ಶೂಟಿಂಗ್‌ಗೆಂದು ಹೋದ ಗಾಯಕಿ ಶವವಾಗಿ ಪತ್ತೆ!

ಕಳೆದ 12 ದಿನಗಳಿಂದ ನಾಮತ್ತೆಯಾಗಿದ್ದ ಗಾಯಕಿಯ ಮೃತ ದೇಹ ಹರ್ಯಾಣ ರಾಜ್ಯದ ರೊಹ್ಟಕ್ ಜಿಲ್ಲೆಯ ಹೈವೇ ಬಳಿ ಪತ್ತೆಯಾಗಿದೆ.

ದೆಹಲಿಯಲ್ಲಿ ವಾಸವಾಗಿದ್ದ ಗಾಯಕಿ ಕಳೆದ ಮೇ 11 ರಂದು ಕಾಣಿಸಿಕೊಂಡಿದ್ದರು. ಬಳಿಕ ಚಿತ್ರೀಕರಣಕ್ಕೆ ಹೋಗುತ್ತಿರುವುದಾಗಿ ಹೇಳಿದ್ದ ಗಾಯಕಿಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈಗ ಹನ್ನೆರಡು ದಿನಗಳ ಬಳಿಕ ಗಾಯಕಿಯ ಮೃತದೇಹ ಪತ್ತೆಯಾಗಿದೆ.

ಮೂರು ದಿನದ ಹಿಂದೆ ಗಾಯಕಿಯ ಕುಟುಂಬದವರು ಅಪಹರಣ ಪ್ರಕರಣವನ್ನು ದಾಖಲಿಸಿದ್ದರು. ಆಕೆಯೊಂದಿಗೆ ಕೆಲಸ ಮಾಡಿದ್ದ ರವಿ ಮತ್ತು ರೋಹಿತ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅವರಿಬ್ಬರೇ ಗಾಯಕಿಯನ್ನು ಅಪಹರಣ ಮಾಡಿರಬಹುದು ಎಂದಿದ್ದರು.

Haryanvi Singers Dead Body Found After 12 Days

ಕುಟುಂಬದವರು ಹೇಳಿದ್ದಂತೆ ರವಿ ಎಂಬಾತನ ಜೊತೆಗೆ ಹರ್ಯಾಣದ ಬಿವಾನಿ ಎಂಬಲ್ಲಿಗೆ ಮ್ಯೂಸಿಕ್ ವಿಡಿಯೋ ಚಿತ್ರೀಕರಣಕ್ಕೆಂದು ತೆರಳಿದ್ದರು ಗಾಯಕಿ. ಪೊಲೀಸರ ಹೇಳಿಕೆಯಂತೆ ರೊಹ್ಟಕ್‌ನ ಬಳಿ ಹೋಟೆಲ್‌ ಒಂದರಲ್ಲಿ ಊಟ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಯಕಿಯ ಮೃತ ದೇಹವು ಸೇತುವೆ ಒಂದರ ಬಳಿ ಮಣ್ಣಿನಡಿ ಪತ್ತೆಯಾಗಿದೆ. ಮೈಮೇಲೆ ಬಟ್ಟೆ ಇಲ್ಲದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.

ಕೇರಳದ ನಟ ಪರಾರಿ

ಕೇರಳದಲ್ಲಿ ಅತ್ಯಾಚಾರ ಆರೋಪಿ ನಟ ಪರಾರಿಯಾಗಿದ್ದು, ನಟನ ವಿರುದ್ಧ ಕೇರಳ ಪೊಲೀಸರು ರೆಡ್ ಕಾರ್ನರ್ ನೊಟೀಸ್ ಹೊರಡಿಸಿದ್ದಾರೆ.

ಕೇರಳದ ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಕಳೆದ ತಿಂಗಳು ಸಹನಟಿಯೊಬ್ಬಾಕೆ ಅತ್ಯಾಚಾರದ ಆರೋಪ ಹೊರಿಸಿದ್ದರು. ನಟನ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿತ್ತು. ಆದರೆ ನಟ ಪರಾರಿಯಾಗಿರುವ ಕಾರಣ ಪೊಲೀಸರು ರೆಡ್ ನೊಟೀಸ್ ಹೊರಿಡಿಸಿದ್ದು, ಕೆಲವೇ ದಿನಗಳಲ್ಲಿ ನಟನ ಬಂಧನ ಆಗಲಿದೆ.

More from Filmibeat

English summary
Haryanvi singer dead body found after 12 days of her missing. She went to a music video shooting and now found dead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X