ಕಲ್ಯಾಣ ಮಂಟಪದ ಮುಂದೆ ಮದುಮಗನ ಎಡವಟ್ಟು.. ಕೊನೆ ಕ್ಷಣದಲ್ಲಿ ನಿಂತೇ ಹೋಯ್ತು ಮದುವೆ

ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುವ ವಾಡಿಕೆ ಮಾತು ಇದೆ. ಎಷ್ಟೋ ಮದುವೆಗಳು ವಿಚಿತ್ರ ಕಾರಣಗಳಿಂದ ಮುರಿದುಬಿದ್ದ ಉದಾಹರಣೆಗಳಿವೆ. ನಿಶ್ಚಿತಾರ್ಥವಾಗಿ, ಕಲ್ಯಾಣ ಮಂಟಪ ಬುಕ್ ಮಾಡಿದ ಮೇಲೆ ಮದುವೆ ನಿಂತಿದೆ. ಅಷ್ಟೇ ಯಾಕೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಬೇಡ ಎಂದವರು ಇದ್ದಾರೆ.

ಕೆಲವೇ ದಿನಗಳ ಹಿಂದೆ ಮದುಮಗ ಕುಡಿದು ಬಂದು ಗಲಾಟೆ ಮಾಡಿದ್ದಕ್ಕೆ ಬೆಂಗಳೂರಿನಲ್ಲಿ ಮದುವೆ ರದ್ದಾಗಿತ್ತು. ಇತ್ತೀಚೆಗೆ ದೆಹಲಿಯಲ್ಲಿ ನಡೆಯಬೇಕಿದ್ದ ಮದುವೆವೊಂದು ಕೊನೆ ಕ್ಷಣದಲ್ಲಿ ವಿಚಿತ್ರ ಕಾರಣಕ್ಕೆ ನಿಂತು ಹೋಗಿದೆ. ಆದರೆ ಮದುವೆ ಸಂಭ್ರಮದಲ್ಲಿ ಮದುಮಗ ಕುಣಿದಿದ್ದಾನೆ, ಇದನ್ನು ನೋಡಿ ವಧುವಿನ ತಂದೆ ಗರಂ ಆಗಿದ್ದಾರೆ. ಅಷ್ಟಕ್ಕೇ ಮದುವೆನೇ ಬೇಡ ಎಂದು ನಿಲ್ಲಿಸಿದ್ದಾರೆ. ಪಾಪ ಮದು ಮಗಳು ಬೇಸರದಿಂದ ಮೂಲೆಯಲ್ಲಿ ಅಳುತ್ತಿದ್ದಳು ಎಂದು ವರದಿಯಾಗಿದೆ.

Groom s dance to Super hit song prompts bride s father to cancel wedding in Delhi

ಮದುವೆ ಅಂದರೆ ಸಂಭ್ರಮ. ಸ್ನೇಹಿತರು, ಬಂಧುಗಳು ಎಲ್ಲರೂ ಸೇರಿರುತ್ತಾರೆ. ವಾದ್ಯಗೋಷ್ಠಿ, ಆರ್ಕೇಸ್ಟ್ರಾ ಅಂತೆಲ್ಲಾ ಸಂಭ್ರಮ ಜೋರಾಗಿ ಇರುತ್ತದೆ. ಇನ್ನು ರಿಸೆಪ್ಷನ್ ವೇಳೆ ವಧು, ವರರ ಸಂಬಂಧಿಕರು, ಸ್ನೇಹಿತರು ಹೆಜ್ಜೆ ಹಾಕಿ ಸಂಭ್ರಮಿಸುತ್ತಾರೆ. ಕೆಲವೊಮ್ಮೆ ವಧು, ವರ ಕೂಡ ಡ್ಯಾನ್ಸ್ ಮಾಡುತ್ತಾರೆ. ದೆಹಲಿಯ ಮದುವೆ ವೇಳೆ 'ಚೋಲಿ ಕೆ ಪೀಚೆ ಕ್ಯಾ ಹೈ' ಹಾಡಿಗೆ ವರ ಡ್ಯಾನ್ಸ್ ಮಾಡಿದ್ದಾನೆ. ಇನ್ನು ನೋಡಿ ಅತಿಥಿಗಳು ಚಪ್ಪಾಳೆ ತಟ್ಟಿ, ಕೇಕೆ ಹಾಕಿ ಹುರಿದುಂಬಿಸಿದ್ದಾರೆ. ಇದು ವಧುವಿನ ತಂದೆಗೆ ಅಸಮಾಧಾನ ತಂದಿದೆ.

