ಚಿರಂಜೀವಿ ಸರ್ಜಾ ಇಲ್ಲದ ಸಮಯದಲ್ಲಿ ಕಾಡುವ 'ದಿ ಬೆಸ್ಟ್' ಹಾಡುಗಳು
2009ರಲ್ಲಿ 'ವಾಯುಪುತ್ರ' ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಚಿರಂಜೀವಿ ಸರ್ಜಾ ಹತ್ತು ವರ್ಷದಲ್ಲಿ 25ಕ್ಕು ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಎಲ್ಲ ತರಹದ ಪಾತ್ರಗಳಲ್ಲೂ ನಟಿಸುವ ಪ್ರಯತ್ನ ಮಾಡಿದ್ದ ಸರ್ಜಾ ಸಿನಿಮಾಗಳ ವಿಶೇಷತೆ ಅಂದ್ರೆ ಹಾಡುಗಳು.
ಚಿರು ಅಭಿನಯದ ಸಿನಿಮಾಗಳಲ್ಲಿ ಒಂದಲ್ಲ ಒಂದು ಹಾಡು ಪಕ್ಕಾ ಹಿಟ್ ಆಗ್ತಿತ್ತು. ಸಿನಿಮಾಗಳನ್ನು ಮರೆತುಬಿಟ್ಟರೂ ಹಾಡುಗಳು ಸದಾ ನೆನಪಿನಲ್ಲಿ ಉಳಿದಿದೆ. ಹೀಗೆ, ಚಿರು ನೆನಪು ಹೆಚ್ಚು ಮಾಡುವ ಅಥವಾ ಚಿರು ಸರ್ಜಾ ನೆನಪಾದಾಗ ಕೇಳಬೇಕು ಎನಿಸುವ ಕೆಲವು ಹಾಡುಗಳನ್ನು ಪಟ್ಟಿ ಮಾಡಿದ್ದೇವೆ. ನಿಮಗೆ ಇಷ್ಟ ಹಾಡನ್ನು ಕಾಮೆಂಟ್ ಮೂಲಕ ತಿಳಿಸಬಹುದು. ಮುಂದೆ ಓದಿ...

ಇಲ್ಲೆ ಇಲ್ಲೆ ಎಲ್ಲೋ.....
ಚಿರಂಜೀವಿ ಸರ್ಜಾ ನಟಿಸಿದ ಮೂರನೇ ಸಿನಿಮಾ ಚಿರು. ಈ ಸಿನಿಮಾದಲ್ಲಿ ಐದು ಹಾಡುಗಳಿದ್ದವು. ಎಲ್ಲವೂ ಹಿಟ್ ಆಗಿತ್ತು. ಈ ಪೈಕಿ ''ಇಲ್ಲೆ ಇಲ್ಲೆ ಎಲ್ಲೋ, ನನ್ನ ಮನಸು ಕಾಣೆಯಾಗಿದೆ...'' ಬಹಳ ದೊಡ್ಡ ಹಿಟ್ ಆಗಿತ್ತು. ಹುಡುಗಿಯರ ಪಾಲಿಗೆ ಫೆವರಿಟ್ ಬಿಡಿ. ಘೌಸ್ ಪೀರ್ ಸಾಹಿತ್ಯ ಇತ್ತು.

ನಿನ್ನ ಕಣ್ಣಲ್ಲಿದೆ, ಒಂದು ಸಂಭಾಷಣೆ
ಚಿರು ಸಿನಿಮಾದ ಮತ್ತೊಂದು ಹಾಡು ''ನಿನ್ನ ಕಣ್ಣಲ್ಲಿದೆ, ಒಂದು ಸಂಭಾಷಣೆ....''. ಈ ಹಾಡು ಸಹ ಚಿರು ಅವರ ಟಾಪ್ ಐದು ಹಾಡುಗಳ ಪಟ್ಟಿಯಲ್ಲಿ ಇದ್ದೇ ಇರುತ್ತದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರು. ಗಿರಿಧರ್ ದಿವಾನ್ ಸಂಗೀತ ಇತ್ತು.

ಶಾನೆ ಟಾಪ್ ಆಗ್ವಳ್ಳೆ...
ಚಿರು ಸರ್ಜಾ ಮತ್ತು ಅದಿತಿ ಪ್ರಭುದೇವ ನಟನೆಯ ಸಿಂಗ ಸಿನಿಮಾದ ಹಾಡು 'ಶಾನೆ ಟಾಪ್ ಆಗ್ವಳ್ಳೆ...'. ಚಿರು ಸರ್ಜಾ ವೃತ್ತಿ ಜೀವನದಲ್ಲಿ ಈ ಹಾಡು ದೊಡ್ಡ ಹಿಟ್ ಆಗಿತ್ತು. ಧರ್ಮ ವಿಶ್ ಸಂಗೀತ, ಚೇತನ್ ಕುಮಾರ್ ಸಾಹಿತ್ಯ, ವಿಜಯ್ ಪ್ರಕಾಶ್ ಗಾಯಕ.

ಯಾರೀ ಯಾರೀ ಈ ಬೆಡಗಿ
ಚಿರು ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ನಟನೆಯ ರುದ್ರತಾಂಡವ ಸಿನಿಮಾದಲ್ಲಿ ಎರಡು ಹಾಡು ಇಷ್ಟ ಆಗುತ್ತೆ. ''ಯಾರೀ ಯಾರೀ ಈ ಹುಡುಗಿ....' ಎಂಬ ರೊಮ್ಯಾಂಟಿಕ್ ಹಾಡು. ಇನ್ನೊಂದು ''ಒಂದೂರಲ್ಲಿ ಒಬ್ಬ ಹುಡ್ಗ ಇದ್ದ.....'' ಎಂಬ ಮಾಸ್ ಹಾಡು.

ಹನಿ ಹನಿ ಹನಿ,,,,ಮಂಜಿನಹನಿಯಾದೆ
ಚಿರು ಸರ್ಜಾ ಮತ್ತು ನಿಕ್ಕಿ ಗಲ್ರಾನಿ ನಟನೆಯ ಅಜಿತ್ ಸಿನಿಮಾದ ''ಹನಿ ಹನಿ ಹನಿ,,,,ಮಂಜಿನಹನಿಯಾದೆ' ಹಾಡು ಸಹ ಇಷ್ಟ ಆಗುತ್ತೆ. ಯುವನ್ ಶಂಕರ್ ರಾಜ ಸಂಗೀತ ನೀಡಿದ್ದರು. ಈ ಹಾಡನ್ನು ಗಾಯಕ ಟಿಪ್ಪು ಹಾಡಿದ್ದರು.

ಅಮ್ಮ ಐ ಲವ್ ಯೂ
ಅಮ್ಮಂದಿರ ಬಗ್ಗೆ ಎಷ್ಟೋ ಹಾಡುಗಳು ಬಂದಿವೆ. ಆದರೆ, ಈಗಿನ ಸಮಯಕ್ಕೆ 'ಅಮ್ಮ ಐ ಲವ್ ಯೂ.......' ಹಾಡು ತುಂಬಾ ಇಷ್ಟ ಆಗುತ್ತೆ. ಬಹುಶಃ ಪ್ರತಿಯೊಬ್ಬರು ಅಮ್ಮನನ್ನು ನೆನೆಯುವಾಗ ಈ ಹಾಡು ನೆನಪಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.


Click it and Unblock the Notifications











