ನೇಪಾಳ ಮೂಲದ ವಿಶೇಷ ಚೇತನ ಪ್ರತಿಭೆಗೆ ಪ್ರಶಾಂತ್ ನೀಲ್ ಸುವರ್ಣಾವಕಾಶ

ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಂಗ್ ರೆಬಲ್ ಸ್ಟಾರ್ ಆರ್ಭಟ ನೋಡೋಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿದ್ದು ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಟ್ರೈಲರ್ ರಿಲೀಸ್ ಬಳಿಕ 'ಸಲಾರ್' ಚಿತ್ರತಂಡ ಸೈಲೆಂಟ್ ಆಗಿದೆ. ಅಭಿಮಾನಿಗಳು ಹೊಸ ಅಪ್‌ಡೇಟ್ ಕೊಡಿ ಎಂದು ಕೇಳಿ ಕೇಳಿ ಸುಸ್ತಾಗಿದ್ದಾರೆ. ಕೊನೆ ಗಳಿಗೆಯಲ್ಲಿ ಪ್ರಮೋಷನ್ ಹೆಚ್ಚು ಮಾಡಿ ಹೈಲ್ ಕ್ರಿಯೇಟ್ ಮಾಡುವ ಲೆಕ್ಕಾಚಾರದಲ್ಲಿ ಚಿತ್ರತಂಡ ಇದೆ. ಈವರೆಗೆ ಚಿತ್ರದ ಯಾವುದೇ ಹಾಡು ರಿಲೀಸ್ ಆಗಿಲ್ಲ. ನಿಜಕ್ಕೂ 'ಸಲಾರ್' ಚಿತ್ರದಲ್ಲಿ ಹಾಡುಗಳು ಇದ್ಯಾ? ಇಲ್ವಾ? ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಸಿನಿಮಾ ಬಿಡುಗಡೆಗೆ 11 ದಿನ ಬಾಕಿ ಇದ್ದರೂ ಹಾಡುಗಳ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.

Indian Idol 14: This contestant selected to sing a song for Prashnath neels Salaar

ಸಾಮಾನ್ಯವಾಗಿ ಲಿರಿಕಲ್ ವಿಡಿಯೋ ಸಾಂಗ್‌ಗಳನ್ನು ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡಲಾಗುತ್ತದೆ. ಆದರೆ 'ಸಲಾರ್' ಚಿತ್ರತಂಡ ಮಾತ್ರ ಈ ವಿಚಾರದಲ್ಲಿ ಮೌನವಾಗಿದೆ. ಕೆಲವರ ಪ್ರಕಾರ ಚಿತ್ರದಲ್ಲಿ ಒಂದೇ ಒಂದು ಹಾಡು ಮಾತ್ರ ಇದೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆಗೆ ಒಂದು ವಾರ ಬಾಕಿ ಇರುವಾಗ ಅದು ಹೊರ ಬರುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಇದೆಲ್ಲದರ ನಡುವೆ ನೇಪಾಳ ಮೂಲಕ ವಿಶೇಷ ಚೇತನ ಗಾಯಕಿಗೆ ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿದೆ.

ಹಿಂದಿ ಕಿರುತೆರೆಯಲ್ಲಿ 'ಇಂಡಿಯನ್ ಐಡೆಲ್ ಸೀಸನ್ 14' ರಿಯಾಲಿಟಿ ಶೋ ನಡೀತಿದೆ. ಶೋನಲ್ಲಿ ನೇಪಾಳ ಮೂಲದ ವಿಶೇಷ ಚೇತನ ಗಾಯಕಿ ಮೇನುಕಾ ತನ್ನ ಗಾಯನದಿಂದ ಸಂಚಲನ ಸೃಷ್ಟಿಸಿದ್ದಾರೆ. ಹುಟ್ಟಿನಿಂದಲೂ ದೃಷ್ಟಿ ಇಲ್ಲದ ಮೇನುಕಾ ತನ್ನ ಅದ್ಭುತ ಪ್ರತಿಭೆಯಿಂದ ಇಂಡಿಯನ್ ಐಡೆಲ್ ವೇದಿಕೆ ಏರಿದ್ದಾರೆ.

