"ಸಿನಿಮಾದವ್ರಿಗೆ ಹೆಣ್ಣು ಕೊಡದಿದ್ರೆ ಏನು, ತೆರೆಮೇಲೆ 10 ಮದ್ವೆ ಆಗ್ತೀನಿ": ಬ್ರೋಕರ್ ಮೇಲೆ ಧನು ಗರಂ!

ನಟ ಡಾಲಿ ಧನಂಜಯ್ ನಿಂತ್ರು ಕುಂತ್ರು ಮದುವೆ ಬಗ್ಗೆನೇ ಚರ್ಚೆ. ಸಮಯ ಕೂಡಿ ಬಂದಾಗ ಮದುವೆ ಆಗ್ತೀನಿ ಅಂತ ಅವ್ರು ಕೂಡ ಹೇಳ್ತಾ ಬರ್ತಿದ್ದಾರೆ. ಮದುವೆ ಆಗದ ಕೆಲ ಬ್ರಹ್ಮಚಾರಿ ಯುವಕರು ಕೆಲ ದಿನಗಳ ಹಿಂದೆ ಮಂಡ್ಯದಿಂದ ಮಾದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಆಗ ನಟ ಧನಂಜಯ ಈ ಪಾದಯಾತ್ರೆಗೆ ಚಾಲನೆ ಕೊಟ್ಟು ಯುವಕರಿಗೆ ಧೈರ್ಯ ತುಂಬಿದ್ದರು.

ನವರಸ ನಾಯಕ ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಈ ತಿಂಗಳಾಂತ್ಯಕ್ಕೆ ತೆರೆಗೆ ಬರ್ತಿದೆ. ಇದೀಗ ಚಿತ್ರದ ಸಾಂಗ್ಸ್ ರಿಲೀಸ್ ಮಾಡೋ ಸಮಯ ಬಂದಿದೆ. ಚಿತ್ರದ ಫಸ್ಟ್ ಸಾಂಗ್ 'ಸಿಂಗಲ್ ಸುಂದರ' ಇದೇ ಬುಧವಾರ ರಿಲೀಸ್ ಆಗ್ತಿದೆ. ಈ ಸಾಂಗ್‌ನಲ್ಲಿ ನಟ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಿದ್ದಾರೆ. ಇದನ್ನು ಅನೌನ್ಸ್ ಮಾಡೋಕೆ ಸ್ಪೆಷಲ್ ಪ್ರೋಮೊ ಶೂಟ್ ಮಾಡಿದ್ದಾರೆ. ಬಹಳ ವಿಭಿನ್ನವಾಗಿರುವ ಈ ವಿಡಿಯೋ ಸಖತ್ ಮಜವಾಗಿದೆ.

Jaggeshs Raghavendra Stores first single to be released on April 12th

ನಟರಾದ ಧನಂಜಯ್, ನಾಗಭೂಷಣ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಣಿಸಿಕೊಂಡಿದ್ದಾರೆ. ಈ ಪ್ರೋಮೊ ವಿಡಿಯೋದಲ್ಲೂ ಧನಂಜಯ ಮದುವೆ ಬಗ್ಗೆನೇ ಚರ್ಚೆ ಆಗಿದೆ. ಆರಂಭದಲ್ಲಿ ಫೋನ್‌ನಲ್ಲಿ ಬ್ರೋಕರ್ ಜೊತೆ ಖಾರವಾಗಿ ಮಾತನಾಡಿಕೊಂಡು ಬರುವ ಧನು, 'ರಾಘವೇಂದ್ರ ಸ್ಟೋರ್ಸ್' ಚಿತ್ರದ ಫಸ್ಟ್ ಕೇಳುವಂತೆ ಹೇಳಿದಾಗ ಗರಂ ಆಗ್ತಾರೆ. ಅದು ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಈ ಸಂಭಾಷಣೆಯಲ್ಲಿ ಹಾಡಿನ ಹಿನ್ನಲೆ ಏನು ಅನ್ನೋದನ್ನು ರಿವೀಲ್ ಮಾಡ್ತಾರೆ.

