ಭೂತಃಕಾಲದ 'ಕನಿಕರವಿರದ' ಹಾಡು ನೋಡಿ ಥ್ರಿಲ್ ಆದ ಶಿವಣ್ಣ
ಶೀರ್ಷಿಕೆ ಹಾಗೂ ಟೀಸರ್ ನಿಂದ ಹೊಸದೊಂದು ರೀತಿಯ ಕುತೂಹಲ ಮೂಡಿಸಿರುವ 'ಭೂತಃಕಾಲ' ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಆಡಿಯೋ ಕೂಡ ರಿಲೀಸ್ ಮಾಡಿದ್ದು, ಒಂದಕ್ಕಿಂತ ಒಂದು ಹಾಡುಗಳು ವಿಶೇಷವಾಗಿದೆ.
ಸದ್ಯ 'ಪರಿಶುದ್ಧ ಹೃದಯದಲ್ಲಿ' ವಿಡಿಯೋ ಸಾಂಗ್ ರಿಲೀಸ್ ಮಾಡಿ ಗಮನ ಸೆಳೆದಿದ್ದ ಭೂತಃಕಾಲ, ಈಗ ಎರಡನೇ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದೆ.
ವಿಜಯ್ ಪ್ರಕಾಶ್ ಹಾಡಿರುವ 'ಕನಿಕರವಿರದ' ಹಾಡಿನ ವಿಡಿಯೋ ವರ್ಷನ್ ಬಂದಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟಿ ಹರಿಪ್ರಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದ್ರೆ 3ಡಿ ಎಫೆಕ್ಟ್ ನಲ್ಲಿ ಈ ಹಾಡು ಮೂಡಿ ಬಂದಿದ್ದು, ಕೇಳುಗರಿಗೆ ಹೊಸದೊಂದು ಅನುಭವ ನೀಡುವಂತಿದೆ.

ಸಚಿನ್ ಬಾದ ಅವರು ಬರೆದಿರುವ ಸಾಹಿತ್ಯಕ್ಕೆ ಪ್ರಮೋದ್ ಸೂರ್ಯ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಸ್ವತಃ ವಿಜಯ್ ಪ್ರಕಾಶ್ ಅವರೇ ಈ ಹಾಡಿನ ಬಗ್ಗೆ ಮೆಚ್ಚುಗೆ ಹಾಗೂ ಖುಷಿ ವ್ಯಕ್ತಪಡಿಸಿದ್ದರು.
ಇನ್ನುಳಿದಂತೆ ಭೂತಃಕಾಲ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ಸಚಿನ್ ಬಾದ ಅವರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಆನಂದ್ ಗಣೇಶ್, ರಕ್ಷಿತಾ ಬಂಗೇರಾ ಹಾಗೂ ಅನನ್ಯ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ ಆಡಿಯೋ ಸಂಸ್ಥೆ ಆಡಿಯೋ ಹಕ್ಕು ಖರೀದಿಸಿದೆ. ಹಂಸ ಶ್ರೀಕಾಂತ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