ಮೇನುಕಾ ಗಾಯನದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಈ ಶೋ ತೀರ್ಪುಗಾರರಾಗಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಅತಿಥಿಗಳು ಕೂಡ ಮೆನುಕಾ ಕಂಠವನ್ನು ಹಾಡಿ ಹೊಗಳುತ್ತಿದ್ದಾರೆ. ಆಕೆಯ ಪ್ರತಿಭೆ ನಿರ್ದೇಶಕ ಪ್ರಶಾಂತ್ ನೀಲ್ ಕಣ್ಣಿಗೆ ಬಿದ್ದಿದೆ. ಹಾಗಾಗಿ 'ಸಲಾರ್' ಚಿತ್ರದಲ್ಲಿ ಆಕೆಗೆ ಹಾಡುವ ಅವಕಾಶ ನೀಡಿದ್ದಾರೆ. ಈಗಾಗಲೇ ರೆಕಾರ್ಡಿಂಗ್ ಕೂಡ ಮುಗಿದಿದೆ. ಇಂತಾದೊಂದು ಸುವರ್ಣಾವಕಾಶ ನೀಡಿದ ಪ್ರಶಾಂತ್‌ ನೀಲ್‌ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Indian Idol 14: This contestant selected to sing a song for Prashnath neels Salaar

'ಇಂಡಿಯನ್ ಐಡೆಲ್ ಸೀಸನ್ 14' ಕಳೆದ ವಾರದ ಎಪಿಸೋಡ್‌ನಲ್ಲಿ ಈ ವಿಚಾರವನ್ನು ವೇದಿಕೆಯಲ್ಲಿ ಘೋಷಣೆ ಮಾಡಲಾಗಿದೆ. ಈ ವಿಚಾರ ಕೇಳಿ ಶ್ರೇಯಾ ಘೋಷಾಲ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂತಹ ದೊಡ್ಡ ಸಿನಿಮಾದಲ್ಲಿ ರವಿ ಬಸ್ರೂರು ಸಂಗೀತದಲ್ಲಿ ಹಾಡುವ ಅವಕಾಶ ಸಿಕ್ಕಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೇನುಕಾ ಪ್ರತಿಭೆಯನ್ನು ಮತ್ತೊಮ್ಮೆ ಕೊಂಡಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹುಟ್ಟಿನಿಂದ ಕಣ್ಣು ಕಾಣದಿದ್ದರೂ ಮೇನುಕಾ ಸಂಗೀತವನ್ನು ಕೇಳುವ ಮೂಲಕ ಕಲಿಯುವ ಅವಳ ಪ್ರತಿಭೆಯ ಕಾರಣ ನೇಪಾಳದಿಂದ ಭಾರತಕ್ಕೆ ಬರಲು ದಾರಿ ಮಾಡಿಕೊಟ್ಟಿತು. 2018 ರಲ್ಲಿ ನೇಪಾಳ ಟಿವಿ ರಿಯಾಲಿಟಿ ಶೋ ನೇಪಾಲ್ ಐಡಲ್‌ನಲ್ಲಿ ಪ್ರದರ್ಶನ ನೀಡಿದಾಗ ಆಕೆಯ ಸಹಜ ಪ್ರತಿಭೆ ಗಮನ ಸೆಳೆಯಿತು. ಮೋಡಿಮಾಡುವ ತನ್ನ ಗಾಯನದಿಂದ ಆಕೆ ಪ್ರಶಸ್ತಿ ಪಡೆದಿದ್ದಳು. ಈ ಮನ್ನಣೆ ಆಕೆ ಗಡಿಗಳನ್ನು ದಾಟಿ, ಇಂಡಿಯನ್ ಐಡಲ್‌ಗೆ ಪ್ರವೇಶಿಸುವ ಆತ್ಮವಿಶ್ವಾಸವನ್ನು ನೀಡಿತ್ತು. ಜನಪ್ರಿಯ ಟಿವಿ ಶೋ 'ಸರೆಗಮಪ'ದಲ್ಲೂ ತನ್ನ ಗಾಯನದಿಂದ ಗಮನ ಸೆಳೆದಿದ್ದ ಮೇನುಕಾ ಬಳಿಕ ಇಂಡಿಯನ್ ಐಡಲ್ ಸೀಸನ್ 14ರ ವೇದಿಕೆ ಏರುವಂತಾಗಿದೆ.

More from Filmibeat

English summary
Prashanth neel Offers Playback Chance To 'Indian Idol 14' Contestant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X