For Quick Alerts
  ALLOW NOTIFICATIONS  
  For Daily Alerts

  8 ಮಿಲಿಯನ್ ವೀಕ್ಷಣೆ ಕಂಡ ರಾಬರ್ಟ್ ಚಿತ್ರದ ಜೈ ಶ್ರೀರಾಮ್ ಹಾಡು

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದೆ. ಚಿತ್ರಮಂದಿರದಲ್ಲಿ ಮೊದಲಿನಂತೆ ಶೇಕಡಾ 100 ರಷ್ಟು ಜನರು ಬರಬೇಕು, ಬಂದಮೇಲೆ ಮಾತ್ರ ರಾಬರ್ಟ್ ಎಂದು ನಿರ್ಮಾಪಕರು ಹೇಳಿಬಿಟ್ಟಿದ್ದಾರೆ.

  ಈಗಾಗಲೇ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ರಾಬರ್ಟ್ ಜಾತ್ರೆಗೆ ಸಜ್ಜಾಗಿದೆ.

  ವಿಜಯ್ 'ಮಾಸ್ಟರ್' ಸಿನಿಮಾದ ಹಿಂದಿ ವರ್ಷನ್ ಗೆ ಉತ್ತರ ಭಾರತದಲ್ಲಿ ಭಾರಿ ಬೇಡಿಕೆ

  ಈ ನಡುವೆ ರಾಬರ್ಟ್ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ಅದರಲ್ಲೂ ಜೈ ಶ್ರೀರಾಮ್ ಹಾಡಂತೂ ಎಲ್ಲರ ಫೆವರೀಟ್ ಎನಿಸಿಕೊಂಡಿದೆ. ಈ ಹಾಡಿನ ಲಿರಿಕಲ್ ವಿಡಿಯೋ ಯ್ಯೂಟ್ಯೂಬ್‌ನಲ್ಲಿ 8 ಮಿಲಿಯನ್ ವೀಕ್ಷಣೆ ಕಂಡಿದೆ.

  ಶಂಕರ್ ಮಹಾದೇವನ್ ದನಿಯಲ್ಲಿ ಮೂಡಿ ಬಂದಿರುವ ಜೈ ಶ್ರೀರಾಮ್ ಹಾಡು ಏಪ್ರಿಲ್ 2ನೇ ತಾರೀಖು ಯ್ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು.

  ಡಿ-ಬಾಸ್ ದರ್ಶನ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿದ್ದಾರೆ. ವಿನೋದ್ ಪ್ರಭಾಕರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹಾಕಿದ್ದಾರೆ.

  English summary
  Jai Sri Ram Song from Roberrt Movie Crossed 8 Million Views in Youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X