Independence Day: ದೇಶ ಭಕ್ತಿ ಸಾರುವ ಈ 5 ಕನ್ನಡ ಹಾಡುಗಳನ್ನು ನೀವು ಕೇಳಲೇಬೇಕು

ಆಗಸ್ಟ್ 15ರ ಮಂಗಳವಾರದಂದು 76ನೇ ಸ್ವಾತಂತ್ರ್ ದಿನಾಚರಣೆಯನ್ನು ಆಚರಿಸಲು ಇಡೀ ದೇಶ ಸಜ್ಜಾಗುತ್ತಿದೆ. ಈ ಮಹಾನ್ ದಿನಾಚರಣೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಕಾರ್ಯಕ್ರಮಗಳಲ್ಲಿ ದೇಶ ಪ್ರೇಮ ಸಾರುವ ಹಾಡುಗಳನ್ನು ಬಳಸಿ ನೃತ್ಯ ಮಾಡಿ ಸಂಭ್ರಮಿಸಲು ದೇಶ ಪ್ರೇಮಿಗಳು ಕಾಯುತ್ತಿದ್ದಾರೆ. ಕನ್ನಡ ಚಿತ್ರರಂಗ ದೇಶ ಭಕ್ತಿ ಸಾರುವ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ ದೇಶ ಪ್ರೇಮ ಮೆರೆಯುವ ಹಾಡುಗಳನ್ನು ರಚಿಸಿವೆ.

ಈ ಹಾಡುಗಳು ಪ್ರತಿ ಬಾರಿ ಸ್ವಾತಂತ್ರ ದಿನಾಚರಣೆ ಬಂದಾಗ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮೊಳಗಲಿವೆ. ಹೀಗೆ ಅತಿಹೆಚ್ಚು ಜನಪ್ರಿಯತೆ ಗಳಿಸಿರುವ ದೇಶ ಪ್ರೇಮ ಸಾರುವ ಕನ್ನಡದ 5 ಹಾಡುಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

Independence Day: 5 Kannada patriotic songs you should listen

ಭಾರತಾಂಬೆ ನಿನ್ನ ಜನ್ಮದಿನ

ಸ್ವಾತಂತ್ರ ದಿನಾಚರಣೆ ಎಂದ ಕೂಡಲೇ ಕನ್ನಡ ಸಿನಿ ಪ್ರೇಮಿಗಳ ನೆನಪಿಗೆ ಬರುವ ಮೊದಲ ಸಿನಿಮಾ ವೀರಪ್ಪ ನಾಯಕ ಹಾಗೂ ಮೊದಲು ನೆನಪಿಗೆ ಬರುವ ಹಾಡು ಭಾರತಾಂಬೆ ನಿನ್ನ ಜನ್ಮ ದಿನ. ಹೌದು, ವಿಷ್ಣುವರ್ಧನ್ ದೇಶಪ್ರೇಮಿ ವೀರಪ್ಪ ನಾಯಕನ ಪಾತ್ರದಲ್ಲಿ ಜೀವಿಸಿದ್ದಾರೆ. ಈ ಹಾಡಿಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ದನಿ ನೀಡಿದ್ದು, ರಾಜೇಶ್ ರಾಮನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಜಗ್ಗದು ಜಗ್ಗದು ಯಾರಿಗೂ ಜಗ್ಗದು

ಶಿವರಾಜ್‌ಕುಮಾರ್ ನಟನೆಯ ದೇಶಪ್ರೇಮ ಕಥೆಯನ್ನು ಹೊಂದಿರುವ ಸಿನಿಮಾವಾದ ಹಗಲುವೇಷದ 'ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ' ಹಾಡು ಸ್ವಾತಂತ್ರ ದಿನಾಚರಣೆ ಬಂದಾಗಲೆಲ್ಲಾ ಕನ್ನಡ ಸಿನಿ ರಸಿಕರ ನೆನಪಿಗೆ ಬರುವ ಹಾಡು. ಈ ಹಾಡೂ ಸಹ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಸದ್ದು ಮಾಡುತ್ತಿರುತ್ತದೆ.

ಹಿಂದೂಸ್ಥಾನ ಗೊತ್ತೇನೋ?

ವಿಜಯಶಾಂತಿ, ಅಂಬರೀಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ವಂದೇ ಮಾತರಂ ಸಿನಿಮಾದ 'ಹಿಂದೂಸ್ತಾನ ಗೊತ್ತೇನೋ.....ಧರ್ಮ ಕಾಯೋ ಹಿಮಾಲಯ....' ಹಾಡು ಸಹ ಈ ಪಟ್ಟಿಯಲ್ಲಿದೆ.

ನಾನು ಕನ್ನಡದ ಕಂದ

ಶಿವರಾಜ್‌ಕುಮಾರ್ ನಟನೆಯ ಮತ್ತೊಂದು ದೇಶ ಪ್ರೇಮ ಚಿತ್ರ 'ಎಕೆ 47'ನ 'ನಾನು ಕನ್ನಡದ ಕಂದ' ಹಾಡು ಕನ್ನಡ ಚಿತ್ರರಂಗದಿಂದ ಬಂದ ಮತ್ತೊಂದು ಅದ್ಭುತ ದೇಶ ಭಕ್ತಿ ಸಾರುವ ಹಾಡಾಗಿದೆ.

ಜೈ ಹಿಂದ್

ಸಿಪಿ ಯೋಗೇಶ್ವರ್ ನಟನೆಯ ಸೈನಿಕ ಸಿನಿಮಾದ 'ಜೈ ಹಿಂದ್....' ಹಾಡು ನೆನಪಾಗುತ್ತೆ. ಈ ಹಾಡು ಕೇಳುವುದರ ಜತೆ ಹಾಡಿನ ದೃಶ್ಯಗಳನ್ನು ನೋಡಿದ್ರೆ ಹಾಡೂ ಇನ್ನೂ ಹೆಚ್ಚು ರೋಮಾಂಚನವನ್ನುಂಟುಮಾಡುತ್ತೆ.

More from Filmibeat

English summary
Independence Day: 5 Kannada patriotic songs you should listen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X