For Quick Alerts
  ALLOW NOTIFICATIONS  
  For Daily Alerts

  ಚಿತ್ತಾರದಿಂದ ಕನ್ನಡ ಸಂಗೀತಕ್ಕಾಗಿ ಸಿ ಮ್ಯೂಸಿಕ್ ಅರ್ಪಣೆ

  By Mahesh
  |

  ಕನ್ನಡಿಗರ ಜನಮನವನ್ನು ತಲುಪುತ್ತಿರುವ ಚಿತ್ತಾರ ತನ್ನ ಏಳನೇ ವಸಂತದ ಸಂಭ್ರಮದಲ್ಲಿ ಕನ್ನಡ ಸಂಗೀತ ಪ್ರೇಮಿಗಳಿಗೆ ಹೊಸ ಕೊಡುಗೆಯನ್ನು ನೀಡಿದೆ. ಕನ್ನಡ ಸಂಗೀತಕ್ಕಾಗಿ ಮುಡಿಪಾಗಿರುವ ಧ್ವನಿಸುರಳಿ ಸಂಸ್ಥೆ 'ಸಿ ಮ್ಯೂಸಿಕ್' ಲೋಕಾರ್ಪಣೆಗೊಂಡಿದೆ.

  ಚಿತ್ತಾರ ಸಿನಿ ಮಾಸಿಕದ ಹೊಸ ಕೂಸು, ಹೊಸ ಕನಸು ಸೋಮವಾರ ಸಂಜೆ (ಸೆ.21) ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಲೋಕಾರ್ಪಣೆಯಾಗಿದೆ. ಸಂಗೀತ ಲೋಕದ ಹೊಸ ಅತಿಥಿಯನ್ನು ಬರಮಾಡಿಕೊಳ್ಳಲು ಚಿತ್ರರಂಗದ ಗಣ್ಯರು, ಚಿತ್ರರಂಗದ ತಾರೆಯರು ಹಾಗೂ ಕಲಾಪೋಷಕರಾದ ಚಿತ್ರರಸಿಕರು ಸಾಕ್ಷಿಯಾದರು.

  ಕನ್ನಡದ ಹಾಡುಗಳ ಮಾರುಕಟ್ಟೆಯನ್ನು ವಿಸ್ತರಿಸಬೇಕೆನ್ನುವ ಮಹತ್ತರ ಕನಸಿನೊಂದಿಗೆ ಈ ಹೆಜ್ಜೆಯನ್ನಿಡುತ್ತಿದ್ದೇವೆ. ಚಿತ್ರರಂಗದ ಸ್ನೇಹಿತರು, ಕಲಾವಿದರು, ತಂತ್ರಜ್ಞರು ಹಾಗೂ ಕನ್ನಡ ಚಿತ್ರರಂಗವನ್ನು ಉಳಿಸಿ ಬೆಳೆಸುತ್ತಿರುವ ಕಲಾರಸಿಕರೇ ನಮ್ಮ ಬಂಧುಗಳು. ನಿಮ್ಮ ಹಾರೈಕೆಯೊಂದಿಗೆ ನಮ್ಮ ಹೊಸ ಕನಸು ನನಸಾಗಲಿದೆ ಎಂದು ಚಿತ್ತಾರ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೆ ಶಿವಕುಮಾರ್ ಹೇಳಿದರು.[ಸಂಗೀತಗಾರರ ಸನ್ಮಾನದೊಂದಿಗೆ ಸಿ ಮ್ಯೂಸಿಕ್ ಲೋಕಾರ್ಪಣೆ]

