'ಜೇಮ್ಸ್' ಹಾಡಿನ ವಿಶೇಷತೆಯೇನು? ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಗಳ್ಯಾರು?

ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ಮಾರ್ಚ್ 17 ಕ್ಕೆ ಬಿಡುಗಡೆ ಆಗಲಿದೆ. ಅಂದು ಪುನೀತ್‌ರ ಹುಟ್ಟುಹಬ್ಬ ಸಹ. ಸಿನಿಮಾ ಬಿಡುಗಡೆಗೆ ದೇಶದಾದ್ಯಂತ ಅಪ್ಪು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು ಆ ಮೂಲಕ ಸಿನಿಮಾದ ಪ್ರಚಾರ ಕಾರ್ಯವೂ ಆರಂಭವಾಗಿದೆ. ಇದೀಗ 'ಜೇಮ್ಸ್' ಸಿನಿಮಾದ ಹಾಡು ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿದೆ.

Recommended Video

ಅಪ್ಪು ಜೇಮ್ಸ್ ಸಪೋರ್ಟ್ ಮಾಡೋಕೆ ಬರ್ತಿದ್ದಾರೆ ತೆಲುಗು ಸೂಪರ್ ಸ್ಟಾರ್ಸ್

'ಜೇಮ್ಸ್' ಸಿನಿಮಾದ ಹಾಡು ಮಾರ್ಚ್‌ 1 ರಂದು 11 ಗಂಟೆಗೆ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಲಿದೆ. 'ಜೇಮ್ಸ್' ನಿರ್ದೇಶಕ ಚೇತನ್ ಅವರೇ ಈ ಹಾಡನ್ನು ಬರೆದಿದ್ದು, ಬಿಡುಗಡೆ ಆಗುತ್ತಿರುವ ಹಾಡಿನ ಕುರಿತು ಕೆಲವು ಆಸಕ್ತಿಕರ ವಿಷಯಗಳನ್ನು ಅವರು ಮಾಧ್ಯಮದೊಟ್ಟಿಗೆ ಹಂಚಿಕೊಂಡಿದ್ದಾರೆ.

''ಮಾರ್ಚ್‌ 1 ರಂದು ಬಿಡುಗಡೆ ಆಗುತ್ತಿರುವ 'ಜೇಮ್ಸ್' ಸಿನಿಮಾದ ಹಾಡು ಹೀರೋ ಇಂಟ್ರೊಡಕ್ಷನ್ ಹಾಡಾಗಿದೆ. ಈ ಹಾಡಿಗೆ ವಿಶೇಷವಾಗಿ ನೃತ್ಯ ಸಂಯೋಜನೆ ಮಾಡಿಸಿ ಇತರೆ ಕಲಾವಿದರಿಂದ ಪರ್ಫಾರ್ಮ್ ಮಾಡಿಸಿದ್ದೇವೆ. ಸಿನಿಮಾದಲ್ಲಿ ಈ ಹಾಡಿಗೆ ಶೇಖರ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚರಣ್ ರಾಜ್ ಅದ್ಭುತವಾಗಿ ಬಿಜಿಎಂ ನೀಡಿದ್ದಾರೆ. ಮಾರ್ಚ್ 1ರಂದು ಬಿಡುಗಡೆ ಆಗುತ್ತಿರುವ ಹಾಡಿಗೆ ಯಾರು ಪರ್ಫಾರ್ಮ್ ಮಾಡಿದ್ದಾರೆ ಎಂಬುದು ಬಿಡುಗಡೆ ದಿನವೇ ಗೊತ್ತಾಗಲಿದೆ'' ಎಂದು ಗುಟ್ಟು ಕಾಯ್ದುಕೊಂಡಿದ್ದಾರೆ ಚೇತನ್.

