ಎಷ್ಟೊಂದು ಮುದ್ದಾಗಿದೆ ನೋಡಿ ಕಳ್ಬೆಟ್ಟದ ಕಮಲಿ ಹಾಡು
''ಹೋಯ್ ಕಮಲಿ ಬಸ್ಸಿನಗೆ ಹೋಗುವ.. ಹೋಯ್ ಕಮಲಿ ಅಕ್ಕ ಪಕ್ಕ ಕೂರುಮ..'' ವಾವ್ ಎಷ್ಟೊಂದು ಮುದ್ದಾಗಿದೆ ಈ ಸಾಲುಗಳು. ಇಂತಹ ಸುಂದರ ಸಾಲುಗಳಿಂದ ಕೂಡಿದ ಒಂದು ಹಾಡು ನಿನ್ನೆ ಬಿಡುಗಡೆಯಾಗಿದೆ.
'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ಎರಡನೇ ಹಾಡು ನಿನ್ನೆ ರಿಲೀಸ್ ಆಗಿದೆ. ಗಣೇಶನ ಹಾಡಿನ ನಂತರ ನಿರ್ದೇಶಕ ದೀಪಕ್ ಮದುವನಹಳ್ಳಿ ಕಮಲಿಯ ಪರಿಚಯ ಮಾಡಿಸಿದ್ದಾರೆ. ಹಾಡು ಕೇಳಿದ ತಕ್ಷಣ ಇಷ್ಟ ಆಗಿ ಬಿಡುತ್ತದೆ.

ವಿ ನಾಗೇಂದ್ರ ಪ್ರಸಾದ್ ಈ ಹಾಡನ್ನು ಬರೆದಿದ್ದಾರೆ. ಅದೆಷ್ಟೋ ಪ್ರೇಮ ಗೀತೆ ಬರೆದಿರುವ ನಾಗೇಂದ್ರ ಪ್ರಸಾದ್ ತುಂಬ ಹೊಸ ರೀತಿಯ ಸಾಲುಗಳನ್ನು ಮತ್ತೆ ಪ್ರಯತ್ನ ಮಾಡಿದ್ದಾರೆ. ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ. ನಾರಾಯಣ್ ಶರ್ಮಾ ಹಾಗೂ ವರಿಜಶ್ರೀ ವೇಣುಗೋಪಾಲ್ ಧ್ವನಿ ಹಾಡಿನ ಅಂದ ಹೆಚ್ಚು ಮಾಡಿದೆ.
ನಟ ನಟರಾಜ್ ಹಾಗೂ ಶ್ವೇತ ಪ್ರಸಾದ್ ಇಬ್ಬರ ಜೋಡಿ ತುಂಬ ಕ್ಯೂಟ್ ಆಗಿದೆ. ಇಬ್ಬರ ಎಕ್ಸ್ ಪ್ರೆಷನ್ ಗಳು ಹಾಡಿನ ಹೈಲೆಟ್ ಆಗಿದೆ. ಸಿನಿಮಾದ ಮೇಲೆ ಇದ್ದ ನಿರೀಕ್ಷೆಯನ್ನು ಈ ಹಾಡು ಹೆಚ್ಚು ಮಾಡಿದೆ.
ತಮ್ಮ ಹಾಡುಗಳು ಮೂಲಕ ಒಂದೊಳ್ಳೆ ಸಿನಿಮಾ ಮಾಡಿರುವ ಸೂಚನೆಯನ್ನು ನಿರ್ದೇಶಕ ದೀಪಿಕ್ ಮದುವನಹಳ್ಳಿ ನೀಡಿದ್ದಾರೆ. ಬ್ರಿಡ್ಜ್ ಫಿಲ್ಮ್ಸ್ ಹಾಗೂ ಜಿ ಪಿ ಮ್ಯೂಸಿಕ್ ಸಹಭಾಗಿತ್ವದಲ್ಲಿ ಚಿತ್ರ ನಿರ್ಮಾಣವಾಗಿದೆ. ಇದೇ ತಿಂಗಳು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications











