»   » ಹಳೆ ಹಾಡು ಹೊಸ ಡ್ಯಾನ್ಸ್: ಧೂಳೆಬ್ಬಿಸುತ್ತಿದೆ ಜಾಕ್ವೆಲಿನ್ ಕುಣಿತ

ಹಳೆ ಹಾಡು ಹೊಸ ಡ್ಯಾನ್ಸ್: ಧೂಳೆಬ್ಬಿಸುತ್ತಿದೆ ಜಾಕ್ವೆಲಿನ್ ಕುಣಿತ

Posted By:
Subscribe to Filmibeat Kannada

ಏಕ್ ದೋ ತೀನ್,,,ಚಾರ್ ಪಾಂಚ್ ಚೇ ಸಾತ್ ಆಠ್....ಎಂದು ಆರಂಭವಾಗುವ ಹಿಂದಿ ಹಾಡನ್ನ ಕೇಳಿರಬಹುದು. ಈ ಹಾಡಿನಲ್ಲಿ ಮಾಧುರಿ ದೀಕ್ಷಿತ್ ಮಸ್ತ್ ಆಗಿ ಸೊಂಟ ಬಳುಕಿಸಿದ್ದರು. ಈ ಹಾಡು ಅಂದಿನ ಸಮಯದಲ್ಲಿ ಸೂಪರ್ ಹಿಟ್ ಆಗಿತ್ತು.

ಇದೀಗ, ಮತ್ತೆ ಇದೇ ಹಾಡನ್ನ ಬಳಸಿ ಹೊಸ ಸಾಂಗ್ ಮಾಡಲಾಗಿದೆ. ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಅಭಿನಯದ 'ಭಾಗಿ-2' ಚಿತ್ರದಲ್ಲಿ ಈ ಎವರ್ ಗ್ರೀನ್ ಹಾಡನ್ನ ಬಳಸಲಾಗಿದೆ.

ಈ ಸ್ಪೆಷಲ್ ಹಾಡಿನಲ್ಲಿ ಹಾಟ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ್ದು, ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಸದ್ಯ, ಹಾಡಿನ ಟೀಸರ್ ಮಾತ್ರ ರಿಲೀಸ್ ಆಗಿದ್ದು, ಕೇವಲ ಒಂದು ದಿನಕ್ಕೆ 22 ಲಕ್ಷಕ್ಕೂ ಅಧಿಕ ಜನ ಹಾಡನ್ನ ನೋಡಿ ಎಂಜಾಯ್ ಮಾಡಿದ್ದಾರೆ.

Jacqueline Fernandez featurs Ek Do Teen song released

'ಭಾಗಿ' ಚಿತ್ರವನ್ನ ನಿರ್ದೇಶನ ಮಾಡಿದ್ದ ಸಜೀದ್ 'ಭಾಗಿ-2' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದು, ಮಾರ್ಚ್ 30 ರಂದು ತೆರೆಕಾಣುತ್ತಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಭಾಗಿ ಸಿನಿಮಾ ಕುತೂಹಲ ಕೆರಳಿಸಿದೆ,

ಇನ್ನು ಹಳೆ ಹಾಡು, 1994 ರಲ್ಲಿ ತೆರೆಕಂಡಿದ್ದ 'ತೆಜಾಬ್' ಚಿತ್ರದ ಹಾಡು. ಅನಿಲ್ ಕಪೂರ್, ಅನುಪಮ್ ಖೇರ್, ಮಾಧುರಿ ದೀಕ್ಷಿತ್ ಸೇರಿದಂತೆ ಹಲವರು ಈ ಹಾಡಿನಲ್ಲಿ ಅಭಿನಯಿಸಿದ್ದರು.

English summary
The most awaited song from Baaghi 2 'Ek Do Teen' featuring Jacqueline Fernandez is out and the actress fails to kill it as the song delivers nothing, let alone some good dance moves.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X