For Quick Alerts
  ALLOW NOTIFICATIONS  
  For Daily Alerts

  ಜೋಶ್ ಜೊತೆ ಕೈ ಜೋಡಿಸಿದ ಆಲ್‌ಓಕೆ! 'ಮಲ್ಲಿಗೆ ಹೂವೆ' ಟ್ರೆಂಡ್‌ನಲ್ಲಿ ನೀವೂ ಭಾವಹಿಸಿ

  |

  ಕನ್ನಡದಲ್ಲಿ ರ್ಯಾಪ್ ಸಂಸ್ಕೃತಿ ಪ್ರಾರಂಭವಾಗಿ ದಶಕಕ್ಕೂ ಮೇಲಾಗಿದೆ. ಹಲವು ಮಂದಿ ರ್ಯಾಪ್ ಗಾಯಕರು ಕನ್ನಡದಲ್ಲಿ ಹಿಟ್ ಆಗಿದ್ದಾರೆ. ಅವರಲ್ಲಿ ಅಲೋಕ್ ಪ್ರಮುಖರು. ಅಲೋಕ್ ಎಂದರೆ ಹೆಚ್ಚು ಜನಕ್ಕೆ ಗೊತ್ತಾಗದು, ಅದೇ ಆಲ್‌ ಓಕೆ ಎಂದರೆ ಥಟ್ಟನೆ ನೆನಪಾಗುತ್ತಾರೆ.

  ಆಲ್‌ ಓಕೆ ಇದೀಗ ಕನ್ನಡದ ಜನಪ್ರಿಯ ಕಿರು ವೀಡಿಯೋ ಅಪ್ಲಿಕೇಶನ್ ಜೋಶ್‌ ಜೊತೆ ಕೈಜೋಡಿಸಿದ್ದಾರೆ.

  ಆಲ್ ಓಕೆಯು ತಮ್ಮ ಹಾಡು 'ಮಲ್ಲಿಗೆ ಹೂವೆ'ಯನ್ನು ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿದ್ದಾರೆ. ಹಾಡಿನಲ್ಲಿ ಖ್ಯಾತ ನಟಿ ಆಶಿಕಾ ರಂಗನಾಥ್ ಅಂದವಾಗಿ ಡ್ಯಾನ್ಸ್‌ ಮಾಡಿದ್ದಾರೆ. ಬಹುಪಾಲು ಯಾಟ್ಚ್‌ ಒಂದರ ಮೇಲೆಯೇ ಚಿತ್ರೀಕರಣ ಮಾಡಲಾಗಿರುವ ಈ ಹಾಡು ಸೂಪರ್ ರಿಚ್ ಆಗಿ ಮೂಡಿ ಬಂದಿದೆ.

  ಹಾಡು ಈಗಾಗಲೇ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಜೋಶ್‌ ಕಿರು ವಿಡಿಯೋ ಅಪ್ಲಿಕೇಶನ್‌ನಲ್ಲಿಯೂ ಸಹ ಹಲವು ಕಂಟೆಂಟ್ ಕ್ರಿಯೇಟರ್‌ಗಳು 'ಮಲ್ಲಿಗೆ ಹೂವು' ಹಾಡನ್ನು ಟ್ರೆಂಡ್ ಮಾಡುತ್ತಿದ್ದು, ಹಾಡಿನಲ್ಲಿ ಆಶಿಕಾ-ಆಲ್ ಓಕೆ ಕುಣಿದಂತೆ ಸ್ಟೆಪ್ ಹಾಕಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  ಇದೀಗ ಆಲ್ ಓಕೆ ಸಹ ಜೋಶ್ ಜೊತೆ ಕೈ ಜೋಡಿಸಿದ್ದು, 'ಮಲ್ಲಿಗೆ ಹೂವೆ' ಹಾಡಿನ ಟ್ರೆಂಡ್‌ನಲ್ಲಿ ಭಾಗವಹಿಸಿ ಚೆನ್ನಾಗಿ ವಿಡಿಯೋ ಪೋಸ್ಟ್‌ ಮಾಡಿದ ಕೆಲವರಿಗೆ ಆಲ್‌ ಓಕೆಯನ್ನು ಭೇಟಿ ಮಾಡುವ ಅವಕಾಶ ಲಭ್ಯವಾಗಲಿದೆ. ಅಲ್ಲದೆ ಆಲ್‌ ಓಕೆ ಜೊತೆ ವಿಡಿಯೋ ಮಾಡಿಕೊಳ್ಳುವ ಅವಕಾಶವೂ ಸಹ ಲಭ್ಯವಾಗಲಿದೆ.

  #malligehoova campaign ಟ್ರೆಂಡ್ ಕಳೆದ ಹದಿನೈದು ದಿನದಿಂದಲೂ ಚಾಲ್ತಿಯಲ್ಲಿದ್ದು, ಕಂಟೆಂಟ್ ಕ್ರಿಯೇಟರ್‌ಗಳು 'ಮಲ್ಲಿಗೆ ಹೂವೆ' ಹಾಡಿನ ಹುಟ್‌ ಸ್ಟೆಪ್‌ಗೆ ಹೆಜ್ಜೆ ಹಾಕಿ ಆ ವಿಡಿಯೋವನ್ನು ಹಂಚಿಕೊಳ್ಳಬಹುದು ಅಥವಾ ಆಲ್‌ ಓಕೆಯ ವಿಡಿಯೋ ಜೊತೆ ಡ್ಯುಯೆಟ್ ಮಾಡಿ ವಿಡಿಯೋ ಹಂಚಿಕೊಳ್ಳಬಹುದಾಗಿದೆ.

  ಆಲ್ ಓಕೆ ಸಹ ಸ್ವತಃ ಅದ್ಭುತ ಕಂಟೆಂಟ್ ಕ್ರಿಯೇಟರ್‌ ಆಗಿದ್ದು, ಹೊಸ ಕಂಟೆಂಟ್ ಕ್ರಿಯೇಟರ್‌ಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರೊಟ್ಟಿಗೆ ನೇರವಾಗಿ ಕೊಲ್ಯಾಬರೇಶನ್ ಮಾಡುವ ಅವಕಾಶ ಇದೀಗ ಜೋಶ್‌ನ ಕಂಟೆಂಟ್ ಕ್ರಿಯೇಟರ್‌ಗಳಿಗೆ ಒದಗಿ ಬಂದಿದೆ. ಬಿಲೀವ್ ಆರ್ಟಿಸ್ಟ್‌ ಅವರ ಮೂಲಕ ಈ ಕೊಲ್ಯಾಬರೇಶನ್ ನಡೆಯಲಿದೆ.

  https://www.instagram.com/reel/CjMxVxIsyhF/

  https://www.instagram.com/reel/CjA5pFmMNIt/

  https://www.instagram.com/reel/CjMmB8nJCp-/

  English summary
  Populor Kannada rapper and singer All Ok came on board with Josh for his new song Mallige Hoove.
  Monday, October 3, 2022, 14:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X