For Quick Alerts
ALLOW NOTIFICATIONS  
For Daily Alerts

ಚಿತ್ರ: ಮ್ಯೂಸಿಕ್ ಲವ್ ಬರ್ಡ್ಸ್ ಮದುವೆ-ಆರತಕ್ಷತೆ

By Mahesh
|

ಸಂಗೀತ ಲೋಕದ ಲವ್ ಬರ್ಡ್ಸ್ ಗಳ ಮದುವೆ ಸಂಭ್ರಮಕ್ಕೆ ದಕ್ಷಿಣ ಭಾರತ ಚಿತ್ರರಂಗ ಸಾಕ್ಷಿಯಾಯಿತು. ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಸೋದರಳಿಯ ಯುವ ಸಂಗೀತ ಪ್ರತಿಭೆ ಜಿವಿ ಪ್ರಕಾಶ್ ಹಾಗೂ ಗಾಯಕಿ ಸೈಂಧವಿ ಅವರು ಹಿಂದೂ ಸಂಪ್ರದಾಯದ ಪ್ರಕಾರ ಗುರುವಾರ ಬೆಳಗ್ಗೆ ಮದುವೆಯಾದರು.

ಬಾಲ್ಯದ ಗೆಳತಿ ಸೈಂಧವಿ ಜೊತೆ ದಾಂಪತ್ಯ ಗೀತೆ ಹಾಡುತ್ತಿರುವ ಜಿವಿ ಪ್ರಕಾಶ್ ಕುಮಾರ್ ಅವರ ಸುಮಾರು 10 ವರ್ಷದ ಪ್ರೇಮ ಕೊನೆಗೂ ವಿವಾಹ ಬಂಧನಕ್ಕೊಳಪಟ್ಟಿದೆ. ಚೆನ್ನೈನ ಮೇಜರ್ ರಾಮನಾಥನ್ ಚೆಟ್ಟಿಯಾರ್ ಹಾಲ್ ನಲ್ಲಿ ಗುರುವಾರ ಬೆಳಗ್ಗೆ 10.25 ಶುಭ ಮುಹೂರ್ತದಲ್ಲಿ ಸೈಂಧವಿ ಕೊರಳಿಗೆ ಪ್ರಕಾಶ್ ತಾಳಿ ಕಟ್ಟಿದರು.

ನಿರ್ದೇಶಕ ಬಾಲು ಮಹೇಂದ್ರ, ಮಣಿರತ್ನಂ, ಸುಹಾಸಿನಿ ಮಣಿರತ್ನಂ, ರಾಜೀವ್ ಮೆನನ್, ನಿರ್ದೇಶಕ ಬಾಲ, ಕೆ ಭಾಗ್ಯರಾಜ್,ಪೂರ್ಣಿಮಾ ಭಾಗ್ಯರಾಜ್, ಸೂರ್ಯ, ವಿಜಯ್, ವಿಜಯ್ ತಾಯಿ ಶೋಭಾ ಚಂದ್ರಶೇಖರ್, ಪತ್ನಿ ಸಂಗೀತಾ, ಎಲ್ ವಿಜಯ್, ಸಂಗೀತ ನಿರ್ದೇಶಕ ದೇವಾ, ಗಾಯಕಿ ಎಲ್ ಆರ್ ಈಶ್ವರಿ, ನಿತ್ಯಾಶ್ರೀ ಮಹದೇವನ್ ಅವರು ಮದುವೆಗೆ ಬಂದು ನೂತನ ವಧುವರರಿಗೆ ಶುಭ ಹಾರೈಸಿದರು.

