Don't Miss!
- News
ಮಹಾರಾಷ್ಟ್ರದಲ್ಲಿ ಭಾರೀ ಮಳೆ: 17 ಎನ್ಡಿಆರ್ಎಫ್ ತಂಡ ನಿಯೋಜನೆ
- Lifestyle
ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಡೆಡ್ಲಿ ಕಾಂಬಿನೇಷನ್ ಆಹಾರಗಳಿವು!
- Automobiles
ಇವಿ ಕಾರು ಮಾರಾಟ: ಜೂನ್ ಅವಧಿಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ
- Sports
ಲಂಡನ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ; ಎಂಎಸ್ಡಿ ಭಾರತದ ಐಕಾನ್ ಎಂದ ವಿಂಬಲ್ಡನ್
- Education
NIMHANS Recruitment 2022 : ರಿಸರ್ಚ್ ಅಸೋಸಿಯೇಟ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಇಂದು ಒನ್ಪ್ಲಸ್ ಟಿವಿ 50 Y1S ಪ್ರೊ ಫಸ್ಟ್ ಸೇಲ್; ಇದೆ ಭರ್ಜರಿ ಆಫರ್!
- Finance
ಜುಲೈ 07: ನಿಮ್ಮ ನಗರಗಳ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
'ತೋತಾಪುರಿ' ಚಿತ್ರದ 'ಬಾಗ್ಲು ತೆಗಿ ಮೇರಿ ಜಾನ್' ಸಾಂಗ್ 100 ಮಿಲಿಯನ್ ವೀವ್ಸ್ ಸಿಕ್ಕಿದ್ದು ಹೆಂಗೆ?
ನವರಸ ನಾಯಕ ಜಗ್ಗೇಶ್ ಹಾಗೂ ಅಧಿತಿ ಪ್ರಭುದೇವ ಅಭಿನಯದ 'ತೋತಾಪುರಿ' ಸಿನಿಮಾ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಒಂದು ಹಾಡು ಹಾಸ್ಯ ಪ್ರಿಯರಿಗೆ ಕಾಮಿಡಿ ಕಿಕ್ ಕೊಡುತ್ತಿದೆ. 'ತೋತಾಪುರಿ' ತಂಡ ಇದೂವರೆಗೂ ಒಂದೇ ಒಂದು ಹಾಡನ್ನು ರಿಲೀಸ್ ಮಾಡಿದೆ. ಅದುವೇ 'ಬಾಗ್ಲು ತೆಗಿ ಮೇರಿ ಜಾನ್'. ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್ ಹುಟ್ಟಾಕಿದೆ. ದೇಶ ವಿದೇಶದಲ್ಲಿಯೂ ಈ ಹಾಡಿಗೆ ಜನರು ತಲೆದೂಗಿದ್ದಾರೆ.
'ತೋತಾಪುರಿ' ಚಿತ್ರತಂಡ ಕೆಲವು ದಿನಗಳ ಹಿಂದಷ್ಟೇ 'ಬಾಗ್ಲು ತೆಗಿ ಮೇರಿ ಜಾನ್' ಹಾಡನ್ನು ಬಿಡುಗಡೆ ಮಾಡಿದ್ದರು. ಈ ಹಾಡಿಗೆ ಕರ್ನಾಕಟದಲ್ಲಿ ಅಷ್ಟೇ ಅಲ್ಲ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೂ ಇಷ್ಟ ಆಗಿದೆ. ಈ ಕಾರಣಕ್ಕಾಗಿಯೇ ದುಬೈ, ಅಮೆರಿಕ ಹಾಗೂ ಕೆನಾಡದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ನವರಸ ನಾಯಕ ಜಗ್ಗೇಶ್ ಸಂವಾದ ನಡೆಸಿದ್ದರು. ವಿಶೇಷ ಅಂದರೆ, 'ತೋತಾಪುರಿ' ಚಿತ್ರದ 'ಬಾಗ್ಲು ತೆಗಿ ಮೇರಿ ಜಾನ್' ಹಾಡಿಗೆ 100 ಮಿಲಿಯನ್ ವೀವ್ಸ್ ಸಿಕ್ಕಿದೆಯಂತೆ. ಈ ವೀವ್ಸ್ ಲೆಕ್ಕಾಚಾರವೇನು? ಅನ್ನುವುದು ತಿಳಿಯಲು ಮುಂದೆ ಓದಿ.
