For Quick Alerts
  ALLOW NOTIFICATIONS  
  For Daily Alerts

  ನಾಪತ್ತೆಯಾಗಿದ್ದ ಜನಪ್ರಿಯ ಗಾಯಕಿಯ ಮೃತದೇಹ ಪತ್ತೆ

  |

  ಗುಜರಾತ್‌ನ ಜನಪ್ರಿಯ ಗಾಯಕಿಯರಲ್ಲೊಬ್ಬರಾದ ವೈಶಾಲಿ ಬುಲ್ಸಾರ ಮೃತದೇಹ ಆಗಸ್ಟ್ 28 ರಂದು ಸಂಜೆ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ವೈಶಾಲಿ ಕಾಣೆಯಾಗಿದ್ದರು ಎಂದು ಅವರ ಪತಿ ಎರಡು ದಿನಗಳ ಹಿಂದಷ್ಟೆ ದೂರು ನೀಡಿದ್ದರು.

  ಗುರಜಾರ್‌ನ ಪರ್ಡಿ ತಾಲ್ಲೂಕಿನ ನಿರ್ಜನ ಪ್ರದೇಶವೊಂದರ ಬಳಿ ವೈಶಾಲಿಯ ಮೃತದೇಹ ಅವರದ್ದೇ ಕಾರಿನಲ್ಲಿ ಪತ್ತೆಯಾಗಿದೆ. ಅವರ ಮೃತದೇಹ ಅವರ ಕಾರಿನ ಹಿಂದಿನ ಸೀಟಿನಲ್ಲಿತ್ತು ಎಂದು ಪೊಲೀಸರು ಹೇಳಿದ್ದರು.

  Gujarat Files: 'ದಿ ಕಾಶ್ಮೀರ್ ಫೈಲ್ಸ್' ಬೆನ್ನಲ್ಲೇ 'ಗುಜರಾತ್ ಫೈಲ್ಸ್' ಚಿತ್ರಕ್ಕೆ ತಯಾರಿ, ಮೋದಿಗೆ ಸವಾಲೊಡ್ಡಿದ ನಿರ್ದೇಶಕGujarat Files: 'ದಿ ಕಾಶ್ಮೀರ್ ಫೈಲ್ಸ್' ಬೆನ್ನಲ್ಲೇ 'ಗುಜರಾತ್ ಫೈಲ್ಸ್' ಚಿತ್ರಕ್ಕೆ ತಯಾರಿ, ಮೋದಿಗೆ ಸವಾಲೊಡ್ಡಿದ ನಿರ್ದೇಶಕ

  ವಲ್ಸಾಡ್ ಜಿಲ್ಲೆ, ಪರ್ಡಿ ತಾಲ್ಲೂಕಿನ ಪಾರ್ ನದಿ ತೀರದ ನಿರ್ಜನ ಪ್ರದೇಶದಲ್ಲಿ ವೈಶಾಲಿಯ ಕಾರು ಪತ್ತೆಯಾಗಿದೆ. ಸ್ಥಳೀರ್ಯಾರೊ ಕಾರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  ಗಾಯಕಿಯ ಶವ ಪತ್ತೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿಗಳು, ''ಗಾಯಕಿಯನ್ನು ಉಸಿರುಗಟ್ಟಿಸಿ ಕೊಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ವೈಶಾಲಿಯ ಚಪ್ಪಲಿಗಳು ಡ್ರೈವರ್‌ ಸೀಟಿನ ಕೆಳಗೆ ಇವೆ. ವೈಶಾಲಿಯು ಪ್ರತಿರೋಧ ತೋರಿಸಿರುವುದಕ್ಕೆ ಯಾವುದೇ ಕುರುಹು ಇಲ್ಲ. ಆಕೆಯ ಮೈಮೇಲೆ ಯಾವುದೇ ಗಾಯಗಳಿಲ್ಲ, ಆಕೆಯ ಬಟ್ಟೆಗಳು ಸಹ ಹರಿದಿಲ್ಲ'' ಎಂದು ಪೊಲೀಸರು ಹೇಳಿದ್ದಾರೆ.

  ಪೊಲೀಸರು ಹೇಳಿರುವಂತೆ, ವೈಶಾಲಿಯು ಆಗಸ್ಟ್ 27 ರಂದು ಸಂಜೆ 6:25 ಕ್ಕೆ ವಲ್ಸಾಡ್‌ನ ತಮ್ಮ ನಿವಾಸದಿಂದ ಹೊರಗೆ ಹೋಗಿದ್ದಾರೆ. ಹೋಗುವಾಗ, ತಾವು ನಗರದ ಅಂಚಿನಲ್ಲಿರುವ ಅಯ್ಯಪ್ಪ ದೇವಾಲಯದ ಬಳಿ ಗೆಳೆಯರನ್ನು ಕಾಣಲು ಹೋಗುತ್ತಿರುವುದಾಗಿ ಪತಿಗೆ ತಿಳಿಸಿದ್ದಾರೆ. ವೈಶಾಲಿ ಕಾಣೆಯಾದ ಪ್ರಕರಣ ಬೇಧಿಸಲು ಪೊಲೀಸರು ಐದು ತಂಡಗಳನ್ನು ಮಾಡಿಕೊಂಡು ಹುಡುಕಾಟ ನಡೆಸಿದ್ದರು. ಕೊನೆಗೆ ವೈಶಾಲಿಯ ಕಾರು ಸ್ಥಳೀಯರೊಬ್ಬರ ಕಣ್ಣಿಗೆ ಬಿದ್ದಿದೆ.

  ವೈಶಾಲಿ, ಹಿತೇಶ್ ಬಲ್ಸೂರಾ ಅವರನ್ನು 2011ರಲ್ಲಿ ವಿವಾಹವಾಗಿದ್ದರು ಅವರಿಗೆ ಇಬ್ಬರು ಮಕ್ಕಳು ಸಹ ಇದ್ದರು. ವೈಶಾಲಿ , ಗುಜರಾತ್‌ನಲ್ಲಿ ಜನಪ್ರಿಯ ಗಾಯಕಿ ಆಗಿದ್ದರು, ನವರಾತ್ರಿ ಸಂದರ್ಭಗಳಲ್ಲಿ ಅವರ ಭಜನೆಗೆ, ಹಾಗೂ ಗರ್ಬಾ ಸಂದರ್ಭದಲ್ಲಿ ಅವರ ಹಾಡಿಗೆ ಬಹಳ ಡಿಮ್ಯಾಂಡ್ ಇತ್ತು. ಸಂಗೀತ ಶಾಲೆಯನ್ನು ಸಹ ವೈಶಾಲಿ ನಡೆಸುತ್ತಿದ್ದರು.

  English summary
  Gujrathi singer Vaishali Bulsara found dead in her car's back seat. Police said she was strangled to death.
  Tuesday, August 30, 2022, 9:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X