'ಕಂಬ್ಳಿ ಹುಳ' ಹೊಸ ಹುಡುಗರ ಪ್ರಾಮಾಣಿಕ ಪ್ರಯತ್ನ: ಹೊಸ ಹಾಡು ಬಿಡುಗಡೆ

ಹೊಸ ಹುಡುಗರ ಹೊಸ ಪ್ರಯತ್ನ 'ಕಂಬ್ಳಿ ಹುಳ' ಸಿನಿಮಾದ ಹಾಡೊಂದು ಇಂದು (ಬುಧವಾರ) ಬಿಡುಗಡೆ ಆಗಿದೆ. ಹಾಡು ಗಮನ ಸೆಳೆಯುತ್ತಿದ್ದು, ಸಿನಿಮಾದ ಬಗ್ಗೆ ಕುತೂಹಲ ಹುಟ್ಟಿಸುತ್ತಿದೆ.

ಯುವಮನಸ್ಸುಗಳು ಎಳೆಯ ಪ್ರೇಮಕತೆಯುಳ್ಳ ಸಿನಿಮಾ ಎಂಬುದನ್ನು ಹಾಡು ಸಾರಿ ಹೇಳುತ್ತಿದ್ದು, ವಿಜಯಪ್ರಕಾಶ್ ಹಾಡಿರುವ 'ಜಾರಿ ಬಿದ್ದರೂ ಯಾಕೀ ನಗು' ಹಾಡು ನೆನಪುಳಿಯುವಂತಿದೆ.

ಆಗಷ್ಟೆ ಪ್ರೇಮ ಹುಟ್ಟಿರುವ ಯುವ ಜೋಡಿಗಳಿಬ್ಬರ ಪ್ರೀತಿಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದ್ದು, ಹಾಡಿನ ಮುನ್ನೆಲೆಯಲ್ಲಿ ಬಳಸಿರುವ ದೃಶ್ಯಗಳು ಫೀಲ್ ಗುಡ್ ಅನುಭೂತಿ ಬೀಡುತ್ತಿವೆ. ಸರಳವಾಗಿ ಆದರೆ ಸುಂದರವಾಗಿ ಹಾಡನ್ನು ಸೆರೆಹಿಡಿಯಲಾಗಿದೆ.

Kamblihula Kannada Movie New Song Released On Anand Audio

ವಿಜಯ್ ಪ್ರಕಾಶ್ ಹಾಗೂ ಸಂಗೀತ ರವೀಂದ್ರನಾಥ್ ಹಾಡಿರುವ ಈ ಯುಗಳ ಗೀತೆ ನೋಡುಗರನ್ನು ತಮ್ಮ ಶಾಲಾ-ಕಾಲೇಜು ದಿನಗಳಿಗೆ ಕರೆದುಕೊಂಡು ಹೋಗುವುದಂತೂ ಪಕ್ಕಾ. ಹಾಡಿನಲ್ಲಿ ಬಳಸಿರುವ ಮಕ್ಕಳ ಧ್ವನಿ ಹಾಡಿಗೆ ಇನ್ನಷ್ಟು ಸುಂದರಗೊಳಿಸಿದೆ.

ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ನಟಿಸಿರುವ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆಯವರ ನಟನೆ, ಮುಗ್ಧತೆಯೂ ಸೆಳೆಯುತ್ತದೆ. ಜೊತೆಗೆ ಹಾಡಿಗೆ ನೀಡಿರುವ ಸರಳತೆಯ ಟಚ್ ಅದನ್ನು ನೋಡುಗರಿಗೆ ಇನ್ನಷ್ಟು ಆಪ್ತಗೊಳಿಸುತ್ತದೆ. ಮಹದೇವ್ ಅವರ ಸುಂದರವಾದ ಸಾಹಿತ್ಯಕ್ಕೆ ಶಿವಪ್ರಸಾದ್ ಮಧುರವಾದ ಸಂಗೀತ ಒದಗಿಸಿದ್ದಾರೆ.

'ಕಂಬ್ಳಿಹುಳ' ಸಿನಿಮಾಕ್ಕೆ ಹಲವು ಸಿನಿಮಾ ತಾರೆಯರು ಶುಭಾಶಯ ಕೋರಿದ್ದು, ''ನಾನು ಈ ಹಾಡು ಹಾಡಬೇಕಾದರೆ ಬಹಳ ಎಂಜಾಯ್ ಮಾಡಿದೆ. ಹಾಡಿಗೆ ಬಳಸಿರುವ ದೃಶ್ಯಗಳಂತೂ ನನಗೆ ಬಹಳ ಹಿಡಿಸಿದವು. ನಟರಾದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಇಡೀ ತಂಡಕ್ಕೆ ಶುಭಾಶಯಗಳು, ಈ ತಂಡ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳನ್ನು ನೀಡಲಿ'' ಎಂದು ಹಾರೈಸಿದ್ದಾರೆ ಗಾಯಕ ವಿಜಯಪ್ರಕಾಶ್.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ''ಹಾಡು ಬಹಳ ಭಿನ್ನವಾಗಿದೆ. ತಮಾಷೆಯಿಂದ ಕೂಡಿದ ಒನ್‌ ಲೈನರ್‌ಗಳನ್ನು ಇಟ್ಟುಕೊಂಡು ಭಿನ್ನವಾಗಿ ಹಾಡು ಕಟ್ಟಿದ್ದಾರೆ. ಮಕ್ಕಳ ಧ್ವನಿ ಬಳಸಿಕೊಂಡಿರುವುದು ಸಹ ಚೆನ್ನಾಗಿದೆ. ಬಹಳ ಭಿನ್ನವಾಗಿ ದೃಶ್ಯಗಳನ್ನು ಕಟ್ಟಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ'' ಎಂದಿದ್ದಾರೆ.

'ದಿಯಾ' ಸಿನಿಮಾ ಖ್ಯಾತಿಯ ನಟರಾದ ದೀಕ್ಷಿತ್ ಹಾಗೂ ಪೃಥ್ವಿ ಅಂಬರ್ ಅವರುಗಳು ಸಹ ಹಾಡನ್ನು ಮೆಚ್ಚಿಕೊಂಡಿದ್ದು, ಸಿನಿಮಾ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಸಿನಿಮಾವನ್ನು ನವನ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸವೀನ್, ಪುನೀತ್, ಗುರು ಮತ್ತು ವಿಜಯ್.

More from Filmibeat

English summary
Kamblihula Kannada movie new song released on Anand Audio. Navan Shrinivas directed the movie. Singer Vijayprakash and many other celebrities wish the team best of luck.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X