ವಿಡಿಯೋ : 'ಜೋಡೆತ್ತು' ಹಾಡು ಯೂಟ್ಯೂಬ್ ನಲ್ಲಿ ರಿಲೀಸ್
ಮಂಡ್ಯ ಚುನಾವಣೆಯಲ್ಲಿ ಏನಾಯ್ತೋ ಗೊತ್ತಿಲ್ಲ... ಆದರೆ, 'ಜೋಡೆತ್ತು' ಎನ್ನುವ ಪದ ಮಾತ್ರ ಸಿಕ್ಕಾಪಟ್ಟೆ ಫೇಮಸ್ ಆಯ್ತು. ಒಂದೇ ಕಡೆ ಈ ಹೆಸರಿನಲ್ಲಿ ಸಿನಿಮಾ ಮಾಡುವ ತಯಾರಿಗಳು ನಡೆಯುತ್ತಿದ್ದರೆ, ಮತ್ತೊಂದು 'ಜೋಡೆತ್ತು' ಹಾಡು ಬಿಡುಗಡೆಯಾಗಿದೆ.
'ಜೋಡೆತ್ತು' ಹಾಡು ಯೂಟ್ಯೂಬ್ ನಲ್ಲಿ ನಿನ್ನೆ (ಮೇ 20) ಬಿಡುಗಡೆಯಾಗಿದೆ. 'ರಾಜ ರಾಣಿ ರೋರರ್ ರಾಕೆಟ್' ಸಿನಿಮಾದ ಹಾಡು ಇದಾಗಿದೆ. 'ಜೋಡೆತ್ತು' ಎಂಬ ಪದ ಫೇಮಸ್ ಆಗಿದ್ದು, ಅದೇ ಪದದಲ್ಲಿ ಈ ಹಾಡನ್ನು ಮಾಡಲಾಗಿದೆ.
ಡ್ಯಾನ್ಸ್ ಮಾಸ್ಟರ್ ಭೂಷಣ್ ಈ ಸಿನಿಮಾದ ನಿರ್ದೇಶನ ಮಾಡಿ, ನಟಿಸಿದ್ದಾರೆ. 'ಚುಟು ಚುಟು..' ಹಾಗೂ 'ನಟ ಸಾರ್ವಭೌಮ' ಟೈಟಲ್ ಹಾಡಿನ ಡ್ಯಾನ್ಸ್ ಮೂಲಕ ಭೂಷಣ್ ದೊಡ್ಡ ಹೆಸರು ಗಳಿಸಿದ್ದಾರೆ.

'ಜೋಡಿ ಎತ್ತು.. ಜೋಡಿ ಎತ್ತು.. ಒಳ್ಳೆ ಗತ್ತು..' ಎಂಬ ಈ ಹಾಡನ್ನು ಖದರ್ ಕುಮಾರ್ ಬರೆದಿದ್ದಾರೆ. ರವಿ ಬಸ್ರೂರ್ ಹಾಗೂ ಅನುರುದ್ಧ್ ಹಾಡಿಗೆ ಧ್ವನಿ ನೀಡಿದ್ದಾರೆ. ಪ್ರಭು ಎಸ್ ಆರ್ ಸಂಗೀತ ಹಾಡಿನಲ್ಲಿದೆ.
ಆನಂದ್ ಆಡಿಯೋ ಯೂ ಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಿರುವ ಈ ಹಾಡು ಸದ್ಯ 1 ಲಕ್ಷದ 25 ಸಾವಿರಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ. ಹಾಡಿನಲ್ಲಿ ಭೂಷಣ್ ಡ್ಯಾನ್ಸ್ ಚೆನ್ನಾಗಿದೆ.
ಜೋಡೆತ್ತು ಎಂದ ತಕ್ಷಣ ದರ್ಶನ್ ಹಾಗೂ ಯಶ್ ನೆನಪಾಗುತ್ತಾರೆ. ಅದೇ ರೀತಿ ಈ ಇಬ್ಬರು ನಟರ ಫೋಟೋವನ್ನು ಬಳಸಿಕೊಳ್ಳಲಾಗಿದೆ. ಇದರ ಜೊತೆಗೆ ಮೋದಿ ಹಾಗೂ ರಜನಿಕಾಂತ್ ಚಿತ್ರವೂ ಹಾಡಿನಲ್ಲಿ ಇದೆ.
'ರಾಜ ರಾಣಿ ರೋರರ್ ರಾಕೆಟ್' ಸಿನಿಮಾದಲ್ಲಿ ಭೂಷಣ್, ಮಾನ್ಯ, ಮೂಗುರು ಸುಂದರಂ ಸೇರಿದಂತೆ ಅನೇಕರು ನಟಿಸಿದ್ದಾರೆ.


Click it and Unblock the Notifications











