'ಓ ನಲ್ಲ ನೀನಲ್ಲಾ' ಎಂದು ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ ನವರಸ ನಾಯಕ ಜಗ್ಗೇಶ್; ವಿಡಿಯೋ ವೈರಲ್

ಸದ್ಯ ನಿಂತ್ರು ಕುಂತ್ರು 'ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ' ಹಾಡು ಎಲ್ಲೆಲ್ಲೂ ಮಾರ್ದನಿಸುತ್ತಿದೆ. ಸೋಶಿಯಲ್ ಮೀಡಿಯಾ ತುಂಬೆಲ್ಲಾ 'ಉಪೇಂದ್ರ' ಚಿತ್ರದ ಇದೇ ಹಾಡು ಗುಂಯ್‌ಗುಡುತ್ತಿದೆ. ಕೆಲವರು ಗುನುಗಿ ಗುನುಗಿ ಸುಸ್ತಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನ ತುಣುಕು ಟ್ರೆಂಡ್ ಕ್ರಿಯೇಟ್ ಮಾಡಿದೆ.

ಉತ್ತರ ಕರ್ನಾಟಕದ ಯುವಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡನ್ನು ಯಾವಾಗ ಗುನುಗಿದನೋ ಅಲ್ಲಿಂದ ಭಾರೀ ವೈರಲ್ ಆಯಿತು. 25 ವರ್ಷಗಳ ಹಿಂದಿನ ಸೂಪರ್ ಹಿಟ್ ಸಾಂಗ್ ಮತ್ತೆ ಎಲ್ಲೆಲ್ಲೂ ಸದ್ದು ಗದ್ದಲ ಮಾಡ್ತಿದೆ. ಈ ಹಾಡಿನ ಟ್ರೆಂಡ್‌ಗೆ ಅಭಿಮಾನಿಗಳು ನವರಸ ನಾಯಕನನ್ನು ಕರೆತಂದಿದ್ದಾರೆ. 'ರಂಗನಾಯಕ' ಚಿತ್ರದ ಹಾಡಿನ ಡ್ಯಾನ್ಸ್ ವಿಡಿಯೋಗೆ 'ಓ ನಲ್ಲ' ಹಾಡಿನ ಝಲಕ್ ಸಿಂಕ್ ಮಾಡಿದ್ದಾರೆ.

Jaggesh reacts on his dance video in Upendras O Nalla Neenalla song trend

ಮಠ ಗುರುಪ್ರಸಾದ್ ನಿರ್ದೇಶನದಲ್ಲಿ ನವರಸ ನಾಯಕ ಜಗ್ಗೇಶ್ ನಟನೆಯ ಸಿನಿಮಾ 'ರಂಗನಾಯಕ'. ಇತ್ತೀಚೆಗೆ ಚಿತ್ರದ 'ಗಾಳಿ ತಂಗಾಳಿ' ಹಾಡು ರಿಲೀಸ್ ಆಗಿತ್ತು. ಸಣ್ಣ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ನಿರ್ದೇಶಕರು ಸ್ಪಷ್ಟನೆ ನೀಡಿದ್ದರು. ಇನ್ನು ಹಾಡಿನಲ್ಲಿ ಜಗ್ಗಣ್ಣನ ಡ್ಯಾನ್ಸ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

ವಯಸ್ಸು 60 ದಾಟಿದರೂ ಜಗ್ಗೇಶ್ ಎನರ್ಜಿ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಡಿನ ಕೊನೆಗೆ ನವರಸ ನಾಯಕನ ಟಪ್ಪಾಂಗುಚಿ ಸ್ಟೆಪ್ಸ್ ಸೂಪರ್ ಎನ್ನುವಂತಿದೆ. ತಮ್ಮ ವಿಭಿನ್ನ ಹಾವಭಾವದಿಂದ 'ರಂಗನಾಯಕ' ಮೋಡಿ ಮಾಡಿದ್ದಾರೆ. ಅಭಿಮಾನಿಯೊಬ್ಬರು ಜಗ್ಗಣ್ಣನ ಈ ಟಪ್ಪಾಂಗುಚಿ ಸ್ಟೆಪ್‌ಗೆ 'ಓ ನಲ್ಲ' ಹಾಡನ್ನು ಸೇರಿಸಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.

