»   » ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ 'ಕನಕ'ನ ಎಣ್ಣೆ ಹಾಡು

ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ 'ಕನಕ'ನ ಎಣ್ಣೆ ಹಾಡು

Posted By:
Subscribe to Filmibeat Kannada

ದುನಿಯಾ ವಿಜಯ್ ನಟನೆಯ 'ಕನಕ' ಸಿನಿಮಾದ ಒಂದು ವಿಡಿಯೋ ಹಾಡು ಬಿಡುಗಡೆಯಾಗಿದೆ. ಸಿನಿಮಾ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದ್ದು, ಸದ್ಯಕ್ಕೆ ಚಿತ್ರದ ಪ್ರಮೋಷನ್ ಹಾಡು ರಿಲೀಸ್ ಆಗಿದೆ.

ಅಣ್ಣಾವ್ರ ಅಭಿಮಾನಿ 'ಕನಕ'ನಿಗೆ ಹೆಚ್ಚಾಯ್ತು ಡಿಮ್ಯಾಂಡ್

ಈ ಹಾಡಿನಲ್ಲಿ ಸಂಗೀತ ನಿರ್ದೇಶಕ ನವೀನ್ ಸಜ್ಜು ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಈ ಹಾಡಿನ್ನು ಅವರೇ ಹಾಡಿ, ಮ್ಯೂಸಿಕ್ ಮತ್ತು ಸಾಹಿತ್ಯ ಬರೆದಿದ್ದಾರೆ. ಪಕ್ಕಾ ಲೋಕಲ್ ಹಾಡು ಇದಾಗಿದೆ.

'Kanaka' movie song released

ಈಗಾಗಲೇ ಗಾಂಧಿನಗರಕ್ಕೆ ಅನೇಕ ಎಣ್ಣೆ ಹಾಡುಗಳು ಬಂದಿದ್ದು, ಈ ಹಾಡು ಕೂಡ ಈಗ ಆ ಸಾಲಿಗೆ ಸೇರಿದೆ. ಯೂಟ್ಯೂಬ್ ನಲ್ಲಿ ಈ ಹಾಡು ಈಗ ಸದ್ದು ಶುರು ಮಾಡಿದೆ.

ಅಂದಹಾಗೆ, 'ಕನಕ' ಚಿತ್ರವನ್ನು ಆರ್.ಚಂದ್ರು ನಿರ್ದೇಶನ ಮಾಡಿದ್ದಾರೆ. ದುನಿಯಾ ವಿಜಯ್, ಮಾನ್ವಿತಾ ಹರೀಶ್ ಮತ್ತು ಹರಿಪ್ರಿಯಾ ನಟಿಸಿದ್ದಾರೆ. ವಿಜಿ ಚಿತ್ರದಲ್ಲಿ ರಾಜ್ ಕುಮಾರ್ ಅಭಿಮಾನಿಯಾಗಿ ಆಟೋ ಡ್ರೈವರ್ ಪಾತ್ರದಲ್ಲಿ ಮಿಂಚಿದ್ದಾರೆ.

English summary
Duniya Vijay's 'Kanaka' kannada movie song released. The movie directed by R.Chandru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X