Kaatera: 24 ಗಂಟೆಗಳಲ್ಲಿ ಹೆಚ್ಚು ವೀವ್ಸ್, ಲೈಕ್ಸ್ ಗಿಟ್ಟಿಸಿ 'ಪಸಂದಾಗವನೆ' ಸಾಂಗ್ ಹೊಸ ದಾಖಲೆ: ಆದ್ರೆ..

ದರ್ಶನ್ ನಟನೆಯ 'ಕಾಟೇರ' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ರಿಲೀಸ್ ಆಗಿ ಧೂಳೆಬ್ಬಿಸಿದೆ. 24 ಗಂಟೆಗಳಲ್ಲಿ ಅತಿಹೆಚ್ಚು ವೀವ್ಸ್ ಸಾಧಿಸಿದ ಕನ್ನಡ ಸಾಂಗ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ತರುಣ್ ಸುಧೀರ್ ನಿರ್ದೇಶನದ ಹಳ್ಳಿಸೊಗಡಿನ ಅಪ್ಪಟ ಕನ್ನಡ ಸಿನಿಮಾ 'ಕಾಟೇರ'. ರಾಕ್‌ಲೈನ್‌ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಮಿಂಚಿದ್ದಾರೆ. ವಿ. ಹರಿಕೃಷ್ಣ ಸಂಗೀತದಲ್ಲಿ ಚಿತ್ರದ ಮೊದಲ ಸಾಂಗ್ 'ಪಸಂದಾಗವನೆ' ರಿಲೀಸ್ ಆಗಿದೆ. ಅಭಿಮಾನಿಗಳು ಮುಗಿಬಿದ್ದು ಸಾಂಗ್ ನೋಡುತ್ತಿದ್ದಾರೆ.

Kaatera: Pasandaagavne Becomes the most viewed lyrical song of kannada in 24 hours

ಯೂಟ್ಯೂಬ್‌ನಲ್ಲಿ ಸಾಂಗ್‌ ಹೊಸ ದಾಖಲೆ ಬರೆದಿದೆ. ಸದ್ಯ ಟ್ರೆಂಡಿಂಗ್‌ನಲ್ಲಿರುವ ಸಾಂಗ್ ಲಕ್ಷ ಲಕ್ಷ ವೀವ್ಸ್ ಸಾಧಿಸಿ ಮುನ್ನುಗ್ಗುತ್ತಿದೆ. ಆನಂದ್ ಆಡಿಯೋ ಸಂಸ್ಥೆ 'ಕಾಟೇರ' ಚಿತ್ರದ ಆಡಿಯೋ ರೈಟ್ಸ್ ಖರೀಸಿದಿಸಿದೆ. 'ಪಸಂದಾಗವನೆ' ಲಿರಿಕಲ್ ವೀಡಿಯೋ ಸಾಂಗ್ 24 ಗಂಟೆಗಳಲ್ಲಿ 90 ಲಕ್ಷಕ್ಕೂ ಅಧಿಕ ವೀವ್ಸ್(ರಿಯಲ್ ಟೈಮ್) ಸಾಧಿಸಿದೆ. ಅದೇ ರೀತಿ 3 ಲಕ್ಷಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡಿದೆ.

24 ಗಂಟೆಗಳಲ್ಲಿ ಅತಿಹೆಚ್ಚು ವೀವ್ಸ್ ಸಾಧಿಸಿದ ಕನ್ನಡದ ಮೊದಲ ಲಿರಿಕಲ್ ಸಾಂಗ್ ಎನ್ನುವ ದಾಖಲೆ 'ಪಸಂದಾಗವನೆ' ಪಾಲಾಗಿದೆ. 'KGF-2' ಚಿತ್ರದ 'ತೂಫಾನ್' ಸಾಂಗ್ ಬಳಿಕ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಗಿಟ್ಟಿಸಿದ ಸಾಂಗ್ ಎನ್ನುವ ದಾಖಲೆಯೂ 'ಕಾಟೇರ' ಚಿತ್ರದ ಸಾಂಗ್‌ ಹೆಸರಿಗೆ ಸೇರಿದೆ. ಸದ್ಯ ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ. ಆದರೆ ಕೆಲವರು ಮಾತ್ರ ಇದು ಪೇಯ್ಡ್ ವೀವ್ಸ್, ಲೈಕ್ಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವಿ. ಹರಿಕೃಷ್ಣ ಸಂಗೀತದ 'ಪಸಂದಾಗವನೆ' ಸಾಂಗ್‌ಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ತೆಲುಗು ಗಾಯಕಿ ಮಂಗ್ಲಿ ತಮ್ಮ ಕಂಚಿನ ಕಂಠದಲ್ಲಿ ಹಾಡಿದ್ದಾರೆ. ಮುನಿಸಿಕೊಂಡಿರುವ ಕಾಟೇರನನ್ನು ಸಮಾಧಾನ ಮಾಡಲು ಪ್ರಭಾವತಿ ಹಾಡಿ ಕುಣಿಯುವ ಸನ್ನಿವೇಶದಲ್ಲಿ ಈ ಸಾಂಗ್ ಬರುವಂತಿದೆ. ದರ್ಶನ್ ಅಭಿಮಾನಿಗಳಂತೂ ಹಾಡು ಕೇಳಿ ಖುಷಿಯಾಗಿದ್ದು ರಿಪೀಟ್ ಮೋಡ್‌ನಲ್ಲಿ ಕೇಳುತ್ತಲೇ ಇದ್ದಾರೆ.

