For Quick Alerts
  ALLOW NOTIFICATIONS  
  For Daily Alerts

  'ಹೊಂದಿಸಿ ಬರೆಯಿರಿ' ಅಂತಿರೋ ತಂಡಕ್ಕೆ ಮೋಹಕ ತಾರೆ ಸಾಥ್ !

  |

  'ಹೊಂದಿಸಿ ಬರೆಯಿರಿ' ಟೈಟಲ್ ಮೂಲಕವೇ ಕಥೆ ಹೇಳಲು ಹೊರಟಿದೆ ಇಲ್ಲೊಂದು ತಂಡ. ಪ್ರವೀಣ್‌ ತೇಜ್‌, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್‌, ಭಾವನಾ ರಾವ್‌, ನವೀನ್‌ ಶಂಕರ್‌, ಅರ್ಚನಾ ಜೋಯಿಸ್‌ ಅಂತಹ ಕಲರ್‌ಫುಲ್ ಕಲಾವಿದರನ್ನು ಮುಂದಿಟ್ಟುಕೊಂಡು ಸುಂದರ ಕಥೆಯನ್ನು ಹೇಳಲು ರೆಡಿಯಾಗಿದೆ.

  'ಹೊಂದಿಸಿ ಬರೆಯಿರಿ' ಸಿನಿಮಾ ನವೆಂಬರ್‌ 18ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಕಲರ್ ಫುಲ್ ತಾರೆಯರ ಜೊತೆ ಹಿರಿಯರ ಕಲಾವಿದರ ಸಮಾಗಮವೂ ಆಗಿದೆ. ಸುನೀಲ್‌ ಪುರಾಣಿಕ್‌, ಪ್ರವೀಣ್‌ ಡಿ ರಾವ್‌, ಧರ್ಮೇಂದ್ರ ಅರಸ್‌, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಹಿರಿಯ ಕಲಾವಿದರು ನಟಿಸಿದ್ದಾರೆ.

  'ಹೊಂದಿಸಿ ಬರೆಯಿರಿ' ಸಿನಿಮಾವನ್ನು ರಾಮೇನಹಳ್ಳಿ ಜಗನ್ನಾಥ್ ನಿರ್ದೇಶಿಸಿದ್ದಾರೆ. ಈಗಾಗಲೇ ಸಿನಿಮಾ ಫಸ್ಟ್ ಲುಕ್‌ನಿಂದಲೇ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈಗ 'ಹೊಂದಿಸಿ ಬರೆಯಿರಿ' ಸಿನಿಮಾಗೆ ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಸಾಥ್ ಕೊಡಲು ರೆಡಿಯಾಗಿದ್ದಾರೆ.

  'ಹೊಂದಿಸಿ ಬರೆಯಿರಿ' ಸಿನಿಮಾದ 'ಓ ಕವನ..' ಎಂಬ ವಿಡಿಯೋ ಸಾಂಗ್ ಸೆಪ್ಟೆಂಬರ್ 28ರಂದು ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ, ಇದೇ ಸಾಂಗ್ ಅನ್ನು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಲಿದ್ದಾರೆ. ಸೆಪ್ಟೆಂಬರ್ 28ರಂದು ಬೆಳಗ್ಗೆ 11.31ಕ್ಕೆ ಈ ಹಾಡು ರಿಲೀಸ್ ಆಗಲಿದೆ.

  ಏಳು ಯುವಕ-ಯುವತಿಯರ ಒಂದೊಂದು ಕಥೆಯನ್ನೂ ಈ ಸಿನಿಮಾದಲ್ಲಿ ಹೊಂದಿಸಿ ಬರೆಯಲಾಗಿದೆ. ಅದಕ್ಕೆ 'ಹೊಂದಿಸಿ ಬರೆಯಿರಿ' ಅನ್ನೋ ಟೈಟಲ್ ಸೂಕ್ತ ಎನ್ನುತ್ತಿದೆ ಚಿತ್ರತಂಡ. ನಮ್ಮ ಬದುಕಿನಲ್ಲಿ ಏನೇ ಆದರೂ, ಅದಕ್ಕೆ ನಾವೇ ಹೊಣೆ. ಹೊಂದಿಸಿ ಬರೆದುಕೊಂಡು ಜೀವನ ಸಾಗಿಸಬೇಕು ಎನ್ನುವ ಸಂದೇಶವನ್ನು ಈ ಸಿನಿಮಾದಲ್ಲಿ ನೀಡಲಾಗಿದೆ.

  Hondisi Bareyiri Kannada Movie Song Will Be Releasing By Actress Ramya

  ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. 'ಗುಳ್ಟು' ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. 'ಟಗರು' ಖ್ಯಾತಿಯ ಮಾಸ್ತಿ, 'ಪೊಗರು' ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರೂ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

  English summary
  Hondisi Bareyiri Kannada Movie Song Will Be Releasing By Actress Ramya, Know More.
  Sunday, September 25, 2022, 23:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X