James Movie Director Chethan Talks About Song Release And Pre Release Event

''ಮಾರ್ಚ್ 1 ರಂದು ಬಿಡುಗಡೆ ಆಗುತ್ತಿರುವ ಹಾಡನ್ನು ಐದು ಜನ ಹಾಡುಗಾರರು ಹಾಡಿದ್ದಾರೆ. ಐದು ಭಾಷೆಯಲ್ಲಿ ಒಟ್ಟಿಗೆ ಹಾಡು ಬಿಡುಗಡೆ ಆಗಲಿದೆ. ಇದೊಂದು ರ್ಯಾಪ್ ಹಾಡಿನ ಮಾದರಿಯಲ್ಲಿ ಇರಲಿದೆ. ನನ್ನ ಇಷ್ಟದ ಹಾಡು ಇದು. ಹಾಡನ್ನು ನಾನೇ ಬರೆದಿದ್ದೀನಿ. ಹಾಡಿನಲ್ಲಿ ಸಖತ್ ಎನರ್ಜಿ, ಜೋಶ್ ಇದೆ. ಅಭಿಮಾನಿಗಳು ಈ ಹಾಡು ಬಹಳ ಇಷ್ಟವಾಗಲಿದೆ'' ಎಂದು ಮಾಹಿತಿ ನೀಡಿದ್ದಾರೆ ಚೇತನ್.

ಸಿನಿಮಾದ ಪ್ರೀ ರಿಲೀಸ್ ಬಗ್ಗೆ ಮಾತನಾಡಿದ ಚೇತನ್, ''ಇದು ಬಹಳ ದೊಡ್ಡ ಸಿನಿಮಾ ಹಾಗಾಗಿ ಎಲ್ಲರಿಗೂ ಪ್ರೀ ರಿಲೀಸ್ ಕಾರ್ಯಕ್ರಮ ಹೇಗಿರಲಿದೆ ಎಂಬ ಕುತೂಹಲ ಇದೆ. ಅಭಿಮಾನಿಗಳು ಹಲವರು ಕಾರ್ಯಕ್ರಮದ ಬಗ್ಗೆ ಸಲಹೆಗಳನ್ನು ಕೊಡುತ್ತಿದ್ದಾರೆ. ನಿರ್ಮಾಣ ಸಂಸ್ಥೆಯು ಕೆಲವೇ ದಿನಗಳಲ್ಲಿ ಪ್ರೀ ರಿಲೀಸ್ ಇವೆಂಟ್‌ ಬಗ್ಗೆ ಮಾಹಿತಿಯನ್ನು ನೀಡಲಿದೆ'' ಎಂದಿದ್ದಾರೆ ಚೇತನ್.

''ಪುನೀತ್ ರಾಜ್‌ಕುಮಾರ್ ಇಡೀಯ ದೇಶವೇ ಪ್ರೀತಿಸುವ ವ್ಯಕ್ತಿ ಹಾಗಾಗಿ ಬೇರೆ ಬೇರೆ ಕಡೆಗಳಲ್ಲಿ ಕಾರ್ಯಕ್ರಮ ಮಾಡುವ ಉದ್ದೇಶ ಇದೆ. ಆದರೆ ಅತಿಥಿಗಳು ಯಾರ್ಯಾರು ಬರಲಿದ್ದಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ನಾವು ಕಾರ್ಯಕ್ರಮ ಮಾಡುವ ವೇಳೆಗೆ ಅವರು ಲಭ್ಯವಿರುತ್ತಾರಾ ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ ಹಾಗಾಗಿ ಎಲ್ಲದರ ಮಾಹಿತಿಯನ್ನು ಕೆಲವೇ ದಿನಗಳಲ್ಲಿ ನಾವು ನೀಡಲಿದ್ದೇವೆ'' ಎಂದಿದ್ದಾರೆ ಚೇತನ್. 'ಜೇಮ್ಸ್' ಸಿನಿಮಾ ಮಾರ್ಚ್ 17 ರಂದು ಬಿಡುಗಡೆ ಆಗಲಿದೆ.

More from Filmibeat

English summary
James movie director Chethan talks about song release and pre release event. Movie's first song is releasing on March 01.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X