'ಅನ್ನನ ಪಾಥಿಯ ಅಪಾ ತಿ ತೇ ತೇನಾ' ಸಾಂಗ್ ದಿಢೀರ್ ವೈರಲ್ ಆಗಿದ್ದೇಕೆ?ಅರ್ಥ ಏನು?
ಸೋಷಿಯಲ್ ಮೀಡಿಯಾನೇ ಹಾಗೆ. ಯಾವಾಗ ಯಾವ ವಿಚಾರ ಟ್ರೆಂಡ್ ಆಗುತ್ತದೆ ಎಂದು ಹೇಳುವುದು ಕಷ್ಟ. ಅದರಲ್ಲೂ ಟಿಕ್ ಟಾಕ್, ಡಬ್‌ಸ್ಮ್ಯಾಶ್, ರೀಲ್ಸ್ ಶುರುವಾದ ಬಳಿಕ ಹಳೇ ವೀಡಿಯೋ, ಸಾಂಗ್, ಡೈಲಾಗ್‌ಗಳೆಲ್ಲಾ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿಬಿಟ್ಟವು. ಇದೀಗ ಅನ್ನನ ಪಾಥಿಯ ಅಪಾ ತಿ ತೇ ತೇನಾ ಸರದಿ.
ಇನ್‌ಸ್ಟಾಗ್ರಾಮ್ ರೀಲ್ಸ್ ನೋಡುವವರಿಗೆ ಈಗಾಗಲೇ 'ಅನ್ನನ ಪಾಥಿಯ ಅಪಾ ತಿ ತೇ ತೇನಾ' ಈ ಹಾಡು ಕಿವಿ ಮೇಲೆ ಬಿದ್ದಿರುತ್ತದೆ. ಈ ಥಾಯ್ ಭಾಷೆಯ ಸಣ್ಣ ಹಾಡಿನ ಝಲಕ್ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ರೀಲ್ಸ್ ಪ್ರಿಯರಂತೂ ತಮ್ಮದೇ ಶೈಲಿಯಲ್ಲಿ ಈ ಹಾಡಿಗೆ ಹೆಜ್ಜೆ ಹಾಕ್ತಿದ್ದಾರೆ. ಈ ಸಾಹಿತ್ಯದ ಅರ್ಥವೇ ಗೊತ್ತಿಲ್ಲದೇ ಕುಣಿಯುತ್ತಿದ್ದಾರೆ. ಅರ್ಥ ಕಟ್ಕೊಂಡು ನಮಗೇನು ಆಗಬೇಕು, ಕೇಳೋಕೆ ಚೆನ್ನಾಗೈತೆ ಅಷ್ಟು ಸಾಕು ಎನ್ನುತ್ತಿದ್ದಾರೆ.

ವಿಚಿತ್ರವಾಗಿರುವುದು ಕೆಲವರಿಗೆ ಬಹಳ ಇಷ್ಟವಾಗುತ್ತದೆ. ಬೇಗ ವೈರಲ್ ಆಗಿಬಿಡುತ್ತದೆ. ಡಿಂಕ್ ಚಕ್ ಪೂಜಾ, ಸಿನಿಮಾ ರಿವ್ಯೂ ಮಾಡುವ ನವಾಜ್ ಹೀಗೆ ಕೆಲವರು ವಿಭಿನ್ನವಾಗಿ ಕಾಣಿಸಿಕೊಂಡು ಫೇಮಸ್ ಆಗಿದ್ದು ಗೊತ್ತೇಯಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ 25 ವರ್ಷಗಳ ಹಿಂದಿನ 'ಕರಿಮಣಿ ಮಾಲೀಕ ನಾನಲ್ಲ', 70 ವರ್ಷಗಳ ಹಿಂದೆ ಬಂದಿದ್ದ 'ನಾನೊಂದು ಮದುವೆಯ ಮಾಡಿಕೊಂಡೆ' ಹಾಡು ಮೊನ್ನೆ ಮೊನ್ನೆ ಟ್ರೆಂಡ್ ಆಗಿದ್ದು ಗೊತ್ತೇಯಿದೆ.
'ಅನ್ನನ ಪಾಥಿಯ ಅಪಾ ತಿ ತೇ ತೇನಾ' ಸಾಂಗ್ ಕೂಡ ಕೇಳೋಕೆ ಭಿನ್ನವಾಗಿದೆ. ಆ ರಿದಮ್, ಟ್ಯೂನ್, ಪದಗಳು ಕೇಳಿದಾಗ ಬಹಳ ವಿಚಿತ್ರ ಅನ್ನಿಸ್ತಿದೆ. ಕೆಲವರಿಗೆ ಮತ್ತೆ ಮತ್ತೆ ಕೇಳಬೇಕು ಎನಿಸುತ್ತಿದೆ. ಮತ್ತೆ ಕೆಲವರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇದೆಲ್ಲದರ ಹೊರತಾಗಿ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಂದಹಾಗೆ ಇದು 13 ವರ್ಷಗಳ ಹಳೆಯ ಹಾಡು ಎನ್ನಲಾಗ್ತಿದೆ.
