ಲಂಡನ್ ಸಂಗೀತ ನಿರ್ದೇಶಕ.. ಶ್ರುತಿ ಹಾಸನ್.. ಯಶ್ 'ಟಾಕ್ಸಿಕ್' ಟೀಸರ್ ಕಿಕ್‌ ಹಿಂದೆ ಯಾರೆಲ್ಲಾ ಇದ್ದಾರೆ ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಟೈಟಲ್‌ ಅನೌನ್ಸ್‌ಮೆಂಟ್ ಟೀಸರ್ ಸಖತ್ ಸದ್ದು ಮಾಡ್ತಿದೆ. ಮೊದಲ ನೋಟದಲ್ಲೇ ಥೀಮ್ ಟೀಸರ್ ಅಭಿಮಾನಿಗಳ ಮನಗೆದ್ದಿದೆ. ಲಕ್ಷ ಲಕ್ಷ ವೀವ್ಸ್, ಲೈಕ್ಸ್ ಗಿಟ್ಟಿಸಿ ಸಂಚಲನ ಸೃಷ್ಟಿಸಿದೆ. ಅಭಿಮಾನಿಗಳ ಫೇಸ್‌ಬುಲ್, ಇನ್‌ಸ್ಟಾ ಸ್ಟೋರಿಗಳಲ್ಲಿ ವಾಟ್ಸಪ್‌ ಸ್ಟೇಟಸ್‌ಗಳಲ್ಲಿ ರಾರಾಜಿಸುತ್ತಿದೆ.

ಹಂಟಿಂಗ್ ಬಿಜಿಎಂ, ರ್ಯಾಪ್ ವಾಯ್ಸ್, ಗ್ರಾಫಿಕ್ಸ್ ವಿಷ್ಯುವಲ್ಸ್ ಜೊತೆಗೆ 1 ನಿಮಿಷ 18 ಸೆಕೆಂಡ್‌ಗಳ ಟೀಸರ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ. ಬರೀ ಟೈಟಲ್ ಅನೌನ್ಸ್‌ಮೆಂಟ್ ಟೀಸರ್‌ ಈ ರೀತಿ ಇದ್ದರೆ 'ಟಾಕ್ಸಿಕ್' ಸಿನಿಮಾ ಕ್ವಾಲಿಟಿ ಯಾವ ರೀತಿ ಇರುತ್ತೆ ಎಂದು ಊಹಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗುತ್ತಿದೆ. ಈ ಸಣ್ಣ ಝಲಕ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ.

Jeremy Stack BGM and Shruti Haasan voice in Yash- Geethu Mohandas Toxic teaser

ಕೆವಿಎನ್‌ ಪ್ರೊಡಕ್ಷನ್ಸ್ ಹಾಗೂ ಯಶ್ ಜಂಟಿಯಾಗಿ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಂದಾಜು 170 ಕೋಟಿ ರೂ. ಬಜೆಟ್‌ನಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರಲಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್ ರಿಲೀಸ್ ಪ್ಲ್ಯಾನ್ ಮಾಡಲಾಗುತ್ತಿದೆ. ಏಪ್ರಿಲ್ 10, 2025ರಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

'KGF-2' ಸಿನಿಮಾ ಬಂದೋಗಿ ಒಂದೂವರೆ ವರ್ಷದ ನಂತರ ಯಶ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಚಿತ್ರದಲ್ಲಿ ಮೂವರು ನಾಯಕಿಯರು ಇರುತ್ತಾರೆ ಎನ್ನಲಾಗ್ತಿದೆ. ಇನ್ನು ಮಲಯಾಳಂ ನಟ ಟೊವಿನೋ ಥಾಮಸ್ ಮುಖ್ಯವಾದ ಪಾತ್ರದಲ್ಲಿ ನಟಿಸೋ ಸಾಧ್ಯತೆ ದಟ್ಟವಾಗಿದೆ.