Kaatera: Pasandaagavne Becomes the most viewed lyrical song of kannada in 24 hours

ಭೂಷಣ್ ಮಾಸ್ಟರ್ 'ಪಸಂದಾಗವನೆ' ಸಾಂಗ್‌ಗೆ ಕೊರಿಯೋಗ್ರಫಿ ಮಾಡಿದ್ದಾರೆ. ಲಂಗಾ ದಾವಣಿಯಲ್ಲಿ ಆರಾಧನಾ ಬಿಂದಾಸ್ ಆಗಿ ಹಾಡಿ ಕುಣಿದಿದ್ದಾರೆ. ಮೇಲುಕೋಟೆ ಸುತ್ತಾ ಮುತ್ತಾ ಸಾಂಗ್ ಶೂಟಿಂಗ್ ಮಾಡಲಾಗಿದೆ. ಸುಧಾಕರ್ ರಾಜ್ ಮತ್ತವರ ತಂಡ ಬಹಳ ಸೊಗಸಾಗಿ ಸಾಂಗ್ ಸೆರೆ ಹಿಡಿದಿದ್ದಾರೆ.

'ಕಾಟೇರ' ಚಿತ್ರದಲ್ಲಿ 70 ದಶಕದ ಕತೆ ಹೇಳಲಾಗುತ್ತಿದೆ. ಬರೀ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ದರ್ಶನ್ ಹೊಸ ಪ್ರಯೋಗ ಮಾಡುತ್ತಿದ್ದಾರೆ. ತರುಣ್ ಸುಧೀರ್ ಒಂದೊಳ್ಳೆ ಕತೆ ಸಿದ್ಧಪಡಿಸಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. 'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಸುತ್ತಾ ಸಿನಿಮಾ ಕತೆ ಸಾಗುತ್ತದೆ.

ವರ್ಷದ ಕೊನೆಗೆ ರಿಲೀಸ್ ಆಗಿರುವ ಕನ್ನಡ ಸಿನಿಮಾಗಳು ಸೂಪರ್ ಹಿಟ್ ಆಗಿದೆ. 'ಕಾಟೇರ' ಸಹ ಅದೇ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು 'ಸಲಾರ್' ಹಾಗೂ 'ಡಂಕಿ' ರೀತಿಯ ದೊಡ್ಡ ಸಿನಿಮಾಗಳ ರಿಲೀಸ್ ಬೆನ್ನಲ್ಲೇ 'ಕಾಟೇರ' ಬರ್ತಿರೋದು ಕೊಂಚ ಮಟ್ಟಿಗೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆದರೆ ಚಿತ್ರತಂಡ ಮಾತ್ರ ಸಿನಿಮಾ ಮೇಲೆ ಬಹಳ ಭರವಸೆಯಿಂದ ಇದ್ದು ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಡಿಸೆಂಬರ್ 23ರಂದು ರೈತರ ದಿನದ ವಿಶೇಷವಾಗಿ 'ಕಾಟೇರ' ಟ್ರೈಲರ್ ರಿಲೀಸ್ ಆಗುವ ಸಾಧ್ಯತೆಯಿದೆ. ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆ ಆರಂಭಿಸಿದ್ದಾರೆ.

More from Filmibeat

English summary
Pasandaagavne Lyrical Video from Kaatera Crossed 9.1 million Views in 24 hours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X