  ಕನ್ನಡ ಸಂಗೀತಲೋಕಕ್ಕೆ ತಮ್ಮ ಅದ್ಭುತ ಸಂಗೀತದಿಂದ, ಅರ್ಥಪೂರ್ಣ ಸಾಹಿತ್ಯದಿಂದ, ಮಾಧುರ್ಯ ಭರಿತ ಹಾಡುಗಳಿಂದ ವಿಶೇಷ ಕೊಡುಗೆ ನೀಡಿದ ಆ ಮೂಲಕ ಕನ್ನಡ ಚಿತ್ರರಂಗದ ಸಂಗೀತ ಲೋಕಕ್ಕೆ ಮತ್ತಷ್ಟು ಹೊಳಪು ತಂದ ಸಾಧಕರನ್ನು ಚಿತ್ತಾರ ಸಿನಿ ಮಾಸಿಕ ಸಿ ಮ್ಯೂಸಿಕ್ ಉದ್ಘಾಟನೆಯ ಶುಭ ಸಂದರ್ಭದಲ್ಲಿ ತುಂಬು ಅಭಿಮಾನದಿಂದ ಸನ್ಮಾನಿಸಲಾಯಿತು.ಸಮಾರಂಭದ ಚಿತ್ರಗಳು ನಿಮ್ಮ ಮುಂದಿದೆ...

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಖ್ಯಾತ ಸಂಗೀತ ನಿರ್ದೇಶಕರಾದ ವಿ. ಮನೋಹರ್, ರಾಜೇಶ್ ರಾಮನಾಥ್. ವಿ. ಶ್ರೀಧರ್ ಸಂಭ್ರಮ್, ಅಭಿಮನ್ ರಾಯ್, ಅಜನೀಶ್ ಲೋಕನಾಥ್ ಸನ್ಮಾನಕ್ಕೆ ಭಾಜನರಾಗಲಿದ್ದಾರೆ.

  ಖ್ಯಾತ ಚಿತ್ರಸಾಹಿತಿಗಳಾದ ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್, ಪ್ರೇಮಕವಿ ಕೆ. ಕಲ್ಯಾಣ್, ಪದಕಣಜ ಅರಸು ಅಂತಾರೆ ಅವರನ್ನು ಸನ್ಮಾನಿಸಲಾಗುತ್ತದೆ.

  ಖ್ಯಾತ ಹಿನ್ನೆಲೆ ಗಾಯಕರಾದ ಎಲ್. ಎನ್. ಶಾಸ್ತ್ರಿ, ಅನುರಾಧ ಭಟ್, ಶಮಿತಾ ಮಲ್ನಾಡ್, ವಾಣಿ ಹರಿಕೃಷ್ಣ ಅವರನ್ನು ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಗುತ್ತದೆ.

  ಯುವ ಪ್ರತಿಭೆಗಳಿಗೆ ಪ್ರೋತ್ಸಾಹ

  ಯುವ ಪ್ರತಿಭೆಗಳಿಗೆ ಪ್ರೋತ್ಸಾಹ

  ಸಿ- ಮ್ಯೂಸಿಕ್ ಕೇವಲ ಕನ್ನಡ ಚಲನಚಿತ್ರ ಗೀತೆಗಳಿಗೆ ಸೀಮಿತವಾಗುವ ಆಡಿಯೋ ಸಂಸ್ಥೆಯಲ್ಲ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ನಮ್ಮ ಸಂಸ್ಥೆ ಮುಂದಾಗಿದ್ದು, ಕನ್ನಡ Rap, ಖಾಸಗಿ ಮ್ಯೂಸಿಕೆ ಆಲ್ಬಮ್, ಜಾನಪದ ಗೀತೆ ಸಂಗ್ರಹವನ್ನು ಹೊರತರಲು ಇಚ್ಛಿಸುವವರಿಗೆ ನಮ್ಮ ಸಂಸ್ಥೆ ನೆರವಾಗಲಿದೆ ಎಂದು ಕೆ ಶಿವಕುಮಾರ್ ಹೇಳಿದರು