Jeremy Stack BGM and Shruti Haasan voice in Yash- Geethu Mohandas Toxic teaser

ಅಂದಹಾಗೆ 'ಟಾಕ್ಸಿಕ್' ಟೀಸರ್ ಎಲ್ಲರ ಗಮನ ಸೆಳೆದಿದೆ. ಈ ಟೀಸರ್‌ಗಾಗಿ ಗೀತು ಅಂಡ್ ಟೀಂ ಭರ್ಜರಿ ಕಸರತ್ತು ಮಾಡಿರುವುದು ಗೊತ್ತಾಗುತ್ತಿದೆ. ಮೊದಲಿಗೆ ಕನ್ನಡದ ಸಂಗೀತ ನಿರ್ದೇಶಕ ಚರಣ್ ರಾಜ್ ಬಿಜಿಎಂ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಲಂಡನ್ ಮೂಲದ ಜೆರೆಮಿ ಸ್ಟಾಕ್ ಎಂಬುವವರು ಸಂಗೀತ ನೀಡಿದ್ದಾರೆ ಎನ್ನುವ ಮಾತುಗಳು ಈಗ ಕೇಳಿಬರ್ತಿದೆ. ಇನ್ನು ಟೀಸರ್‌ನ ಹಿನ್ನೆಲೆಯಲ್ಲಿ "Like a moth to a flame you'll play his game; he's a fix of Toxic you never had. Chaos is a man and you want him bad" ಎನ್ನುವ ಸಾಲುಗಳು ಕೇಳಿಸುತ್ತದೆ. ಇದನ್ನು ಹಾಡಿರುವುದು ತಮಿಳು ನಟಿ, ಗಾಯಕಿ ಶ್ರುತಿ ಹಾಸನ್ ಎನ್ನುವುದು ಈಗ ಬಹಿರಂಗವಾಗಿದೆ.

ಹೌದು ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸಿನಿಮಾ ನಟಿ ಮಾತ್ರವಲ್ಲ, ಗಾಯಕಿ ಕೂಡ ಹೌದು. ಸಾಕಷ್ಟು ಇಂಗ್ಲೀಷ್ ಆಲ್ಬಮ್‌ಗಳಿಗೂ ಹಾಡಿದ್ದಾರೆ. ಇದೇ ಶ್ರುತಿ ಹಾಸನ್ 'ಟಾಕ್ಸಿಕ್' ಟೀಸರ್‌ ಹಿನ್ನೆಲೆಯ ವಾಯ್ಸ್ ನೀಡಿದ್ದಾರೆ. ಸಾಕಷ್ಟು ಜನ ಇದನ್ನು ಮೆಚ್ಚಿಕೊಂಡು ಕಮಲ್ ಪುತ್ರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಟೀಸರ್‌ನಲ್ಲಿರೋ ಮೋಷನ್ ಗ್ರಾಫಿಕ್ಸ್ ವರ್ಕ್‌ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. 17 ಗಂಟೆಗಳಲ್ಲಿ ಟೀಸರ್ ಯೂಟ್ಯೂಬ್‌ನಲ್ಲಿ 37 ಲಕ್ಷ ವೀವ್ಸ್ ಹಾಗೂ 3 ಲಕ್ಷ ಲೈಕ್ಸ್ ಪಡೆದಿದೆ. ಇನ್ನು ಇನ್‌ಸ್ಟಾಗ್ರಾಂನಲ್ಲಿ 1 ಕೋಟಿ ಲಕ್ಷ ವೀವ್ಸ್ ಹಾಗೂ 12 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡು ಸದ್ದು ಮಾಡ್ತಿದೆ. ನಟ ಯಶ್ ಅಳೆದು ತೂಗಿ 'ಟಾಕ್ಸಿಕ್' ಸಿನಿಮಾ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಸೇರಿ ಚಿತ್ರಕಥೆ ಸಿದ್ಧಪಡಿಸಿದ್ದಾರೆ.

'ಟಾಕ್ಸಿಕ್' ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಬಹುತೇಕ ಮುಕ್ತಾಯವಾಗಿದೆ. ಚಿತ್ರಕಥೆ ಜೊತೆಗೆ ಶೂಟಿಂಗ್ ಲೊಕೇಷನ್, ಶೆಡ್ಯೂಲ್‌ಗಳು ಕೂಡ ಫೈನಲ್ ಆಗಿದೆ. ಗೋವಾ, ಶ್ರೀಲಂಕಾದಲ್ಲೂ ಸಿನಿಮಾ ಚಿತ್ರೀಕರಣ ನಡೆಯುತ್ತದೆ ಎನ್ನಲಾಗ್ತಿದೆ. ಅಭಿಮಾನಿಗಳಂತೂ ಯಶ್ ಪಾತ್ರ ಏನು? ಲುಕ್ ಹೇಗಿರುತ್ತದೆ? ಎಂದು ತಲೆ ಕೆಡಿಸಿಕೊಂಡಿದ್ದಾರೆ.

More from Filmibeat

English summary
Jeremy Stack composed BGM and Shruthi haasan vocals in Toxic teaser.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X