ಮೊದಲಿಗೆ 2010ರಲ್ಲಿ 'ದಿ ಹೋಲಿ ಮ್ಯಾನ್- 3' ಎಂಬ ಥಾಯ್ ಸಿನಿಮಾದಲ್ಲಿ 'ಅನ್ನನ ಪಾಥಿಯ ಅಪಾ ತಿ ತೇ ತೇನಾ' ಹಾಡು ಬಳಕೆಯಾಗಿತ್ತು. ಬಳಿಕ 2014ರಲ್ಲಿ 'ಲುಕ್ ಥಂಗ್ ಕಾಮಿಡಿ' ಎಂಬ ಆಲ್ಬಮ್‌ನಲ್ಲಿ ಜಾಗ ಮಾಡಿಕೊಂಡಿತ್ತು. 2019ರಲ್ಲಿ ಇಂಡೋನೇಷ್ಯಾ ಮೂಲದ ಗಾಯಕಿ ನಿಕೆನ್ ಸಲಿಂದ್ರಿ ಈ ಹಾಡನ್ನು ವೇದಿಕೆಯಲ್ಲಿ ಹಾಡಿ ಹೆಜ್ಜೆ ಹಾಕಿದ್ದಳು. ಆ ಬಳಿಕ ಇದು ವೈರಲ್ ಆಗಲು ಶುರುವಾಯಿತು. ವೇದಿಕೆಗಳಲ್ಲಿ ಆಕೆ ಹಾಡು ಹಾಡಿ ಹೆಜ್ಜೆ ಹಾಕಿರುವ ವೀಡಿಯೋಗಳು ಸಖತ್ ಸದ್ದು ಮಾಡ್ತಿವೆ.
ಕೆ-ಪಾಪ್ ಗುಂಪಿನ ಬ್ಲ್ಯಾಕ್‌ಪಿಂಕ್‌ನ ಸದಸ್ಯೆ ರೋಸ್, ಬ್ರೂನೋ ಮಾರ್ಸ್ ಜೊತೆ ಸೇರಿ'APT' ಎಂಬ ಹಾಡನ್ನು ರಿಲೀಸ್ ಮಾಡಿದ್ದರು. 'ಅನನ್ ತಾ ಪಡ್ ಚಾಯೆ' ಎಂದು ಶುರುವಾಗಿದ್ದ ಹಾಡು ಮತ್ತಷ್ಟು ಸದ್ದು ಮಾಡಿತ್ತು. ಈ ಹಾಡಿನ ಸಾಲುಗಳು ತಮಿಳು ಪದಗಳ ಉಚ್ಛಾರಣೆ ರೀತಿ ಇರುವುದರಿಂದ ತಮಿಳುನಾಡಿನಲ್ಲಿ ಹೆಚ್ಚು ಗಮನ ಸೆಳೆಯಿತು. ರೀಲ್ಸ್‌ಗಳಲ್ಲಿ ವೈರಲ್ ಆಗಿ ಈಗ ಎಲ್ಲಾ ಕಡೆ ಸೌಂಡ್ ಮಾಡ್ತಿದೆ. ಒಟ್ಟಾರೆ ಅರ್ಥ ಆಗದೇ ಇದ್ದರೂ ವೈಬ್ ಚೆನ್ನಾಗಿದೆ ಕೆಲವರು ಸುಮ್ಮನೆ ಕುಣಿದು ಎಂಜಾಯ್ ಮಾಡ್ತಿದ್ದಾರೆ.
ಥಾಯ್ಲೆಂಡ್ ದೇಶದ ಜನಪದ ಹಾಡನ್ನು ಕೊಂಚ ಬದಲಿಸಿ ಆಲ್ಬಮ್, ಸಿನಿಮಾಗಳಲ್ಲಿ ಬಳಸಿ ಕೊನೆಗೆ ಇದೀಗ ಇಂಟರ್‌ನೆಟ್ ಸೆನ್ಸೇಷನ್ ಆಗಿದೆ. ಮತ್ತೊಬ್ಬ ಗಾಯಕಿ ಸಿಲ್ವಾಯ ಕುಮಲಸಾರಿ ಈ ಹಾಡನ್ನು ವೇದಿಕೆಯಲ್ಲಿ ಹಾಡಿ ಕುಣಿದ ಮೇಲೆ ಮತ್ತಷ್ಟು ಜನರಿಗೆ ತಲುಪಿತು.


Click it and Unblock the Notifications











