. 'ಕೋಲ್ಡ್' ಉತ್ತಮ ದೇಶಿಯ ಹಾಡಾಗಿ ಹೊರಹೊಮ್ಮಿದೆ.
ಇನ್ನು ಬೆಸ್ಟ್ ನ್ಯೂ ಏಜ್ ಆಲ್ಬಂ ಅಡಿಯಲ್ಲಿ ರಿಕ್ಕಿಕೇಜ್ ಮತ್ತು ಸ್ಟೇವರ್ಟ್ ಕಾಪ್‌ಲ್ಯಾಂಡ್ ಪ್ರಶಸ್ತಿ ಗೆದ್ದಿದ್ದಾರೆ. ಅದು 'ಡಿವೈನ್ ಟೈಡ್ಸ್' ಹಾಡಿಗಾಗಿ.


Click it and Unblock the Notifications