'ಬಾಗ್ಲು
ತೆಗಿ
ಮೇರಿ
ಜಾನ್'
ಎಂದು
ಅದಿತಿಗೆ
ಬೀಗದ
ಕೈ
ತೋರಿಸಿದ
ನವರಸ
ನಾಯಕ
ಜಗ್ಗೇಶ್!

100 ಮಿಲಿಯನ್ ವೀವ್ಸ್ ಪಡೆದ 'ತೋತಾಪುರಿ' ಸಾಂಗ್
'ಬಾಗ್ಲು ತೆಗಿ ಮೇರಿ ಜಾನ್' ಈ ಹಾಡನ್ನು 'ತೋತಾಪುರಿ' ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಬರೆದಿದ್ದಾರೆ. ಈ ಹಾಸ್ಯ ಮಿಶ್ರಿತ ಸಾಹಿತ್ಯಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಇವರೊಂದಿಗೆ ಜಗ್ಗೇಶ್ ಮ್ಯಾನರಿಸಂ, ಅದಿತಿ ಪ್ರಭುದೇವ ಚಮಕ್ ಸೇರಿಕೊಂಡು ಸಂಗೀತ ಪ್ರಿಯರಿಗೆ ಮತ್ತಷ್ಟು ಮಜವಾಗಿದೆ ಅಂತ ಅನಿಸಿತ್ತು. ಕನ್ನಡ, ಹಿಂದಿ ಹಾಗೂ ಉರ್ದು ಮಿಶ್ರಿತ ಸಾಂಗ್ ಕೇಳಿದಾಗಲೆಲ್ಲಾ ನಗು ತರಿತಿದೆ. 'ಬಾಗ್ಲು ತೆಗಿ ಮೇರಿ ಜಾನ್, ಸ್ವಲ್ಪ ತಡಿ ಮೇರಿ ಜಾನ್.. ಚಿಲ್ಕ ಟೈಟು ಪ್ಯಾರಿ ಜಾನ್..,' 'ಕ್ಯೂಂಕಿ ಲೈಫು ಗೋಲಿ ಸೋಡಾ, ಗ್ಯಾಸು ಹೋದರೆ ಸಾದಾ ಬೀಡಾ..' ಇಂತಹ ಸಾಲುಗಳು ಕಚಗುಳಿ ಇಟ್ಟಿದ್ದವು. ಇದೇ ಹಾಡಿಗೆ 100 ಮಿಲಿಯನ್ ವೀವ್ಸ್ ಸಿಕ್ಕಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಜಗ್ಗೇಶ್
ನಟನೆಯ
ಭಾರತದ
ಮೊದಲ
ಹಾಸ್ಯ
ಪ್ರಧಾನ
ಪ್ಯಾನ್
ಇಂಡಿಯಾ
ಚಿತ್ರ
'ತೋತಾಪುರಿ'
ಟೀಸರ್
ರಿಲೀಸ್

100 ಮಿಲಿಯನ್ ವೀವ್ಸ್ ಪಡೆದಿದ್ದೇಗೆ?
