ನಿನ್ನ ಧೈರ್ಯವೇ ನಿನಗೆ ದಾರಿ ದೀಪ: ಶಿಷ್ಯರಿಗೆ ನಡೆ ಮುಂದೆ ಎಂದ ಶರಣ್
ಶರಣ್ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ಬಹು ನಿರೀಕ್ಷಿತ ಚಿತ್ರ ಗುರು ಶಿಷ್ಯರು ಚಿತ್ರ ತೆರೆ ಕಾಣಲು ಸಿದ್ಧವಾಗಿದ್ದು, ಸದ್ಯ ಸ್ಯಾಂಡಲ್ವುಡ್ನ ಎಲ್ಲರ ಗಮನ ಈ ಗುರು ಶಿಷ್ಯರ ಮೇಲಿದೆ. ಇದೇ ಸೆಪ್ಟೆಂಬರ್ 23ರಂದು ಶಿಷ್ಯರ ಬಳಗದೊಂದಿಗೆ ಶರಣ್, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ತರುಣ್ ಸುಧೀರ್ ನಿರ್ಮಾಣದ ಗುರು ಶಿಷ್ಯರು ಚಿತ್ರದ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚಾಗುತ್ತಿದ್ದು, ಇದೀಗ ಚಿತ್ರದ ಮತ್ತೊಂದು ಪವರ್ ಫುಲ್ ಹಾಡು ರಿಲೀಸ್ ಆಗಿದ್ದು, 'ನಡೆ ಮುಂದೆ..ನಡೆ ಮುಂದೆ' ಲಿರಿಕಲ್ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ.
'ಗುರು ಶಿಷ್ಯರು' ಚಿತ್ರತಂಡ ಹೊಸ ಹೊಸ ಪ್ರಯೋಗಳನ್ನು ಮಾಡುತ್ತಿದ್ದು, 'ಗುರುಗಳು ನಮ್ಮ ಗುರುಗಳು' ಹಾಡಂತೂ ಎಲ್ಲ ಶಿಕ್ಷಕರ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡಿತ್ತು. ಈ ಹಾಡು ಕೇಳಿದ ಪ್ರತಿಯೊಬ್ಬರು ಕೂಡ ತಮ್ಮ ನೆಚ್ಚಿನ ಗುರುಗಳನ್ನು ನೆನಪಿಸಿಕೊಳ್ಳದೇ ಇರಲು ಸಾಧ್ಯವಿಲ್ಲ. ಗುರುಗಳು ನಮ್ಮ ಗುರುಗಳು ಹಾಡು ಯೂಟ್ಯೂಬ್ನಲ್ಲಿ 1 ಮಿಲಿಯನ್ಗೂ ಹೆಚ್ಚು ವ್ಯೂವ್ ಕಂಡಿದೆ.

ಇನ್ನು ಗುರು ಶಿಷ್ಯರು ಚಿತ್ರದ ಮತ್ತೊಂದು ಸೂಪರ್ ಹಿಟ್ ಸಾಂಗ್ ಆಣೆ ಮಾಡಿ ಹೇಳುತೀನಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜನ ರಿಪೀಟ್ ಮೋಡ್ನಲ್ಲಿ ಈ ಹಾಡು ಕೇಳಿದ್ದು, ಇನ್ಸ್ಟಾಗ್ರಾಮ್ ರೀಲ್ಸ್ನಲ್ಲೂ ವೈರಲ್ ಆಗಿದೆ.
ಚಿತ್ರದ ಟ್ರೈಲರ್ ಕೂಡ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದು, ಗ್ರಾಮೀಣ ಕ್ರೀಡೆ ಖೋ ಖೋ ಆಟವನ್ನೇ ಚಿತ್ರದ ಪ್ರಮುಖ ಕಥಾ ವಸ್ತುವನ್ನಾಗಿಸಿಕೊಳ್ಳಲಾಗಿದೆ. ಚಿತ್ರದ ನಾಯಕ ನಟ ಶರಣ್ ಪಾತ್ರವೂ ಕೂಡ ತೀವ್ರ ಕುತೂಹಲಕಾರಿಯಾಗಿದೆ. ಕುಗ್ರಾಮವೊಂದಕ್ಕೆ ಎಂಟ್ರಿ ಕೊಟ್ಟ ಪಟ್ಟಣದ ಶಿಕ್ಷಕ ಊರನ್ನು ಉಳಿಸುತ್ತಾನಾ ಅಥವಾ ಅಳಿಸುತ್ತಾನಾ ಎನ್ನುವುದು ಸದ್ಯ ಟ್ರೈಲರ್ ನೋಡಿದ ಸಿನಿ ಪ್ರಿಯರ ಕುತೂಹಲವಾಗಿದೆ. ಇನ್ನು ನಾಯಕಿ ನಿಶ್ವಿಕ ನಾಯ್ಡು ಪಾತ್ರ ಕೂಡ ನಿಗೂಢವಾಗಿದ್ದು, ಶಿಷ್ಯ ವೃಂದವೂ ಕೂಡ ಬಹಳ ವಿಶೇಷವಾಗಿದೆ.
ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ರವಿ ಶಂಕರ್ ಪುತ್ರ ಸೂರ್ಯ, ಶರಣ್ ಪುತ್ರ ಹೃದಯ್, ನವೀನ್ ಕೃಷ್ಣ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹಾಗೂ ಶಾಸಕ ರಾಜೂ ಗೌಡ ಅವರ ಪುತ್ರ ಮಣಿಕಂಠ ಶಿಷ್ಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











