ಜೋಶ್ ಆ್ಯಪ್‌ನಲ್ಲಿ ಟಾಪ್‌ನಲ್ಲಿದ್ದಾರೆ ಈ ಚೆಲುವೆ!
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆ್ಯಪ್‌ಗಳ ಮೂಲಕ ಜನ ಆ್ಯಕ್ಟಿವ್ ಆಗಿ ಇರುತ್ತಾರೆ. ಅದರಲ್ಲೂ ರೀಲ್ಸ್, ವಿಡಿಯೋಗಳನ್ನು ಹಂಚಿಕೊಳ್ಳಲು ಹೆಚ್ಚಾಗಿ ಸಾಮಾಜಿಕ ಜಾಲತಾಣವನ್ನು ಬಳಸುತ್ತಾರೆ. ಅದರಲ್ಲಿ ಜೋಶ್ ಆ್ಯಪ್ ಕೂಡ ಒಂದು. ಜೋಶ್‌ನಲ್ಲಿ ಸಾಕಷ್ಟು ಮಂದಿ ತಮ್ಮ ವಿಡಿಯೋ ಮತ್ತು ರೀಲ್ಸ್‌ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಅದರಲ್ಲಿ ಹೆಚ್ಚಾಗಿ ವೈರಲ್ ಆಗುವುದು ಕೆಲವರು ಮಾತ್ರ. ಇನ್ನು ಕೆಲವರು ಸದಾ ವಿಡಿಯೋಗಳನ್ನು ಮಾಡುತ್ತಾ ಟಾಪ್‌ನಲ್ಲಿ ಇರುತ್ತಾರೆ. ಸದ್ಯ ಜೋಶ್ ಆ್ಯಪ್ ಮೂಲಕ ಸಿಕ್ಕಪಟ್ಟೆ ಸದ್ದು ಮಾಡುತ್ತಿದ್ದಾರೆ ಡಾ.ಸ್ವಾತಿ ಭಾರದ್ವಾಜ್. ಇವರು ಹೆಚ್ಚು ಸಮಯದಿಂದ ಜೋಶ್ ಆ್ಯಪ್‌ನಲ್ಲಿ ಇದ್ದಾರೆ. ಜೊತೆಗೆ ಬಾರಿ ಫೇಮಸ್ ಕೂಡ ಆಗಿದ್ದಾರೆ.
ಸ್ವಾತಿ ಅವರು ಮಾಡುವ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅವರು ಹಾಕುವ ರೀಲ್ಸ್‌ಗಳನ್ನು ನೋಡಲು ಜನ ಕಾಯುತ್ತಾರೆ. ಸ್ವಾತಿ ಅವರ ವಿಡಿಯೋಗಳು ಕಡಿಮೆ ಅಂದರೂ 50 ಸಾವಿರ ವೀವ್ಸ್ ಪಡೆದುಕೊಳ್ಳುತ್ತವೆ. ಜೊತೆಗೆ ಸಾಕಷ್ಟು ಲೈಕ್ಸ್‌ಗಳು ಬರುತ್ತವೆ.

ಡಾ.ಸ್ವಾತಿ ಭಾರದ್ವಾಜ್ ಅವರು ಒಬ್ಬ ಅದ್ಭುತ ನೃತ್ಯಗಾತಿ. ಜೊತೆಗೆ ಕೂಚುಪುಡಿ ನೃತ್ಯದಲ್ಲಿ ಪರಿಣಿತಿ ಹೊಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಗೆದ್ದಿದ್ದಾರೆ. ಈಗ ತಮ್ಮ ಡಾನ್ಸ್ ಮೂಲಕವೇ ಹೆಚ್ಚು ಸದ್ದು ಮಾಡುತ್ತಲಿದ್ದಾರೆ. ಜೋಶ್ ಆ್ಯಪ್‌ನಲ್ಲಿ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋಗಳು ಕೂಡ ವೈರಲ್ ಆಗಿವೆ.
ಕನ್ನಡ ಚಿತ್ರದ ಹಾಡುಗಳಿಗೆ ಹೆಚ್ಚಿನ ರೀಲ್ಸ್ ಮಾಡುತ್ತಾರೆ ಸ್ವಾತಿ. ಸಂಜು ಮತ್ತು ಗೀತಾ, ಏನೆಂದು ಹೆಸರಿಡಲಿ, ಎರಡು ಜಡೆಯನ್ನು ಎಳೆದು ಕೇಳುವೆನು ಸೇರಿದಂತೆ ಹಲವಾರು ಹಾಡುಗಳಿಗೆ ರೀಲ್ಸ್ ಮಾಡಿದ್ದಾರೆ. ಕೇವಲ ಹಾಡುಗಳಿಗೆ ರೀಲ್ಸ್ ಮಾಡುವುದಲ್ಲಾ, ಈಕೆ ಸೂಪರ್ ಡೈಲಾಗ್ ಕೂಡ ಹೇಳುತ್ತಾರೆ. ಅಷ್ಟೇ ಅಲ್ಲ ಕುಟುಂಬದವರ ಜೊತೆಗೂ ಕೆಲವೊಂದು ವಿಡಿಯೋಗಳನ್ನು ಮಾಡಿ ಶೇರ್ ಮಾಡಿದ್ದಾರೆ.
ಸ್ವಾತಿ ಭಾರದ್ವಾಜ್
https://share.myjosh.in/video/67ddcbfa-1e1c-4be4-a658-4feb2d34f35a
https://share.myjosh.in/video/8ae7608d-2e06-470f-b24b-c944b46ff71b


Click it and Unblock the Notifications