ಮದುವೆ ಆರತಕ್ಷತೆಗೆ ಕೆ ಬಾಲಚಂದರ್ ನಟ ವಿಜಯ್ ಹಾಗೂ ಪತ್ನಿ ಸಂಗೀತಾ, ಮನೋಬಾಲಾ, ಪ್ರಸನ್ನ ಹಾಗೂ ಸ್ನೇಹಾ, ದಯಾನಿಧಿ ಮಾರನ್, ಅಮಲಾ ಪಾಲ್, ಭಾರಧ್ವಾಜ್, ಎಂಕೆ ಸ್ಟಾಲಿನ್, ಉದಯನಿಧಿ ಸ್ಟಾಲಿನ್, ಶಂಕರ್, ಎಆರ್ ರೆಹಮಾನ್, ಅಮೀರ್ ಸುಲ್ತಾನ್, ಚೇರನ್, ಎಎಲ್ ವಿಜಯ್, ಲಿಂಗಸ್ವಾಮಿ, ನಟ ಕಾರ್ತಿ, ವೆಟ್ರಿಮಾರನ್, ವಿಜಯ್ ಅಂಟೋನಿ, ಗಂಗೈ ಅಮರನ್, ದೊರೈ ದಯಾನಿಧಿ, ಜೀವಾ, ನಿರ್ದೇಶಕ ವಿಷ್ಣುವರ್ಧನ್, ಲತಾ ರಜನಿಕಾಂತ್, ಶಾಲಿನಿ ಅಜಿತ್, ಶಾಮಿಲಿ, ಭಾರತಿರಾಜಾ, ದಯಾನಿಧಿ ಅಳಗಿರಿ, ವಿ ಸೆಳ್ವಗಣೇಶ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ಶುಭ ಕೋರಿದರು. ಪ್ರಕಾಶ್ ಹಾಗೂ ಸೈಂಧವಿ ಮದುವೆ ಚಿತ್ರಗಳು ಇಲ್ಲಿವೆ ನೋಡಿ ಆನಂದಿಸಿ

ಚೆನ್ನೈನಲ್ಲಿ ನಡೆದ ಮದುವೆ ಚಿತ್ರಗಳು

ಚೆನ್ನೈನಲ್ಲಿ ನಡೆದ ಮದುವೆ ಚಿತ್ರಗಳು

ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ ಹಾಗೂ ಗಾಯಕಿ ಸೈಂಧವಿ ಮದುವೆ ಚಿತ್ರಗಳನ್ನು ನೋಡಿ

ಪ್ರಕಾಶ್ -ಸೈಂಧವಿ ಮದುವೆ

ಪ್ರಕಾಶ್ -ಸೈಂಧವಿ ಮದುವೆ

ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ ಹಾಗೂ ಗಾಯಕಿ ಸೈಂಧವಿ ಮದುವೆ ಶುಭ ಹಾರೈಸಲು ಬಂದ ನಿರ್ದೇಶಕ ಮಣಿರತ್ನಂ ಹಾಗೂ ನಟಿ ಸುಹಾಸಿನಿ

ಮದುವೆಗೆ ಬಂದ ಅತಿಥಿಗಳು

ಮದುವೆಗೆ ಬಂದ ಅತಿಥಿಗಳು

ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ ಹಾಗೂ ಗಾಯಕಿ ಸೈಂಧವಿ ಅವರು ಮದುವೆ ನಂತರ ಆಸ್ಟ್ರೇಲಿಯಾಕ್ಕೆ ತೆರಳಿ ಮಧುಚಂದ್ರ ಮಧುರರಾಗ ಹಾಡಲಿದ್ದಾರಂತೆ

ಮದುವೆಗೆ ಬಂದ ಅತಿಥಿಗಳು

ಮದುವೆಗೆ ಬಂದ ಅತಿಥಿಗಳು

ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ ಹಾಗೂ ಗಾಯಕಿ ಸೈಂಧವಿ ಮದುವೆ ಶುಭ ಹಾರೈಸಲು ಬಂದ ನಿರ್ದೇಶಕ ಬಾಲ ಅವರ ಕುಟುಂಬ

