ಸಂಗೀತ ಮಾಂತ್ರಿಕ ಇಳಯರಾಜ ಹುಟ್ಟುಹಬ್ಬ: ಅದ್ಧೂರಿ ಕಾರ್ಯಕ್ರಮಕ್ಕೆ ಸಜ್ಜು!

ಇಂದು (ಜೂನ್ 2) ಸಂಗೀತ ಲೋಕದಲ್ಲಿ ಲೆಜೆಂಡ್, ಸಂಗೀತ ಮಾಂತ್ರಿಕ ಎಂದೇ ಖ್ಯಾತಿ ಗಳಿಸಿರುವ ಇಳಯರಾಜ ಅವರ ಹುಟ್ಟುಹಬ್ಬ. ಹಾಗಾಗಿ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಇಳಯರಾಜ ಆಚರಿಸಿಕೊಂಡಿದ್ದಾರೆ. ಇಳಯರಾಜ ಹುಟ್ಟು ಹಬ್ಬದ ಪ್ರಯುಕ್ತ ತಿರುಕಡೈಯೂರ್‌ನಲ್ಲಿ ಅಮೃತೇಶ್ವರ್ ಅಭಿರಾಮಿ ದೇವಸ್ಥಾನದಲ್ಲಿ ಸದಾಭಿಷೇಕ ಕಾರ್ಯಕ್ರಮ ನಡೆಸಲಾಯಿತು.

ಜೊತೆಗೆ ಇಂದು(ಜೂನ್ 2) ಜನ್ಮದಿನದ ಪ್ರಯುಕ್ತ ಇಳಯರಾಜ ಅವರ ಸಂಗೀತ ಕಛೇರಿಯನ್ನು ಕೂಡ ಆಯೋಜಿಸಲಾಗಿದೆ. ಇಳಯರಾಜ ಅವರ ಸಂಗೀತ ಕಾರ್ಯಕ್ರಮ ಎಂದರೆ, ಅಲ್ಲಿ ಸಾವಿರಾರು ಜನ ಸೇರುತ್ತಾರೆ. ಈ ಕಾರ್ಯಕ್ರಮದಲ್ಲಿಯೂ ಜನರು ಭಾಗಿಯಾಗುವ ಸಾಧ್ಯತೆ ಇದೆ.

ಇಂದು ಸಂಜೆ ಕೊಯಂಬತ್ತೂರಿನಲ್ಲಿ ಇಳೆಯರಾಜ ಸಂಗೀತ ಕಛೇರಿಯನ್ನು ಏರ್ಪಡಿಸಲಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಇಳಿಯರಾಜ ಕಾರ್ಯಕ್ರಮ ವ್ಯವಸ್ಥಾಪಕ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ಕೊಯಂಬತ್ತೂರಿನಲ್ಲಿ ಕೊಡಿಸಿಯ ಮೈದಾನದಲ್ಲಿ ನಡೆಯುವ ಕಾರ್ಯಕ್ರಮ ಸಂಜೆ 6 ಗಂಟೆಯಿಂದ ಆರಂಭವಾಗಲಿದೆ.

Ilaiyaraaja Celebrating 79th Birthday, Big Music Concert In Coimbatore

ಈ ಕಾರ್ಯಕ್ರಮದ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಇಳೆಯರಾಜ "ಹುಟ್ಟುಹಬ್ಬದಂದು ಕೊಯಂಬತ್ತೂರಿನಲ್ಲಿ ಪ್ರದರ್ಶನ ನೀಡಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆಯೋಜಕರ ಪ್ರಕಾರ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಬರುವ ನಿರೀಕ್ಷೆಯಿದೆ. ಇಳಯರಾಜ ಅವರ ಜೊತೆಗೆ ಇತರ ಗಾಯಕರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Ilaiyaraaja Celebrating 79th Birthday, Big Music Concert In Coimbatore

ಇಳಯರಾಜ ಅವರ ಸಂಗೀತ ಸಾಧನೆ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಸಾವಿರದ ಐನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಏಳು ಸಾವಿರಕ್ಕೂ ಅಧಿಕ ಹಾಡುಗಳಿಗೆ ಇಳಿಯರಾಜ ಸಂಗೀತ ನೀಡಿದ್ದಾರೆ. ಇನ್ನು ಇಪ್ಪತ್ತು ಸಾವಿರಕ್ಕೂ ಅಧಿಕ ಲೈವ್ ಕಾರ್ಯಕ್ರಮಗಳಲ್ಲಿ ಇಳಿಯರಾಜ ಹಾಡಿದ್ದಾರೆ. ಇನ್ನು ಈಗ ಹುಟ್ಟುಹಬ್ಬದ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ.

More from Filmibeat

English summary
Ilaiyaraaja Celebrating 79th Birthday, Big Music Concert In Coimbatore,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X