'ಬಾಗ್ಲು ತೆಗಿ ಮೇರಿ ಜಾನ್' ಸಾಂಗ್ ಯೂಟ್ಯೂನ್ಲ್ಲಿ 14 ಮಿಲಿಯನ್ಗೂ ಹೆಚ್ಚು ವೀವ್ಸ್ ಸಿಕ್ಕಿದೆ. ಯೂಟ್ಯೂಬ್ ಅಷ್ಟೇ ಅಲ್ಲದೆ ಈ ಹಾಡು ಬೇರೆ ಬೇರೆ ಸೋಶಿಯಲ್ ಪ್ಲ್ಯಾಟ್ ಫಾರ್ಮ್ನಲ್ಲೂ ಹಿಟ್ ಆಗಿದೆ. ಸುಮಾರು 86 ಮಿಲಿಯನ್ಸ್ ಸೋಶಿಯಲ್ ಮೀಡಿಯಾದಿಂದಲೇ ಸಿಕ್ಕಿದೆ ಎನ್ನುತ್ತಿದೆ ಈ ಟೀಮ್. ಯೂಟ್ಯೂಬ್, ಸೋಶಿಯಲ್ ಮೀಡಿಯಾ ರೀಲ್ಸ್ ಎಲ್ಲಾ ಸೇರಿ 86 ಮಿಲಿಯನ್ಗೂ ಅಧಿಕ ಹಿಟ್ಸ್ ಸಿಕ್ಕಿದೆ. ಇತ್ತೀಚೆಗೆ ಬಂದ ಹಾಡುಗಳ ಪಟ್ಟಿಯಲ್ಲಿ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆದಿದ್ದು, ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸುತ್ತಲೇ ಇದೆ ಎನ್ನುತ್ತಿದೆ 'ತೋತಾಪುರಿ' ತಂಡ.

ಜಗ್ಗೇಶ್ -ಅದಿತಿ ಸೂಪರ್ ಜೋಡಿ
'ತೋತಾಪುರಿ' ಮೊದಲ ಹಾಡಿನಲ್ಲಿ ನವರಸ ನಾಯಕ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಜೋಡಿ ಜನರಿಗೆ ಇಷ್ಟ ಆಗಿದೆ. ಪ್ರತಿ ಕ್ಷಣವೂ ಒಂದೊಂದು ಮ್ಯಾನರಿಸಂ ಹೊರ ಹಾಕುವ ಜಗ್ಗೇಶ್ ಸಿನಿಪ್ರಿಯರಲ್ಲಿ ನಗು ಮೂಡಿಸುವಲ್ಲಿ ಗೆದ್ದಿದ್ದಾರೆ. ಇನ್ನುಅದಿತಿ ಪ್ರಭುದೇವ ಮುಸ್ಲಿಂ ಯುವತಿ ಅವತಾರದಲ್ಲಿ ಈ ಹಾಡಿನಲ್ಲಿ ಮಿಂಚಿದ್ದಾರೆ. ಇನ್ನು ವೀಣಾ ಸುಂದರ್ ಹಾಗೂ ಉಳಿದ ನಟಿಯರ ಕಾಸ್ಟ್ಯೂಮ್, ಗಮನ ಸೆಳೆಯುತ್ತೆ.
'ತೋತಾಪುರಿ'
ತಿನ್ನಿಸಲು
ರೆಡಿಯಾದ್ರು
ಜಗ್ಗೇಶ್,
ಅದಿತಿ
ಪ್ರಭುದೇವ!

ಪ್ಯಾನ್ ಇಂಡಿಯಾ ಕಾಮಿಡಿ ಸಿನಿಮಾ
ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಕಾಮಿಡಿ ಸಿನಿಮಾವಿದು. ಇನ್ನೊಂದು ಕಡೆ ಏಕಕಾಲದಲ್ಲಿ 'ತೋತಾಪುರಿ' ಸಿನಿಮಾ ಎರಡು ಭಾಗಗಳಾಗಿ ನಿರ್ಮಾಣಗೊಂಡಿದೆ. ಕೆ.ಎ.ಸುರೇಶ್ ನಿರ್ಮಿಸಿರುವ 'ತೋತಾಪುರಿ' ಚಾಪ್ಟರ್ 1 ಅತೀ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಬಳಿಕ ಮತ್ತೊಂದು ಭಾಗದ ಚಿತ್ರೀಕರಣವನ್ನು ಕೆಲವು ತಿಂಗಳು ಗ್ಯಾಪ್ ಕೊಟ್ಟು ರಿಲೀಸ್ ಮಾಡಲಿದೆ. ಈ ಸಿನಿಮಾದಲ್ಲಿ 'ಡಾಲಿ' ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ದಿಗ್ಗಜರ ದಂಡೇ ಇದೆ.