ಇಂಥ ಯಶಸ್ಸು ಸಿಕ್ಕಿರಲಿಲ್ಲ, ಇನ್ನೂ 30 ವರ್ಷ ಸಿನಿಮಾ ಮಾಡ್ತೀನಿ: ಜಗ್ಗೇಶ್

'ತೋತಾಪುರಿ' ಸಿನಿಮಾ ತಂಡವು ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ಸಿನಿಮಾದ ಹಾಡು ಹಿಟ್ ಆದ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಜೊತೆಗೆ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ತಮ್ಮ ಸಿನಿಮಾವನ್ನು ನೋಡುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ನಟ ಜಗ್ಗೇಶ್, ''ನನ್ನ ವೃತ್ತಿ ಜೀವನದಲ್ಲಿ ಈ ರೀತಿಯ ಯಶಸ್ಸನ್ನು ನಾನು ನೋಡಿರಲಿಲ್ಲ. ನನ್ನ ಸಿನಿಮಾದ ಹಾಡುಗಳು ಹಿಟ್ ಆಗುತ್ತಿದ್ದವು, ಜನ ಇಷ್ಟಪಡುತ್ತಿದ್ದರು. ಆದರೆ ಒಂದು ಹಾಡು 8, 9 ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿರುವುದು ನನ್ನ ವೃತ್ತಿಯಲ್ಲಿಯೇ ಇದೆ ಮೊದಲು'' ಎಂದು ಖುಷಿ ಹಂಚಿಕೊಂಡರು ಜಗ್ಗೇಶ್.

'ತೋತಾಪುರಿ' ಸಿನಿಮಾದ 'ಬಾಗ್ಲು ತೆಗಿ ಮೆರಿ ಜಾನ್' ಸಿನಿಮಾ ಹಾಡು ಯೂಟ್ಯೂಬ್‌ನಲ್ಲಿ ದೊಡ್ಡ ಹಿಟ್ ಆಗಿದ್ದು ಮಿಲಿಯನ್‌ ಗಟ್ಟಲೆ ವೀವ್ಸ್ ಅನ್ನು ಪಡೆದುಕೊಂಡಿದೆ.

''ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಮಾಧ್ಯಮದವರು, ಸಾಮಾಜಿಕ ಜಾಲತಾಣದ ಗೆಳೆಯರು. ನಮ್ಮ ಸಿನಿಮಾ ತಂಡ, ಸಂಗೀತ ನಿರ್ದೇಶಕರು, ಹಾಡುಗಾರರು, ಸಂಗೀತ ಸಂಯೋಜಕರು ಎಲ್ಲರಿಗೂ ಧನ್ಯವಾದ'' ಎಂದರು ಜಗ್ಗೇಶ್.

Jaggesh Expressed Happiness About His Movie Song Becoming Hit On YouTube

''ಬಾಗ್ಲು ತೆಗಿ ಮೇರಿ ಜಾನ್' ಹಾಡಿನ ಮೊದಲ ಸಾಲುಗಳನ್ನಷ್ಟೆ ಮೊದಲು ಬಿಟ್ಟಾಗ ಜನ ಶಾಕ್ ಆಗಿದ್ದರು. ಕೆಲವರಂತೂ ನನಗೆ ಪ್ರಶ್ನೆ ಮಾಡಿದರು. ಏನಿದು ಉರ್ದುವಿನಲ್ಲಿ ಏನೇನೋ ಇದೆ. ಬೈಗುಳವೂ ಇದೆ ಎಂದು. ಆ ಬಳಿಕ ನಾನು ನನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿ ಕಾದು ನೋಡಿ ಎಂದೆ. ಅದಕ್ಕೆ ತಕ್ಕಂತೆ ಜನ ಕಾದು ನೋಡಿದರು. ಅವರಿಗೆ ಹಾಡು ಬಹಳ ಇಷ್ಟವಾಯ್ತು'' ಎಂದರು ಜಗ್ಗೇಶ್.

''ಒಂದು ಹಿಟ್ ಸಿನಿಮಾ ಒಬ್ಬ ನಟನನ್ನು ಹತ್ತು ವರ್ಷ ಉದ್ಯಮದಲ್ಲಿ ಇರುವಂತೆ ಮಾಡುತ್ತದೆ. ನನಗೆ 'ತೋತಾಪುರಿ' ಸೇರಿದಂತೆ ಮೂರು ಅತ್ಯುತ್ತಮ ಸಿನಿಮಾಗಳು ಸಾಲಿನಲ್ಲಿವೆ. ಈ ಮೂರು ಸಿನಿಮಾಗಳು ಸಹ ಹಿಟ್ ಆಗಲಿವೆ. ಹಾಗಾಗಿ ನಾನು ಇನ್ನೂ ಮೂವತ್ತು ವರ್ಷ ಚಿತ್ರರಂಗದಲ್ಲಿ ಇರುತ್ತೇನೆ. ಮುಂದಿನ ವರ್ಷ ನನಗೆ 60 ವರ್ಷ ವಯಸ್ಸಾಗುತ್ತದೆ. ಅಲ್ಲಿಗೆ ನನಗೆ 90 ವರ್ಷ ಆಗುವವರೆಗೆ ನಟಿಸುತ್ತಲೇ ಇರುತ್ತೇನೆ'' ಎಂದರು ಜಗ್ಗೇಶ್.

More from Filmibeat

English summary
Jaggesh thanked social media friends and media people for his movie 'Totapuri's song becoming huge hit. He said this is happening first time for me.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X