ನಾಪತ್ತೆಯಾಗಿದ್ದ ಜನಪ್ರಿಯ ಗಾಯಕಿಯ ಮೃತದೇಹ ಪತ್ತೆ

ಗುಜರಾತ್‌ನ ಜನಪ್ರಿಯ ಗಾಯಕಿಯರಲ್ಲೊಬ್ಬರಾದ ವೈಶಾಲಿ ಬುಲ್ಸಾರ ಮೃತದೇಹ ಆಗಸ್ಟ್ 28 ರಂದು ಸಂಜೆ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ವೈಶಾಲಿ ಕಾಣೆಯಾಗಿದ್ದರು ಎಂದು ಅವರ ಪತಿ ಎರಡು ದಿನಗಳ ಹಿಂದಷ್ಟೆ ದೂರು ನೀಡಿದ್ದರು.

ಗುರಜಾರ್‌ನ ಪರ್ಡಿ ತಾಲ್ಲೂಕಿನ ನಿರ್ಜನ ಪ್ರದೇಶವೊಂದರ ಬಳಿ ವೈಶಾಲಿಯ ಮೃತದೇಹ ಅವರದ್ದೇ ಕಾರಿನಲ್ಲಿ ಪತ್ತೆಯಾಗಿದೆ. ಅವರ ಮೃತದೇಹ ಅವರ ಕಾರಿನ ಹಿಂದಿನ ಸೀಟಿನಲ್ಲಿತ್ತು ಎಂದು ಪೊಲೀಸರು ಹೇಳಿದ್ದರು.

ವಲ್ಸಾಡ್ ಜಿಲ್ಲೆ, ಪರ್ಡಿ ತಾಲ್ಲೂಕಿನ ಪಾರ್ ನದಿ ತೀರದ ನಿರ್ಜನ ಪ್ರದೇಶದಲ್ಲಿ ವೈಶಾಲಿಯ ಕಾರು ಪತ್ತೆಯಾಗಿದೆ. ಸ್ಥಳೀರ್ಯಾರೊ ಕಾರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Gujrathi Singer Vaishali Bulsara Found Dead In Her Car

ಗಾಯಕಿಯ ಶವ ಪತ್ತೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿಗಳು, ''ಗಾಯಕಿಯನ್ನು ಉಸಿರುಗಟ್ಟಿಸಿ ಕೊಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ವೈಶಾಲಿಯ ಚಪ್ಪಲಿಗಳು ಡ್ರೈವರ್‌ ಸೀಟಿನ ಕೆಳಗೆ ಇವೆ. ವೈಶಾಲಿಯು ಪ್ರತಿರೋಧ ತೋರಿಸಿರುವುದಕ್ಕೆ ಯಾವುದೇ ಕುರುಹು ಇಲ್ಲ. ಆಕೆಯ ಮೈಮೇಲೆ ಯಾವುದೇ ಗಾಯಗಳಿಲ್ಲ, ಆಕೆಯ ಬಟ್ಟೆಗಳು ಸಹ ಹರಿದಿಲ್ಲ'' ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಹೇಳಿರುವಂತೆ, ವೈಶಾಲಿಯು ಆಗಸ್ಟ್ 27 ರಂದು ಸಂಜೆ 6:25 ಕ್ಕೆ ವಲ್ಸಾಡ್‌ನ ತಮ್ಮ ನಿವಾಸದಿಂದ ಹೊರಗೆ ಹೋಗಿದ್ದಾರೆ. ಹೋಗುವಾಗ, ತಾವು ನಗರದ ಅಂಚಿನಲ್ಲಿರುವ ಅಯ್ಯಪ್ಪ ದೇವಾಲಯದ ಬಳಿ ಗೆಳೆಯರನ್ನು ಕಾಣಲು ಹೋಗುತ್ತಿರುವುದಾಗಿ ಪತಿಗೆ ತಿಳಿಸಿದ್ದಾರೆ. ವೈಶಾಲಿ ಕಾಣೆಯಾದ ಪ್ರಕರಣ ಬೇಧಿಸಲು ಪೊಲೀಸರು ಐದು ತಂಡಗಳನ್ನು ಮಾಡಿಕೊಂಡು ಹುಡುಕಾಟ ನಡೆಸಿದ್ದರು. ಕೊನೆಗೆ ವೈಶಾಲಿಯ ಕಾರು ಸ್ಥಳೀಯರೊಬ್ಬರ ಕಣ್ಣಿಗೆ ಬಿದ್ದಿದೆ.

ವೈಶಾಲಿ, ಹಿತೇಶ್ ಬಲ್ಸೂರಾ ಅವರನ್ನು 2011ರಲ್ಲಿ ವಿವಾಹವಾಗಿದ್ದರು ಅವರಿಗೆ ಇಬ್ಬರು ಮಕ್ಕಳು ಸಹ ಇದ್ದರು. ವೈಶಾಲಿ , ಗುಜರಾತ್‌ನಲ್ಲಿ ಜನಪ್ರಿಯ ಗಾಯಕಿ ಆಗಿದ್ದರು, ನವರಾತ್ರಿ ಸಂದರ್ಭಗಳಲ್ಲಿ ಅವರ ಭಜನೆಗೆ, ಹಾಗೂ ಗರ್ಬಾ ಸಂದರ್ಭದಲ್ಲಿ ಅವರ ಹಾಡಿಗೆ ಬಹಳ ಡಿಮ್ಯಾಂಡ್ ಇತ್ತು. ಸಂಗೀತ ಶಾಲೆಯನ್ನು ಸಹ ವೈಶಾಲಿ ನಡೆಸುತ್ತಿದ್ದರು.

More from Filmibeat

English summary
Gujrathi singer Vaishali Bulsara found dead in her car's back seat. Police said she was strangled to death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X