'ನೋಡು ಶಿವಾ...' ಎನ್ನುತಾ ಚಂದನ್ ಶೆಟ್ಟಿ ಜೊತೆ ಹೆಜ್ಜೆ ಹಾಕಿದ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ

ಸ್ಯಾಂಡಲ್ ವುಡ್ ನ ರ್ಯಾಪರ್ ಚಂದನ್ ಶೆಟ್ಟಿ ಇದೀಗ ಮತ್ತೊಂದು ಆಲ್ಬಂ ಸಾಂಗ್ ನ ಸಿದ್ಧತೆಯಲ್ಲಿದ್ದಾರೆ. 'ನೋಡು ಶಿವ..' ಎನ್ನುವ ಸಾಲುಗಳಿಂದ ಪ್ರಾರಂಭವಾಗಿರುವ ಹಾಡನ್ನು ಚಂದನ್ ಅವರೇ ಸಂಗೀತ ನೀಡಿ, ಅವರೇ ಹಾಡಿದ್ದಾರೆ. ಸುಮಿತ್ ಎಂ.ಕೆ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ ಜೊತೆಗೆ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.

ಈ ಹಾಡಿನಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಸಹ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಮೇಘಾ ಸಖತ್ ಗ್ಲಾಮ್ ಆಗಿ ಕಾಣಿಸಿಕೊಂಡಿದ್ದಾರೆ. ಎಎಂಸಿ ಸಿಟಿ ಗ್ರೂಪ್ ಆಫ್ ಇನ್ಸಿಟ್ಯೂಷನ್ ಸೇರಿ ಒಟ್ಟು 9 ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಮತ್ತು ಆ ಸಂಸ್ಥೆಯ ವೈಸ್ ಪ್ರೆಸಿಡೆಂಟ್ ಆಗಿರುವ ಮೋನಿಕಾ ಕಲ್ಲೂರಿ, ಈ ಆಲ್ಬಂ ಹಾಡಿನ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವ ತಯಾರಿಯಲ್ಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮೋನಿಕಾ, ನೋಡು ಶಿವ ಎಂದೇ ಹಾಡು ಶುರುವಾಗಲಿದೆ. ಎಷ್ಟೋ ಜನ ಜೀವನದಲ್ಲಿ ಅಂದುಕೊಂಡಿದ್ದು ಏನೂ ಆಗಿಲ್ಲವಲ್ಲ ಎಂದು ತಮ್ಮನ್ನೇ ತಾವೇ ಶಪಿಸಿಕೊಳ್ಳುತ್ತಿರುತ್ತಾರೆ. ಎಷ್ಟೆ ಶ್ರಮ ಪಟ್ಟರೂ ಅದು ಈಡೇರುವುದಿಲ್ಲ. ಅಂದುಕೊಂಡ ಯಶಸ್ಸು ಸಿಕ್ಕಿರುವುದಿಲ್ಲ. ಈ ಥರದ ಹುಡುಗ ದೇವರ ಹತ್ತಿರ ಹೇಗೆ ಸಂಭಾಷಣೆ ಮಾಡುತ್ತಾನೆ, ತನ್ನ ಗೋಳನ್ನು ಹೇಗೆ ಹೇಳುತ್ತಾನೆ ಎಂಬುದನ್ನು ಫನ್ನಿಯಾಗಿ ಹಾಡಿನಲ್ಲಿ ತೋರಿಸಲಿದ್ದೇವೆ ಎಂದಿದ್ದಾರೆ.

Jothe Jotheyali Serial fame Megha Shetty Album song with Chandan Shetty

ಕನ್ನಡದಲ್ಲಿ ಇಲ್ಲಿಯವರೆಗೂ ಯೂರು ಮಾಡದ ಅದ್ಧೂರಿಯಾದ ಹಾಡನ್ನು ನಾವು ಚಿತ್ರೀಕರಿಸಲಿದ್ದೇವೆ. ಆಲ್ಬಂ ಹಾಡಿನ ವಿಚಾರದಲ್ಲಿ ಕನ್ನಡದಲ್ಲಿ ಈ ಹಿಂದೆಂದೂ ಆಗದ ಒಂದು ಹೊಸತನವನ್ನು ಈ ಹಾಡಿನಲ್ಲಿ ತೋರಸಲಿದ್ದೇವೆ. ಅದ್ಧೂರಿ ವೆಚ್ಚದಲ್ಲಿ ಸಿದ್ಧವಾದಲಿರುವ ಈ ಹಾಡು, ಪರಭಾಷಿಕರಿಗೂ ವಿಶೇಷ ಎನಿಸಲಿದೆ ಸರಿಸುಮಾರು 30 ಲಕ್ಷ ರೂಪಾಯಿ ಬಜೆಟ್ ನಲ್ಲಿ ಈ ಹಾಡು ಸಿದ್ಧವಾಗಲಿದೆ ಎಂದಿದ್ದಾರೆ ಮೋನಿಕಾ.

ಈ ಹಡಿನ ಸಾಹಿತ್ಯ ಕೇಳಿ ಚಂದನ್ ಶೆಟ್ಟಿ ತುಂಬಾ ಇಷ್ಟಪಟ್ಟು, ಎರಡನೇ ಗಂಟೆಯಲ್ಲಿ ಕಂಪೋಸ್ ಮಾಡಿ ಧ್ವನಿಯನ್ನೂ ನೀಡಿದ್ದಾರೆ. ಕಳೆದೊಂದು ತಿಂಗಳಿಂದ ಈ ಹಾಡಿನ ತಯಾರಿ ಕೆಲಸ ಶುರುವಾಗಿದ್ದು, 200 ಜನ ಈ ಹಾಡಿಗೆ ಕೆಲಸ ಮಾಡುತ್ತಿದ್ದಾರೆ. 60 ವೃತ್ತಿಪರ ಡ್ಯಾನ್ಸರ್ ಗಳು ಹೆಜ್ಜೆ ಹಾಕಲಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ನಿರ್ದೇಶದಲ್ಲಿ ಈ ಹಾಡು ಮೂಡಿಬರುತ್ತಿದೆ.

More from Filmibeat

English summary
Jothe Jotheyali fame Actress Megha Shetty Album song with Chandan Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X