  'ಹಾದಿ ಬೀದಿ ಲವ್ ಸ್ಟೋರಿ' ಚಿತ್ರದ ಹಾಡುಗಳು

  'ಹಾದಿ ಬೀದಿ ಲವ್ ಸ್ಟೋರಿ' ಚಿತ್ರದ ಹಾಡುಗಳು

  ಇದೇ ವಿಶೇಷ ಸಂದರ್ಭದಲ್ಲಿ ಸಿ ಮ್ಯೂಸಿಕ್ ಸಂಸ್ಥೆಯಿಂದ ಹೊರಬರುತ್ತಿರುವ ಚೊಚ್ಚಲ ಆಡಿಯೋವಾಗಿ ಚಂದ್ರಶೇಖರ್ ಮಾವಿನಕುಂಟೆ ನಿರ್ದೇಶನದ, ಎಚ್. ಎಂ. ಸುಧೀರ್ ಗೌಡ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಹಾದಿ ಬೀದಿ ಲವ್ ಸ್ಟೋರಿ' ಚಿತ್ರದ ಹಾಡುಗಳು ಲೋಕಾರ್ಪಣೆ ಮಾಡಲಾಯಿತು. ಸಿ.ಆರ್. ಬಾಬಿ ಸಂಯೋಜನೆಯಲ್ಲಿ ಗೀತೆಗಳು ಮೂಡಿ ಬಂದಿವೆ.

  ಹಾಡುಗಳ ಜೊತೆ ಚಿತ್ರದ ಪ್ರಚಾರಕ್ಕಾಗಿ ವಿಶೇಷ ತಂಡ

  ಹಾಡುಗಳ ಜೊತೆ ಚಿತ್ರದ ಪ್ರಚಾರಕ್ಕಾಗಿ ವಿಶೇಷ ತಂಡ

  ಹಾಡುಗಳ ಜೊತೆ ಚಿತ್ರದ ಪ್ರಚಾರಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗುವುದು, ಸಾಮಾಜಿಕ ಜಾಲ ತಾಣಗಳಲ್ಲಿ ಉತ್ತಮ ಗುಣಮಟ್ಟದ ಹಾಡು, ಸಂಗೀತ ಪ್ರಚಾರ ಮಾಡಲು ನಾವು ಸಿದ್ದರಿದ್ದೇವೆ ಎಂದರು. ಸಿ ಮ್ಯೂಸಿಕ್ ಕಂಪನಿಯ ಫೇಸ್ ಬುಕ್ ಪುಟ ಇಲ್ಲಿದೆ

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಖ್ಯಾತ ಸಂಗೀತ ನಿರ್ದೇಶಕರಾದ ರಾಜೇಶ್ ರಾಮನಾಥ್

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಖ್ಯಾತ ಹಿನ್ನೆಲೆ ಗಾಯಕರಾದ ಅನುರಾಧ ಭಟ್

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಖ್ಯಾತ ಹಿನ್ನೆಲೆ ಗಾಯಕರಾದ ಶಮಿತಾ ಮಲ್ನಾಡ್

   ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಖ್ಯಾತ ಹಿನ್ನೆಲೆ ಗಾಯಕರಾದ ವಾಣಿ ಹರಿಕೃಷ್ಣ

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಖ್ಯಾತ ಸಂಗೀತ ನಿರ್ದೇಶಕರಾದ ಅಭಿಮನ್ ರಾಯ್

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಸನ್ಮಾನಿತ ಸಾಹಿತಿ, ಸಂಗೀತಗಾರ, ಗಾಯಕ/ಕಿಯರು

  ಖ್ಯಾತ ಸಂಗೀತ ನಿರ್ದೇಶಕರಾದ

  English summary
  Chittara Cine and Lifestyle Kannada Monthly magazine team has launched 'C' Music- a dedicated company for Kannada Songs.'C' Music launching ceremony was special event as the team felicitated noted Musician V Manohar, Nagendra Prasad, Ajaneesh Lokanath and others.
  Tuesday, September 22, 2015, 14:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X