For Quick Alerts
  ALLOW NOTIFICATIONS  
  For Daily Alerts

  ನಿನ್ನ ಧೈರ್ಯವೇ ನಿನಗೆ ದಾರಿ ದೀಪ: ಶಿಷ್ಯರಿಗೆ ನಡೆ ಮುಂದೆ ಎಂದ ಶರಣ್​

  |

  ಶರಣ್​ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ಬಹು ನಿರೀಕ್ಷಿತ ಚಿತ್ರ ಗುರು ಶಿಷ್ಯರು ಚಿತ್ರ ತೆರೆ ಕಾಣಲು ಸಿದ್ಧವಾಗಿದ್ದು, ಸದ್ಯ ಸ್ಯಾಂಡಲ್​ವುಡ್​ನ ಎಲ್ಲರ ಗಮನ ಈ ಗುರು ಶಿಷ್ಯರ ಮೇಲಿದೆ. ಇದೇ ಸೆಪ್ಟೆಂಬರ್​ 23ರಂದು ಶಿಷ್ಯರ ಬಳಗದೊಂದಿಗೆ ಶರಣ್, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

  ತರುಣ್​ ಸುಧೀರ್ ನಿರ್ಮಾಣದ ಗುರು ಶಿಷ್ಯರು ಚಿತ್ರದ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚಾಗುತ್ತಿದ್ದು, ಇದೀಗ ಚಿತ್ರದ ಮತ್ತೊಂದು ಪವರ್​ ಫುಲ್​ ಹಾಡು ರಿಲೀಸ್ ​ ಆಗಿದ್ದು, 'ನಡೆ ಮುಂದೆ..ನಡೆ ಮುಂದೆ' ಲಿರಿಕಲ್​ ಹಾಡು ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ.

  'ಗುರು ಶಿಷ್ಯರು' ಚಿತ್ರತಂಡ ಹೊಸ ಹೊಸ ಪ್ರಯೋಗಳನ್ನು ಮಾಡುತ್ತಿದ್ದು, 'ಗುರುಗಳು ನಮ್ಮ ಗುರುಗಳು' ಹಾಡಂತೂ ಎಲ್ಲ ಶಿಕ್ಷಕರ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡಿತ್ತು. ಈ ಹಾಡು ಕೇಳಿದ ಪ್ರತಿಯೊಬ್ಬರು ಕೂಡ ತಮ್ಮ ನೆಚ್ಚಿನ ಗುರುಗಳನ್ನು ನೆನಪಿಸಿಕೊಳ್ಳದೇ ಇರಲು ಸಾಧ್ಯವಿಲ್ಲ. ಗುರುಗಳು ನಮ್ಮ ಗುರುಗಳು ಹಾಡು ಯೂಟ್ಯೂಬ್​ನಲ್ಲಿ 1 ಮಿಲಿಯನ್​ಗೂ ಹೆಚ್ಚು ವ್ಯೂವ್​ ಕಂಡಿದೆ.

  ಇನ್ನು ಗುರು ಶಿಷ್ಯರು ಚಿತ್ರದ ಮತ್ತೊಂದು ಸೂಪರ್​ ಹಿಟ್​ ಸಾಂಗ್​ ಆಣೆ ಮಾಡಿ ಹೇಳುತೀನಿ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಜನ ರಿಪೀಟ್​ ಮೋಡ್​ನಲ್ಲಿ ಈ ಹಾಡು ಕೇಳಿದ್ದು, ಇನ್ಸ್ಟಾಗ್ರಾಮ್​ ರೀಲ್ಸ್​ನಲ್ಲೂ ವೈರಲ್​ ಆಗಿದೆ.

  ಚಿತ್ರದ ಟ್ರೈಲರ್​ ಕೂಡ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದು, ಗ್ರಾಮೀಣ ಕ್ರೀಡೆ ಖೋ ಖೋ ಆಟವನ್ನೇ ಚಿತ್ರದ ಪ್ರಮುಖ ಕಥಾ ವಸ್ತುವನ್ನಾಗಿಸಿಕೊಳ್ಳಲಾಗಿದೆ. ಚಿತ್ರದ ನಾಯಕ ನಟ ಶರಣ್​ ಪಾತ್ರವೂ ಕೂಡ ತೀವ್ರ ಕುತೂಹಲಕಾರಿಯಾಗಿದೆ. ಕುಗ್ರಾಮವೊಂದಕ್ಕೆ ಎಂಟ್ರಿ ಕೊಟ್ಟ ಪಟ್ಟಣದ ಶಿಕ್ಷಕ ಊರನ್ನು ಉಳಿಸುತ್ತಾನಾ ಅಥವಾ ಅಳಿಸುತ್ತಾನಾ ಎನ್ನುವುದು ಸದ್ಯ ಟ್ರೈಲರ್​ ನೋಡಿದ ಸಿನಿ ಪ್ರಿಯರ ಕುತೂಹಲವಾಗಿದೆ. ಇನ್ನು ನಾಯಕಿ ನಿಶ್ವಿಕ ನಾಯ್ಡು ಪಾತ್ರ ಕೂಡ ನಿಗೂಢವಾಗಿದ್ದು, ಶಿಷ್ಯ ವೃಂದವೂ ಕೂಡ ಬಹಳ ವಿಶೇಷವಾಗಿದೆ.

  ನೆನಪಿರಲಿ ಪ್ರೇಮ್​ ಪುತ್ರ ಏಕಾಂತ್​, ರವಿ ಶಂಕರ್​ ಪುತ್ರ ಸೂರ್ಯ, ಶರಣ್​ ಪುತ್ರ ಹೃದಯ್​, ನವೀನ್​ ಕೃಷ್ಣ ಪುತ್ರ ಹರ್ಷಿತ್​, ಬುಲೆಟ್​ ಪ್ರಕಾಶ್​ ಪುತ್ರ ರಕ್ಷಕ್​ ಹಾಗೂ ಶಾಸಕ ರಾಜೂ ಗೌಡ ಅವರ ಪುತ್ರ ಮಣಿಕಂಠ ಶಿಷ್ಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  Actor Sharan staress Guru Shishyaru movie nade munde song released.
  Friday, September 16, 2022, 9:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X