ಮದುವೆ ಆಗದ ಸಿಂಗಲ್‌ಗಳಿಗಾಗಿ ಮಾಡಿರುವ ಸ್ಪೆಷಲ್ ಸಾಂಗ್ ಇದು. ಮದುವೆ ಆದವರಿಗೆ ಮದುವೆ ಆಗದೇ ಇದ್ರೆ ಚೆನ್ನಾಗಿತ್ತು ಎನಿಸುತ್ತೆ, ಆಗದವರಿಗೆ ಮದುವೆ ಬೇಕು ಎನಿಸುತ್ತದೆ ಅನ್ನೋದನ್ನು ಈ ಹಾಡಿನಲ್ಲಿ ಕಟ್ಟಿಕೊಟ್ಟಿರೋದಾಗಿ ನಿರ್ದೇಶಕ ಸಂತೋಷ್ ಆನಂದ್‌ ರಾಮ್ ಹೇಳಿದ್ದಾರೆ. ಮಾತಿನ ನಡುವೆ ಧನಂಜಯ, ನಾಗಭೂಷಣ್ ಹಾಡನ್ನು ಕೇಳಿದ್ದಾರೆ. "ಬ್ರಹ್ಮಚಾರಿ ಬಾರ್ಡರ್‌ರಲ್ಲಿ ಇದ್ಯಾ ಬ್ಯಾಡ್ವಾ ಶೋಬನ" ಅಂತ ಸಾಂಗ್ ಶುರುವಾಗುತ್ತದೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ನಿರ್ಮಾಣ ಆಗಿದೆ. ಚಿತ್ರದಲ್ಲಿ ಮದುವೆ ವಯಸ್ಸು ದಾಟಿದರೂ ಇನ್ನು ಬ್ರಹ್ಮಚಾರಿಯಾಗಿಯೇ ಇರುವ ಸುಂದರನ ಗೋಳಿನ ಕಥೆಯನ್ನು ಹೇಳಲಾಗುತ್ತಿದೆ. ಜಗ್ಗೇಶ್ ಅಡುಗೆ ಭಟ್ಟ ಸುಂದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತಾ ಶ್ರೀವಾಸ್ತವ್ ನಾಯಕಿಯಾಗಿ ಮಿಂಚಿದ್ದಾರೆ. ಕಳೆದ ವರ್ಷ ರಿಲೀಸ್ ಆಗಿದ್ದ ಸಣ್ಣ ಟೀಸರ್ ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿತ್ತು.

Jaggeshs Raghavendra Stores first single to be released on April 12th

ರಿಲೀಸ್ ಡೇಟ್ ಹತ್ತಿರವಾದಂತೆ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡುವ ಪ್ರಯತ್ನ ನಡೀತಿದೆ. ಏಪ್ರಿಲ್ 12ರ ಸಂಜೆ 5 ಗಂಟೆಗೆ ಸಿಂಪಲ್ ಸ್ಟಾರ್ 'ಸಿಂಗಲ್ ಸುಂದರ' ಸಾಂಗ್ ರಿಲೀಸ್ ಮಾಡಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ನವೀನ್ ಸಜ್ಜು ಹಾಡಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಕಾರಣಾಂತರಗಳಿಂದ ರಿಲೀಸ್ ಆಗೋದು ತಡವಾಗುತ್ತಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ.

ನಟ ಜಗ್ಗೇಶ್ ಶಿಷ್ಯನಾಗಿರುವ ನಿರ್ದೇಶಕ ಸಂತೋಷ್ ಆನಂದ್‌ ರಾಮ್ 'ರಾಘವೇಂದ್ರ ಸ್ಟೋರ್ಸ್' ಚಿತ್ರವನ್ನು ಯಾವ ರೀತಿ ಕಟ್ಟಿಕೊಟ್ಟಿದ್ದಾರೆ ಎನ್ನುವ ಕುತೂಹಲ ಇದೆ. ಇನ್ನು ಜಗ್ಗಣ್ಣನ ಕಾಮಿಡಿ ಟೈಮಿಂಗ್ ಬಗ್ಗೆ ಬಿಡಿಸಿ ಹೇಳೋದೇ ಬೇಕಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಗ್ಗೇಶ್ ನಟಿಸಿದ ಸಿನಿಮಾಗಳು ಅಷ್ಟಾಗಿ ಥಿಯೇಟರ್‌ಗೆ ಬರ್ಲಿಲ್ಲ. ಕಳೆದ ವರ್ಷ ಬಂದ 'ತೋತಾಪುರಿ' ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ 'ರಾಘವೇಂದ್ರ ಸ್ಟೋರ್ಸ್' ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
Jaggesh's Raghavendra Stores first single to be released on April 12th. Song Release Date announcement hilarious video goes Viral. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X