ಪ್ರಕಾಶ್- ಸೈಂಧವಿ ದಂಪತಿ

ಪ್ರಕಾಶ್- ಸೈಂಧವಿ ದಂಪತಿ

ಕನ್ನಡದ 'ಸೈಕೋ' 'ಬೆಳದಿಂಗಳಂತೆ ಮಿನು ಮಿನುಗುತಾ..' ಎಂದು ಹಾಡಿದ ಸೈಂಧವಿ ಅವರು ಎಆರ್ ರೆಹಮಾನ್ ಅಕ್ಕನ ಮಗ ಜಿ.ವಿ ಪ್ರಕಾಶ್ ಕುಮಾರ್ ಅವರ ಬಾಲ್ಯದ ಗೆಳತಿ. 10 ವರ್ಷದ ಪ್ರೇಮ ಈಗ ವಿವಾಹ ಬಂಧನದಲ್ಲಿ ಭದ್ರವಾಗಿದೆ.

ಸೂರ್ಯ ಜೊತೆ ದಂಪತಿ

ಸೂರ್ಯ ಜೊತೆ ದಂಪತಿ

ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ ಹಾಗೂ ಗಾಯಕಿ ಸೈಂಧವಿ ಮದುವೆ ಶುಭ ಹಾರೈಸಲು ಬಂದ ಸೂಪರ್ ಸ್ಟಾರ್ ಸೂರ್ಯ

ಬಾಲ ಕುಟುಂಬದಿಂದ ಹಾರೈಕೆ

ಬಾಲ ಕುಟುಂಬದಿಂದ ಹಾರೈಕೆ

ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ ಹಾಗೂ ಗಾಯಕಿ ಸೈಂಧವಿ ಮದುವೆ ಶುಭ ಹಾರೈಸಲು ಬಂದ ನಿರ್ದೇಶಕ ಬಾಲ ಹಾಗೂ ಅವರ ಕುಟುಂಬ. ನ್ನಷ್ಟು ಚಿತ್ರಗಳಲ್ಲಿ ಕ್ಲಿಕ್ ಮಾಡಿ

ಪ್ರಕಾಶ್- ಸೈಂಧವಿ ಮದುವೆ

ಪ್ರಕಾಶ್- ಸೈಂಧವಿ ಮದುವೆ

ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಹಾಗೂ ಅವರ ಕುಟುಂಬದ ಜೊತೆ ನೂತನ ದಂಪತಿ ಪ್ರಕಾಶ್ ಕುಮಾರ್ ಹಾಗೂ ಸೈಂಧವಿ

ಪ್ರಕಾಶ್- ಸೈಂಧವಿ ಮದುವೆ

ಪ್ರಕಾಶ್- ಸೈಂಧವಿ ಮದುವೆ

ಆಡುಕಾಲಂ, ತಾಂಡವಂ ಹಾಗೂ ತಲೈವಾ ಚಿತ್ರಗಳ ಮೂಲಕ ಪ್ರಸಿದ್ಧಿ ಪಡೆದ ಪ್ರಕಾಶ್ ಅವರು ಹಿಂದಿಯಲ್ಲಿ ಜೋಕರ್, ಗ್ಯಾಂಗ್ಸ್ ಆಫ್ ವಸ್ಸೇಪುರ್, ಅನುರಾಗ್ ಕಶ್ಯಪ್ ಅವರ ಅಗ್ಲಿ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

ರಜನಿ ಬದಲಿಗೆ ಲತಾ

ರಜನಿ ಬದಲಿಗೆ ಲತಾ

ಕೋಚಾಡಿಯಾನ್ ಚಿತ್ರದಲ್ಲಿ ಬ್ಯುಸಿಯಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮದುವೆಗೆ ಆಗಮಿಸಿರಲಿಲ್ಲ. ಅವರ ಪತ್ನಿ ಲತಾ ರಜನಿಕಾಂತ್ ಅವರು ಶುಭ ಹಾರೈಸಿದರು.

