»   » ಜಗ್ಗೇಶ್‌ಗೆ ದೇವರ ಕಾಣಿಕೆಯ ಹಾಡು ಯಾವುದು? ಅವರ ಧ್ವನಿಯಲ್ಲೇ ಕೇಳಿ..

ಜಗ್ಗೇಶ್‌ಗೆ ದೇವರ ಕಾಣಿಕೆಯ ಹಾಡು ಯಾವುದು? ಅವರ ಧ್ವನಿಯಲ್ಲೇ ಕೇಳಿ..

Posted By:
Subscribe to Filmibeat Kannada

ನಟ ಜಗ್ಗೇಶ್ ರವರು ಎಂದಿಗೂ ತಮ್ಮ ಸಿನಿಮಾ ಜರ್ನಿಯಲ್ಲಿನ ಸುಖ-ದುಃಖದ ಸನ್ನಿವೇಶಗಳನ್ನು ಮರೆಯುವುದಿಲ್ಲ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಅವರು ಆಗಾಗ ತಮ್ಮ ಚಿತ್ರ ಬದುಕಿನ ನೋವು, ಹೆಚ್ಚು ಖುಷಿ ತಂದುಕೊಟ್ಟ ಸಂಗತಿಗಳನ್ನು ಮೆಲುಕು ಹಾಕುತ್ತಿರುತ್ತಾರೆ. ಅಲ್ಲದೇ ಸಮಾಜದ ಪ್ರಚಲಿತ ವಿದ್ಯಾಮಾನಗಳಿಗೆ ಪ್ರತಿಕ್ರಿಯಿಸುತ್ತಿರುತ್ತಾರೆ.

ಅಂದಹಾಗೆ ಈಗ ನಟ ಜಗ್ಗೇಶ್ ರವರು ತಮ್ಮ ಜೀವನದಲ್ಲಿ ಎಂದೂ ಮರೆಯದ, ಹಾಗೂ ಹೆಚ್ಚು ಇಷ್ಟಪಡುವ ಹಾಡೊಂದನ್ನು ಹಾಡಿದ್ದು, ಆ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ 'ದೇವರು ನನಗೆ ನೀಡಿದ ಪ್ರೀತಿಯ ಕಾಣಿಕೆ ಈ ಹಾಡು! ಕಲಾವಿದ ಹೋದಮೇಲೂ ಉಳಿಯುವುದು ಇಂಥ ದೇವರ ಕಾಣಿಕೆ ಮಾತ್ರ! ಧನ್ಯತಾಭಾವವಿದೆ ಈ ಕಾರ್ಯಕ್ಕೆ! ಪ್ರೀತಿ ಇಂದ ನಿಮಗಾಗಿ' ಎಂದು ಬರೆದಿದ್ದಾರೆ.

Jaggesh Sings his most Favorite song from 'Bevu Bella' Movie

ಜಗ್ಗೇಶ್ ರವರಿಗೆ ಅತೀ ಪ್ರಿಯವಾದ ಆ ಹಾಡೆಂದರೆ 1993 ರಲ್ಲಿ ಬಿಡುಗಡೆ ಆದ 'ಬೇವು ಬೆಲ್ಲ' ಚಿತ್ರದ 'ಜನುಮ ನೀಡುತ್ತಾಳೆ ನಮ್ಮ ತಾಯಿ... ಅನ್ನ ನೀಡುತ್ತಾಳೆ ಭೂಮಿ ತಾಯಿ' ಎಂಬ ಹಾಡು. ಆ ಹಾಡನ್ನು ಅವರ ಧ್ವನಿಯಲ್ಲೇ ಈ ಕೆಳಗಿನ ವಿಡಿಯೋ ನೋಡುತ್ತ ಕೇಳಿ.

https://www.facebook.com/iamjaggesh/videos/710245422495147/

1993 ರಲ್ಲಿ ಬಿಡುಗಡೆ ಆದ ಜಗ್ಗೇಶ್ ಅಭಿನಯದ 'ಬೇವು ಬೆಲ್ಲ' ಚಿತ್ರವನ್ನು ಎಸ್‌.ನಾರಾಯಣ್ ರವರು ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿನ 'ಜನುಮ ನೀಡುತ್ತಾಳೆ ನಮ್ಮ ತಾಯಿ... ಅನ್ನ ನೀಡುತ್ತಾಳೆ ಭೂಮಿ ತಾಯಿ' ಹಾಡಿಗೆ ನಾದಬ್ರಹ್ಮ ಹಂಸಲೇಖ ರವರು ಸಾಹಿತ್ಯ ಬರೆದು ಸಂಗೀತ ನೀಡಿದ್ದರು. ರಾಜೇಶ್ ಕೃಷ್ಣನ್ ರವರು ಹಾಡಿದ್ದರು. ಜಗ್ಗೇಶ್ ಈಗ ಆ ಹಾಡನ್ನು ನೆನೆದು ಹಾಡಿದ್ದು ಈ ಚಿತ್ರತಂಡದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಚಿತ್ರದ ಮೂಲ ಹಾಡನ್ನು ನೋಡಲು ಬಯಸುವವರು ಈ ಲಿಂಕ್ ಕ್ಲಿಕ್ ಮಾಡಿ

English summary
Kannada Actor Jaggesh Sings his most favorite song from his 'Bevu Bella' movie, and poted that video in his facebook page.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada