For Quick Alerts
  ALLOW NOTIFICATIONS  
  For Daily Alerts

  ಸಂಗೀತ ರಸಸಂಜೆ: 8 ಮಂದಿ ಸಾವು, 17 ಜನ ಗಂಭೀರ

  |

  ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ಸಂಗೀತ ರಸಸಂಜೆ (ಮ್ಯೂಸಿಕ್ ಫೆಸ್ಟ್) ಒಂದರಲ್ಲಿ ಅಭಿಮಾನಿಗಳ ನಡುವೆ ನೂಕು-ನುಗ್ಗಲಿನಿಂದಾಗಿ ಎಂಟು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ, ಹದಿನೇಳು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.

  ಟೆಕ್ಸಾಸ್‌ನ ಎನ್‌ಜಿಆರ್‌ ಪಾರ್ಕ್‌ನಲ್ಲಿ 'ಆಸ್ಟ್ರೊವರ್ಲ್ಡ್' ಹೆಸರಿನ ಮ್ಯೂಸಿಕ್ ಫೆಸ್ಟ್ ಆಯೋಜಿಸಲಾಗಿತ್ತು. ಈ ಫೆಸ್ಟ್‌ಗೆ ನಿರೀಕ್ಷೆಗಿಂತಲೂ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಹೀಗಾಗಿ ಭಾರಿ ನೂಕು ನುಕ್ಕಲಾಗಿ ಸ್ಟೇಜ್‌ಗೆ ಹತ್ತಿರದಲ್ಲಿದ್ದ ಅಭಿಮಾನಿಗಳ ಮೇಲೆ ಒತ್ತಡ ಹೆಚ್ಚಾಗಿ ಎಂಟು ಮಂದಿ ಮೃತಪಟ್ಟಿದ್ದಾರೆ.

  ಘಟನೆ ನಡೆದಾಗ ವೇದಿಕೆ ಮೇಲೆ ಟ್ರಾವಿಸ್ ಸ್ಕಾಟ್‌ ಹಾಡುತ್ತಿದ್ದರು. ವೇದಿಕೆ ಮುಂಭಾಗದ ಅಭಿಮಾನಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿರುವುದನ್ನು ಗಮನಿಸಿ ಟ್ರಾವಿಸ್ ಸ್ಕಾಟ್ ಹಾಡುವುದು ನಿಲ್ಲಿಸಿದರು. ಆದರೆ ಅಭಿಮಾನಿಗಳು ವೇದಿಕೆ ಕಡೆಗೆ ನುಗ್ಗಲು ಪ್ರಯತ್ನಿಸುತ್ತಲೇ ಇದ್ದಿದ್ದರಿಂದ ಒತ್ತಡ ಏರುತ್ತಲೇ ಸಾಗಿ ಎಂಟು ಮಂದಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ. 17 ಮಂದಿ ಗಾಯಗೊಂಡಿದ್ದು, ಅದರಲ್ಲಿ 11 ಮಂದಿಗೆ ಹೃದಯಾಘಾತವಾಗಿದೆ.

  ಕಾರ್ಯಕ್ರಮದ ಹಲವು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಾನ್ಸರ್ಟ್ ಆರಂಭವಾಗುವ ಮುನ್ನ ಎನ್‌ಜಿಆರ್ ಪಾರ್ಕ್‌ ಒಳಕ್ಕೆ ಅಭಿಮಾನಿಗಳು ಗೇಟ್‌ ಹಾರಿಕೊಂಡು ಒಳಬರುತ್ತಿರುವ ದೃಶ್ಯಗಳು ದಾಖಲಾಗಿವೆ. ಕಾನ್ಸರ್ಟ್ ಆರಂಭಕ್ಕೂ ಮುನ್ನವೇ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದೆ.

  ಸ್ಥಳೀಯ ಪೊಲೀಸ್ ಅಧಿಕಾರಿ ಲ್ಯಾರಿ ಜೆ ಸ್ಟಾರ್ಲೈಟ್ ಹೇಳೀರುವಂತೆ, ''ಸುಮಾರು 50,000 ಕ್ಕೂ ಹೆಚ್ಚು ಅಭಿಮಾನಿಗಳು ಸ್ಥಳದಲ್ಲಿ ಹಾಜರಿದ್ದರು. ಕಾನ್ಸರ್ಟ್ ಆರಂಭವಾದ ಕೆಲವು ನಿಮಿಷಗಳ ಬಳಿಕ ಹಲವರಿಗೆ ಹೃದಯಾಘಾತವಾಯಿತು, ಕೆಲವರಿಗೆ ಉಸಿರಾಟ ಸಮಸ್ಯೆ ಎದುರಾಯಿತು, ಹಲವರು ಮೂರ್ಛೆ ತಪ್ಪಿ ಬಿದ್ದುಬಿಟ್ಟರು. ಕೆಲವು ಅಭಿಮಾನಿಳು ಆರ್ಗನೈಜರ್‌ಗಳನ್ನು ಸಂಪರ್ಕಿಸಿದಾಗ ಅವರು ಪೊಲೀಸರು, ಅಗ್ನಿಶಾಮಕ ದಳ ಹಾಗೂ ಆಂಬುಲೆನ್ಸ್ ಅವರನ್ನು ಸಂಪರ್ಕಿಸಿದರು'' ಎಂದಿದ್ದಾರೆ.

  2018ರಲ್ಲಿ ಆಸ್ಟ್ರೋವರ್ಲ್ಡ್ ಸಂಗೀತ ಫೆಸ್ಟಿವಲ್ ಮೊದಲ ಬಾರಿಗೆ ಆಯೋಜಿಸಲಾಗಿತ್ತು, ಆಗಿನಿಂದಲೂ ಈ ಕಾನ್ಸರ್ಟ್‌ಗೆ ಅಭಿಮಾನಿಗಳು ಹೆಚ್ಚು. ಈ ಹಿಂದೆಯೂ ಅಸ್ಟ್ರೊವರ್ಲ್ಡ್ ಕಾನ್ಸರ್ಟ್‌ಗಳಲ್ಲಿ ಅಭಿಮಾನಿಗಳು ಮೂರ್ಚೆ ತಪ್ಪಿ ಬಿದ್ದಿದ್ದು, ಉಸಿರಾಟದ ಸಮಸ್ಯೆ ಎದುರಿಸಿದ, ಹೃದಯಾಘಾತಕ್ಕೆ ಒಳಪಟ್ಟ ಸಂಗತಿಗಳು ನಡೆದಿವೆ ಎಂದು ಕಾನ್ಸರ್ಟ್‌ನಲ್ಲಿ ಭಾಗವಹಿಸಿದ್ದ ಆಸ್ಕ್ಟೊವರ್ಲ್ಡ್ ಅಭಿಮಾನಿಯೊಬ್ಬ ಟೆಕ್ಸಾಸ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  English summary
  Horrifying incident happened in Astroworld music festival in Texas. 8 fans died and 17 were injured.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X