ಅಜಿತ್ ಬದಲಿಗೆ ಶಾಲಿನಿ

ಅಜಿತ್ ಬದಲಿಗೆ ಶಾಲಿನಿ

ಜನಪ್ರಿಯ ನಟ ಅಜಿತ್ ಕೂಡಾ ಮದುವೆಗೆ ಬಂದಿರಲಿಲ್ಲ. ಅವರ ಪತ್ನಿ ಶಾಲಿನಿ, ನಾದಿನಿ ಶಾಮಿಲಿ(ಬೇಬಿ ಶಾಮಿಲಿ) ಆಗಮಿಸಿದ್ದರು.

ನಿರ್ದೇಶಕ ಶಂಕರ್

ನಿರ್ದೇಶಕ ಶಂಕರ್

ನೂತನ ದಂಪತಿ ಪ್ರಕಾಶ್ ಕುಮಾರ್ ಹಾಗೂ ಸೈಂಧವಿ ಹಾರೈಸಲು ಬಂದ ನಿರ್ದೇಶಕ ಶಂಕರ್

ವಿಜಯ್ ಕುಟುಂಬ

ವಿಜಯ್ ಕುಟುಂಬ

ವಿಜಯ್ ಅವರ ಮುಂಬರುವ ಚಿತ್ರ ತಲೈವಾಗೆ ಪ್ರಕಾಶ್ ಅವರೇ ಸಂಗೀತ ನಿರ್ದೇಶಕರು.

ಪ್ರಕಾಶ್ ಜೊತೆ ವಿಜಯ್

ಪ್ರಕಾಶ್ ಜೊತೆ ವಿಜಯ್

ತಲೈವಾ ಚಿತ್ರದ ಸಂಗೀತ ನಿರ್ದೇಶಕ ಮದುಮಗ ಪ್ರಕಾಶ್ ಜೊತೆ ವಿಜಯ್

ತಾರಾಜೋಡಿ

ತಾರಾಜೋಡಿ

ನೂತನ ದಂಪತಿ ಪ್ರಕಾಶ್ ಕುಮಾರ್ ಹಾಗೂ ಸೈಂಧವಿ ಹಾರೈಸಲು ಬಂದ ತಾರಾಜೋಡಿ ಪ್ರಸನ್ನ ಹಾಗೂ ಸ್ನೇಹಾ

ದಯಾನಿಧಿ ಮಾರನ್

ದಯಾನಿಧಿ ಮಾರನ್

ನೂತನ ದಂಪತಿ ಪ್ರಕಾಶ್ ಕುಮಾರ್ ಹಾಗೂ ಸೈಂಧವಿ ಹಾರೈಸಿದ ದಯಾನಿಧಿ ಮಾರನ್

ಬಾಲಮುರಳಿ ಕೃಷ್ಣನ್

ಬಾಲಮುರಳಿ ಕೃಷ್ಣನ್

ನೂತನ ದಂಪತಿ ಪ್ರಕಾಶ್ ಕುಮಾರ್ ಹಾಗೂ ಸೈಂಧವಿ ಹಾರೈಸಿದ ಶಾಸ್ತ್ರೀಯ ಸಂಗೀತಗಾರ ಬಾಲಮುರಳಿ ಕೃಷ್ಣನ್

ಗೆಳಯನ ಜೊತೆ ದಂಪತಿ

ಗೆಳಯನ ಜೊತೆ ದಂಪತಿ

ನಟ ಜೀವಾ ಜೊತೆ ನೂತನ ದಂಪತಿಗಳು...ಇನ್ನಷ್ಟು ಚಿತ್ರಗಳನ್ನು ಗ್ಯಾಲರಿಯಲ್ಲಿ ನೋಡಿ

English summary
For the love birds, GV Prakash nephew of Oscar winner AR Rahman and Singer Saindhavi, this was the day that they have been waiting for from a long time. The couple, after being in love for over 10 years, finally tied the knot laday (June 27) at the presence of their family and friends.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more