»   » 'ಹಳೆ ಪದ್ಮಾವತಿ'ಯನ್ನ ಹಿಂದಿಕ್ಕಲು ಬಂದ 'ಹೊಸ ಪದ್ಮಾವತಿ'

'ಹಳೆ ಪದ್ಮಾವತಿ'ಯನ್ನ ಹಿಂದಿಕ್ಕಲು ಬಂದ 'ಹೊಸ ಪದ್ಮಾವತಿ'

Posted By:
Subscribe to Filmibeat Kannada
'ಹಳೆ ಪದ್ಮಾವತಿ'ಯನ್ನ ಹಿಂದಿಕ್ಕಲು ಬಂದ 'ಹೊಸ ಪದ್ಮಾವತಿ' | FIlmibeat Kannada

ದುನಿಯಾ ವಿಜಯ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜೋಡಿಯಲ್ಲಿ ಮೂಡಿ ಬಂದಿದ್ದ ಸಿನಿಮಾ 'ಜಾನಿ'. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಸಿನಿಮಾಗಿಂತ ಹೆಚ್ಚು ಯಶಸ್ಸು ಕಂಡಿದ್ದು 'ಊರಿಗೊಬ್ಳೆ ಪದ್ಮಾವತಿ' ಹಾಡು.

ಇದೀಗ, 'ಜಾನಿ' ಚಿತ್ರದ ಮುಂದುವರೆದ ಭಾಗ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ ತಯಾರಾಗುತ್ತಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿದ್ದು, ಇಲ್ಲಿಯೂ 'ಪದ್ಮಾವತಿ' ಗುಣಗಾನ ಜೋರಾಗಿದೆ.

ಹೌದು, 'ಹೊಸ ಪದ್ಮಾವತಿ' ಬಗ್ಗೆ ಹಾಡೊಂದು ಸಿದ್ದವಾಗಿದ್ದು, ಈಗ ಹಾಡಿನ ಟೀಸರ್ ರಿಲೀಸ್ ಆಗಿದೆ. ಪಕ್ಕಾ ಮಾಡ್ರನ್ ಹುಡುಗಿ ಗೆಟಪ್​ ನಲ್ಲಿ ರಚಿತಾ ಮಿಂಚಿದ್ದು, ಸಖತ್ ಕಲರ್ ಫುಲ್ ಆಗಿ ಮೂಡಿ ಬಂದಿದೆ.

'ಜಾನಿ ಜಾನಿ ಎಸ್ ಪಪ್ಪಾ' ಬಗ್ಗೆ ಭವಿಷ್ಯ ನುಡಿದ ಗಡ್ಡಪ್ಪ

Hosa Padmavathi song from Johnny Johnny Yes Papa

ಪ್ರೀತಂ ಗುಬ್ಬಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ದುನಿಯಾ ಟಾಕೀಸ್ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗಿದೆ. ಸಾಧು ಕೋಕಿಲಾ, ರಂಗಾಯಣ ರಘು ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, 'ಕಿರಿಕ್ ಪಾರ್ಟಿ' ಖ್ಯಾತಿಯ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದಾರೆ.

English summary
Hosa Padmavathi song teaser from Johnny Johnny Yes Papa movie Starring Duniya Vijay, Rachitha Ram, Rangayana Raghu, Sadhu Kokila. the movie directed by preetham gubbi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada