ಗೀತಸಾಹಿತಿ ಗುಲ್ಜಾರ್ ಅವರಿಗೆ ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿ

By Rajendra

ಖ್ಯಾತ ಗೀತಸಾಹಿತಿ, ಕವಿ, ಲೇಖಕ ಹಾಗೂ ಚಲನಚಿತ್ರ ನಿರ್ದೇಶಕ ಗುಲ್ಜಾರ್ (79) ಅವರು 2013ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಚಲನಚಿತ್ರ ಕ್ಷೇತ್ರಕ್ಕೆ ತಮ್ಮ ಜೀವವನ್ನು ತೇಯುತ್ತಿರುವವರಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ಭಾರತ ಸರ್ಕಾರ ಪ್ರತಿವರ್ಷ ನೀಡಿ ಗೌರವಿಸುತ್ತಿದೆ.

ಗುಲ್ಜಾರ್ ಅವರು ಅಕಾಡೆಮಿ ಪ್ರಶಸ್ತಿ ಪಡೆದಂತಹ ಶ್ರೇಷ್ಠ ಗೀತಸಾಹಿತಿ. ಅವರ ಚೊಚ್ಚಲ ಚಿತ್ರ 'ಮೇರೆ ಅಪ್ನೆ' (1971) ಮೂಲಕ ನಿರ್ದೇಶನಕ್ಕೆ ಅಡಿಯಿಟ್ಟ ಗುಲ್ಜಾರ್ ಬಳಿಕ ಪರಿಚಯ್, ಕೋಶಿಶ್ ಹಾಗೂ ಅಂಧಿ ಚಿತ್ರಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿವೆ. [ಕನ್ನಡಿಗ ವಿಕೆ ಮೂರ್ತಿಗೆ ದಾದಾ ಸಾಹೇಬ್ ಫಾಲ್ಕೆ]

Gulzar
2004ರಲ್ಲಿ ಗುಲ್ಜಾರ್ ಅವರು ಪದ್ಮ ಭೂಷಣ್ ಹಾಗೂ 2002ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಡೇನಿ ಬಾಯ್ಲ್ ಅವರ ಸ್ಲಂ ಡಾಗ್ ಮಿಲಿಯನೇರ್ ಚಿತ್ರದ 'ಜೈ ಹೋ' ಗೀತೆ ರಚನೆಗಾಗಿ ಗ್ರ್ಯಾಮಿ ಪ್ರಶಸ್ತಿ ಅವರನ್ನು ವರಿಸಿದೆ.

ಪೃಥ್ವಿರಾಜ್ ಕಪೂರ್, ಲತಾ ಮಂಗೇಷ್ಕರ್, ದಿಲೀಪ್ ಕುಮಾರ್, ಶ್ಯಾಂ ಬೆನಗಲ್ ಹಾಗೂ ಪ್ರಾಣ್ ಅವರ ಸಾಲಿಗೆ ಗುಲ್ಜಾರ್ ಅವರು ಸೇರ್ಪಡೆಯಾಗಿದ್ದಾರೆ. ಗುಲ್ಜಾರ್ ಅವರಿಗೆ ಇದುವರೆಗೂ ಹಲವಾರು ರಾಷ್ಟ್ರ ಪ್ರಶಸ್ತಿಗಳು ಹಾಗೂ 20 ಫಿಲಂಫೇರ್ ಪ್ರಶಸ್ತಿಗಳು ಸಂದಿವೆ. ಗುಲ್ಜಾರ್ ಅವರ ರಚಿಸಿದ ಹಲವಾರು ಹಾಡುಗಳು ತಲೆಮಾರುಗಳನ್ನು ರಂಜಿಸಿವೆ. (ಏಜೆನ್ಸೀಸ್)

More from Filmibeat

English summary
Renowned lyricist, poet, author and filmmaker Gulzar (79) will be honoured with the 2013 Dadasaheb Phalke award, the country' highest award in cinema given annually by the Government of India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X