'ಟ್ರೆಂಡ್ ಅಂದ್ರೆ ನಮ್ ಜಗ್ಗಣ್ಣ ಇರ್ಲೇ ಬೇಕೂ, ಲಾಸ್ಟ್ ಟ್ವಿಸ್ಟ್ ಕೇಳಿ ಗರಂನಾಯಕ ಮೀಟ್ ಓ ನಲ್ಲ" ಎಂದು ಬರೆದು ಈ ರೀಲ್ಸ್‌ನ ಶೇರ್ ಮಾಡಲಾಗಿದೆ. ವಿಡಿಯೋ ಕೊನೆಯಲ್ಲಿ 'ಓ ನಲ್ಲ' ಹಾಡಿನ ಜೊತೆಗೆ ರಂಗನಾಯಕ ಚಿತ್ರದ 'ಗಾಳಿ ತಂಗಾಳಿ' ಹಾಡಿನ ಸಾಲುಗಳನ್ನು ಸೇರಿಸಿಲಾಗಿದೆ. ಶ್ರುತಿ ಶ್ರುತಿ ಬಿಗ್‌ಬಾಸ್ ಶ್ರುತಿ ಮೀಟು ಶ್ರುತಿ ಎಂದು ಸಿಂಕ್ ಮಾಡಿ ಟ್ವಿಸ್ಟ್ ಕೊಡಲಾಗಿದೆ. ಅದಕ್ಕೆ ಜಗ್ಗೇಶ್ ಡ್ಯಾನ್ಸ್, ಹಾವಭಾವ ಸೇರಿಸಿ ಮಜಾ ಕೊಡುವಂತೆ ಮಾಡಲಾಗಿದೆ.

ಸದ್ಯ ವೈರಲ್ ವಿಡಿಯೋ ಬಗ್ಗೆ ನಟ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ. ಅದನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿ, "ಕನ್ನಡಿಗರಿಗೆ ನನ್ನ ಮೇಲಿನ ಪ್ರೀತಿ ಇದು, ನನ್ನ ಹೃದಯ ನಿಮ್ಮ ಬಳಿ ಆಡವಿಟ್ಟು 40 ವರ್ಷವಾಗಿದೆ. ನಾನು ಬಿಡಿಸಿಕೊಳ್ಳುವುದಿಲ್ಲಾ ನೀವು ವಾಪಸ್ ಮಾಡದಿರಿ, ಧನ್ಯವಾದ ಹರಸಿದ ಕನ್ನಡದ ಮನಗಳಿಗೆ" ಎಂದು ಬರೆದುಕೊಂಡಿದ್ದಾರೆ.

ಮಾರ್ಚ್ 8ಕ್ಕೆ 'ರಂಗನಾಯಕ' ಸಿನಿಮಾ ತೆರೆಗೆ ಬರ್ತಿದೆ. 'ಮಠ', 'ಎದ್ದೇಳು ಮಂಜುನಾಥ' ಬಳಿಕ ಜಗ್ಗೇಶ್ ಹಾಗು ಗುರುಪ್ರಸಾದ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ 3ನೇ ಸಿನಿಮಾ 'ರಂಗನಾಯಕ'. ಅನೂಪ್ ಸಿಳೀನ್ ಸಂಗೀತ ಈ ಚಿತ್ರಕ್ಕಿದೆ. ಬಹಳ ವರ್ಷಗಳ ಬಳಿ ಜಗ್ಗಣ್ಣ-ಗುರುಪ್ರಸಾದ್ ಜೊತೆಯಾಗಿದ್ದು ಈ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ.

ಅಂದಹಾಗೆ 'ಓ ನಲ್ಲಾ ನೀನಲ್ಲಾ' ಹಾಡು 25 ವರ್ಷಗಳ ಹಿಂದೆ ಬಂದ 'ಉಪೇಂದ್ರ' ಚಿತ್ರದ್ದು. ಹಾಡಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರೇಮಾ ಕಾಣಿಸಿಕೊಂಡಿದ್ದರು. ಗುರುಕಿರಣ್ ಸಂಗೀತದ ಹಾಡಿಗೆ ಸ್ವತಃ ಉಪೇಂದ್ರ ಸಾಹಿತ್ಯ ಬರೆದಿದ್ದರು. ಪ್ರತಿಮಾ ರಾವ್ ಹಾಡನ್ನು ಹಾಡಿದ್ದರು.

More from Filmibeat

English summary
Actor Jaggesh thanked Kannada people;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X