ಮದುವೆ ಮನೆಗೆ ಭಾರತ್ ಮೆರವಣಿಗೆ ಹೊರಟಿತ್ತು. ಈ ವೇಳೆ ಮದುಮಗ ಸ್ನೇಹಿತರು ಹಾಗೂ ಅತಿಥಿಗಳ ಜೊತೆ ಹೆಜ್ಜೆ ಹಾಕಿದ್ದ. ಈ ವೇಳೆ ಆತನ ಸ್ನೇಹಿತರು ಬಂದು ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದಾರೆ. ಸೂಪರ್ ಹಿಟ್ 'ಚೋಲಿ ಕೆ ಪೀಚೆ ಕ್ಯಾಯೇ' ಸಾಂಗ್ ಪ್ಲೇ ಮಾಡಿದ್ದಾರೆ. ಮದುಮಗ ಕುಣಿದಿದ್ದಾನೆ. ಇದು ವಧುವಿನ ತಂದೆಗೆ ಬೇಸರ ತಂದಿದ್ದು ಕೂಡಲೇ ಗಲಾಟೆ ಮಾಡಿ ಮದುವೆ ರದ್ದು ಮಾಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಪೇಪರ್ ಕಟ್ಟಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Groom s dance to Super hit song prompts bride s father to cancel wedding in Delhi

ಅಳಿಯ ಆಗುವವನು ನಮ್ಮ ಕುಟುಂಬದ ಗೌರವ, ಸಂಪ್ರದಾಯಕ್ಕೆ ಧಕ್ಕೆ ತಂದಿದ್ದಾನೆ ಎಂದು ವಧುವಿನ ತಂದೆ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಮುಂದೆ ಆತನ ಕುಟುಂಬದ ಜೊತೆ ಮಗಳು, ಅಥವಾ ಕುಟುಂಬಸ್ಥರು ಯಾರು ಕೂಡ ಸಂಪರ್ಕದಲ್ಲಿ ಇರಬಾರದು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗ್ತಿದೆ. ಜನವರಿ 18ರಂದು ದೆಹಲಿಯಲ್ಲಿ ಈ ಘಟನೆ ನಡೆದಿದೆ. ಒಟ್ಟಾರೆ ಸಂಭ್ರಮ ಮನೆಮಾಡಬೇಕಿದ್ದ ಕಲ್ಯಾಣೋತ್ಸವದಲ್ಲಿ ಗಲಾಟೆ ಗದ್ದಲವಾಗಿ ಮದುವೆಯೇ ನಿಂತಿರುವುದು ವಿಪರ್ಯಾಸ.

1993ರಲ್ಲಿ ಬಂದ 'ಖಳ್‌ನಾಯಕ್' ಚಿತ್ರದ ಸೂಪರ್ ಹಿಟ್ ಸಾಂಗ್ 'ಚೋಲಿ ಕೆ ಪೀಚೆ ಕ್ಯಾ ಹೈ'. ಸುಭಾಷ್ ಘಾಯ್ ನಿರ್ದೇಶನದ 'ಖಳ್‌ನಾಯಕ್' ಚಿತ್ರದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಜಾಕಿ ಶ್ರಾಫ್ ನಟಿಸಿದ್ದರು. ಲಕ್ಷ್ಮಿಕಾಂತ್ ಪ್ಯಾರೆಲಾಲ್ ಸಂಗೀತ ಸಂಯೋಜನೆ ಮಾಡಿದ್ದರು. ಮಾಧುರಿ ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದ ಈ ಸಾಂಗ್ ಸಖತ್ ಸದ್ದು ಮಾಡಿತ್ತು. ಇವತ್ತಿಗೂ ಯಾವುದೇ ಶಾಲಾ, ಕಾಲೇಜು ಕಾರ್ಯಕ್ರಮ, ಡ್ಯಾನ್ಸ್ ಸ್ಪರ್ಧೆಗಳಲ್ಲಿ ಈ ಹಾಡು ಇರಲೇಬೇಕು. ಅಷ್ಟರಮಟ್ಟಿಗೆ ಕ್ರೇಜ್ ಉಳಿಸಿಕೊಂಡಿದೆ.

More from Filmibeat

English summary
Bride's father cancels wedding in Delhi after groom dances to 'Choli Ke Peeche Kya Hai' song;
Read more about: bollywood hindi song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X