twitter
    For Quick Alerts
    ALLOW NOTIFICATIONS  
    For Daily Alerts

    ಮತಾಂತರ ವಿವಾದ : ಯುವನ್ ಟ್ವಿಟ್ಟರ್ ನಿಂದ ಹೊರಕ್ಕೆ

    By ಜೇಮ್ಸ್ ಮಾರ್ಟಿನ್
    |

    ಹಿಂದೂ ಧರ್ಮ ತೊರೆದು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಇಚ್ಛಿಸಿರುವ ಖ್ಯಾತ ಸಂಗೀತಗಾರ ಇಳಯರಾಜ ಅವರ ಪುತ್ರ ಯುವನ್ ಶಂಕರ್ ರಾಜ ಅವರು ಅಭಿಮಾನಿಗಳ ಕೋಪಕ್ಕೆ ತುತ್ತಾಗಿದ್ದಾರೆ. ಅಭಿಮಾನಿಗಳ ಚುಚ್ಚು ನುಡಿಗೆ, ಖಾರವಾದ ಪ್ರತಿಕ್ರಿಯೆಗೆ ಬೇಸತ್ತು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಖಾತೆಯನ್ನು ಶಂಕರ್ ರಾಜ ನಿಷ್ಕ್ರಿಯಗೊಳಿಸಿದ್ದಾರೆ.

    ಕಳೆದ ಭಾನುವಾರ(ಫೆ.9) ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಶಂಕರ್ ರಾಜ ಘೋಷಿಸಿದ್ದರು. ಅವರ ನಿರ್ಣಯಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಯುವನ್ I follow Islam and I'm proud about it. Alhamdhulillah ಎಂದು ಟ್ವೀಟ್ ಮಾಡಿ ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸಿದ್ದರು.

    ಯುವನ್ ಶಂಕರ್ ರಾಜ ಇನ್ನೂ ಮತಾಂತರಗೊಂಡ ಬಗ್ಗೆ ಮಾಹಿತಿ ಇಲ್ಲ. ಮತಾಂತರಗೊಂಡ ನಂತರ ಹೆಸರು ಬದಲಾಯಿಸುವ ಬಗ್ಗೆ ಕೂಡಾ ಸ್ಪಷ್ಟನೆ ಸಿಕ್ಕಿಲ್ಲ. ಆದರೆ, ಒಂದು ವರ್ಗದ ಅಭಿಮಾನಿಗಳು ಮಾಡಿರುವ ಟೀಕೆಗೆ ಬೇಸತ್ತು ಟ್ವಿಟ್ಟರ್ ನಿಂದ ಹೊರ ಹೋಗುವುದಾಗಿ ಹೇಳಿದ್ದಾರೆ.

    ಮತಾಂತರ ವಿವಾದ : ಯುವನ್ ಟ್ವಿಟ್ಟರ್ ನಿಂದ ಹೊರಕ್ಕೆ

    ಮತಾಂತರ ವಿವಾದ : ಯುವನ್ ಟ್ವಿಟ್ಟರ್ ನಿಂದ ಹೊರಕ್ಕೆ

    ಮತಾಂತರ ವಿವಾದದಿಂದ ಬೇಸತ್ತು ಯುವ ಸಂಗೀತಗಾರ ಯುವನ್ ಶಂಕರ್ ರಾಜ ಅವರು ಟ್ವಿಟ್ಟರ್ ಖಾತೆ @Raja_Yuvan ನಿಷ್ಕ್ರಿಯಗೊಳಿಸಿ ನಿರ್ಗಮಿಸಿದ್ದಾರೆ.

    ಬಾಲಿವುಡ್ ಗೆ ಎಂಟ್ರಿ ಕೊಡಲು ಈ ಹಾದಿಯೇ?

    ಬಾಲಿವುಡ್ ಗೆ ಎಂಟ್ರಿ ಕೊಡಲು ಈ ಹಾದಿಯೇ ಹಿಡಿದಿದ್ದಾನೆಯೇ? ಛೇ

    ಪ್ರತಿ ದಿನ ನಮಾಜ್ ಮಾಡುವ ಯುವನ್

    ಪ್ರತಿ ದಿನ ನಮಾಜ್ ಮಾಡುವ ಯುವನ್

    ಕಳೆದ ಒಂದು ವರ್ಷದಿಂದ ಕಟ್ಟಾ ಇಸ್ಲಾಂ ಧರ್ಮ ಪಾಲಕ ನಂತೆ ದಿನಕ್ಕೆ ಐದು ಬಾರಿ ನಮಾಜು ಮಾಡಿ ಅಲ್ಲಾಹ್ ನನ್ನು ಪ್ರಾರ್ಥಿಸುತ್ತಿದ್ದ ಯುವನ್ ಶಂಕರ್ ರಾಜ

    ಕಟ್ಟಾ ಸಂಪ್ರದಾಯವಾದಿಯಾಗಲು ಸಿದ್ಧತೆ

    ಕಟ್ಟಾ ಸಂಪ್ರದಾಯವಾದಿಯಾಗಲು ಸಿದ್ಧತೆ

    ಇಸ್ಲಾಂ ಧರ್ಮವನ್ನು ಪಾಲಿಸುತ್ತಾ ಬಂದಿರುವ ಯುವನ್ ಅವರು ಮತಾಂತರಗೊಳ್ಳುವುದು ಒಂದು ಕೊನೆ ಪ್ರಕ್ರಿಯೆಯಷ್ಟೇ ಈಗಾಗಲೇ ಮನಸ್ಸು, ಆಚರಣೆಯಲ್ಲಿ ಇಸ್ಲಾಂ ತನವನ್ನು ಮೈಗೂಡಿಸಿಕೊಂಡಿದ್ದಾರೆ ಎಂಬ ಸುದ್ದಿಯಿದೆ

    ಎ.ಆರ್ ರೆಹಮಾನ್ ದಾರಿಯಲ್ಲೇ ಸಾಗಿರುವ ಯುವನ್

    ಎ.ಆರ್ ರೆಹಮಾನ್ ದಾರಿಯಲ್ಲೇ ಸಾಗಿರುವ ಯುವನ್ ಅವರಿಗೆ ಶುಭವಾಗಲಿ

    ಕುಟುಂಬದಲ್ಲಿ ಯಾವುದೇ ವಿರೋಧವಿಲ್ಲ

    ಕುಟುಂಬದಲ್ಲಿ ಯಾವುದೇ ವಿರೋಧವಿಲ್ಲ

    "My family supports my decision and there is no misunderstanding between me and my dad."

    English summary
    Yuvan Shankar Raja has quit Twitter after being abused by his followers. The music director's post on his decision to follow Islam has not gone well with a section of his fans. Their negative feedback has made the Illayaraaja's son to bid goodbye to the social networking site.
    Wednesday, February 12, 2014, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X